ಚಾಮುಂಡಿಬೆಟ್ಟದಲ್ಲಿ 8 ರಿ0ದ ಎಂದಿನಂತೆ ಪೂಜೆ ಆರಂಭ

633
Share

ಮೈಸೂರು ಎಂಟರಿಂದ ದೇವಾಲಯಗಳನ್ನು ತೆಗೆಯಲು ಅನುಮತಿ ನೀಡಿರುವ ಕೇಂದ್ರ ಸರ್ಕಾರ ಹಿನ್ನೆಲೆಯಲ್ಲಿ ಚಾಮುಂಡಿಬೆಟ್ಟದ ದೇವಸ್ಥಾನ ಎಂದಿನಂತೆ ಪೂಜೆ-ಪುನಸ್ಕಾರ ದಿಂದ ಆರಂಭಗೊಳ್ಳಲಿದೆ ಎಂದು ದೇವಸ್ಥಾನದ ಮುಖ್ಯಸ್ಥರಾದ ದೀಕ್ಷಿತರು ತಿಳಿಸಿದರು ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ದೇವಸ್ಥಾನದ ಪೂಜೆ ನಿಂತಿರಲಿಲ್ಲ ಹೀಗಾಗಿ ಯಾವುದೇ ವಿಶೇಷ ಪೂಜೆ ಮಾಡುವ ಅಗತ್ಯ ಏನು ಇಲ್ಲ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಸ್ಪಷ್ಟಪಡಿಸಿದರು.
ಜಿಲ್ಲಾ ಆಡಳಿತ ಮಾರ್ಗದರ್ಶನದಂತೆ ಸೋಮವಾರದಿಂದ ಪೂಜೆ ಆರಂಭವಾಗಲಿದ್ದು ಯಾವುದೇ ರೀತಿ ಬದಲಾವಣೆ ಇರುವುದಿಲ್ಲ ಎಂದು ಅವರು ತಿಳಿಸಿದರು ಈಗಾಗಲೇ ತಿಳಿಸಿರುವ ಹಾಗೆ ಮಾಸ್ ಕಡ್ಡಾಯ ಸಾಮಾಜಿಕ ಅಂತರ ಮುಂತಾದ ನೀತಿ-ನಿಯಮಗಳು ಜಾರಿಯಲ್ಲಿರುತ್ತದೆ ಎಂದು ಅವರು ಹೇಳಿದರು.


Share