ಮೈಸೂರು . ಶಾಸಕರ ಎಸ್.ಎಫ್.ಸಿ ಅನುದಾನದಲ್ಲಿ ಕೈಗೊಂಡಿರುವ ಕೆಳಕಂಡ ಕಾಮಗಾರಿಗಳ ಚಾಲನೆಗಾಗಿ ಭೂಮಿ ಪೂಜಾ ಕಾರ್ಯಕ್ರಮಗಳನ್ನು ಮಾನ್ಯ ಶಾಸಕರಾದ ಶ್ರೀ ಎಲ್. ನಾಗೇಂದ್ರರವರು ವಾರ್ಡ ನಂ-42 ರ ಮಹಾನಗರ ಪಾಲಿಕೆ ಸದಸ್ಯರಾದ ಶ್ರೀ ಶಿವಕುಮಾರ್ ರವರ ಉಪಸ್ಥಿತಿಯಲ್ಲಿ ನೆರವೇರಿಸಿದರು.
- * ವಾರ್ಡ್ ನಂ-42 ರ ಕೆ.ಜಿ.ಕೊಪ್ಪಲಿನ 1ನೇ 4ನೇ ಕ್ರಾಸ್ ರಸ್ತೆಗಳಿಗೆ ಕಾಂಕ್ರಿಟ್ ರಸ್ತೆ & ಆರ್.ಸಿ.ಸಿ ಡೆಕ್ ಸ್ಲ್ಯಾಬ್ ನಿರ್ಮಾಣ ಕಾಮಗಾರಿಯ ಮೊತ್ತ ರೂ 25.00 ಲಕ್ಷಗಳ* ಕಾಮಗಾರಿಯ ಭೂಮಿ ಪೂಜೆ ನೆರವೇರಿಸಲಾಯಿತು.
- ನಂ-42 ರ ಕಾಂತರಾಜು ಅರಸು ರಸ್ತೆಯ ಅಗ್ನಿಶಾಮಕ ಕಟ್ಟಡದ ಮುಂಬಾಗ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿಯ ಮೊತ್ತ ರೂ 15.00 ಲಕ್ಷಗಳ ಕಾಮಗಾರಿಯ ಭೂಮಿ ಪೂಜೆಯನ್ನು ನೆರವೇರಿಸಲಾಯಿತು.
ಈ ಭೂಮಿ ಪೂಜೆಯ ಕಾರ್ಯಕ್ರಮದಲ್ಲಿ ವಾರ್ಡ್ ನಂ-42 ರ ಮಹಾನಗರ ಪಾಲಿಕೆ ಸದಸ್ಯರಾದ ಶ್ರೀ ಶಿವಕುಮಾರ್, ಶ್ರೀ ಬಲರಾಮ್, ಶ್ರೀ ದೇವರಾಜ್, ಶ್ರೀ ರವಿ, ಚಾಮರಾಜ ಕ್ಷೇತ್ರದ ಭಾ.ಜ.ಪ ಪ್ರಧಾನ ಕಾರ್ಯದಶಿ ಶ್ರೀ ಪುನೀತ್, ಶ್ರೀ ರವಿಗೌಡರವರು, ಶ್ರೀ ಬಸವಣ್ಣ, ಶ್ರೀ ಕೃಷ್ಣಪ್ಪ, ಶ್ರೀ ಚನ್ನಪ್ಪರವರು, ಶ್ರೀ ಶಂಭಣ್ಣ, ಶ್ರೀಮತಿ ಜ್ಯೋತಿ, ಕೆ.ಜಿ.ಕೊಪ್ಪಲು ಗ್ರಾಮಸ್ಥರು ಹಾಗೂ ಮಮತ ಮುಂತಾದವರು ಹಾಜರಿದ್ದರು.
99002-21199