ಮೈಸೂರು ಮುಂಜಾನೆಯ ಮಂಜಿನ ಮುಸುಕಿನಲ್ಲಿ ಇಂದು ಚಾಮುಂಡಿ ಬೆಟ್ಟ ಮೆಟ್ಟಿಲೇರಿದ ಸಂಸದರಾದ ಶೋಭಾ ಕರಂದ್ಲಾಜೆ.
ಮೈಸೂರು ಕೊರೋನ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಾಡ ದೇವತೆ ವಿಶ್ವವಿಖ್ಯಾತ ಚಾಮುಂಡೇಶ್ವರಿ ದೇವಿ ದರ್ಶನಕ್ಕೆ ನಿರ್ಬಂಧ ಹೇರಲಾಗಿತ್ತು . ಆದರೂ ಆಶಾಡ ಮಾಸದ ಯಾವುದೇ ಶುಕ್ರವಾರ ಸಮಸ್ಯೆ ಆಗದಂತೆ ದೇವಿಗೆ ಎಂದಿನಂತೆ ಪೂಜಾ ವಿಧಿವಿಧಾನ ಕಾರ್ಯಕ್ರಮಗಳು ಸುಗಮವಾಗಿ ಜಿಲ್ಲಾ ಆಡಳಿತದ ಮಾರ್ಗಸೂಚಿಯಂತೆನಡೆಸಲಾಯಿತು. ದೇವಿ ದರ್ಶನಕ್ಕೆ ನಿರ್ಬಂಧ ಇದ್ದರೂ ಕೆಲವು ಗಣ್ಯಾತಿಗಣ್ಯರು, ರಾಜಕಾರಣಿಗಳು, ವಿವಿಧ ಇಲಾಖೆಯ ಅಧಿಕಾರಿಗಳು,ಮತ್ತು ಕೆಲವರು ಶಿಫಾರಸಿನ ಮೇರೆಗೆ ದೇವಿ ದರ್ಶನವನ್ನು ಪಡೆದರು. ಜಿಲ್ಲಾಡಳಿತದ ಮಾರ್ಗಸೂಚಿಯಂತೆ ಪಾಲಿಸದೆ ಇದ್ದ ದೃಶ್ಯಗಳು ಕಂಡುಬಂದವು. ಇದರ ಬಗ್ಗೆ ಮಾಧ್ಯಮಗಳು ಬೆಟ್ಟು ಮಾಡಿ ತೋರಿಸಿದಾಗ ಚಾಮುಂಡಿಬೆಟ್ಟಕ್ಕೆ ಮಾಧ್ಯಮದವರಿಗೆ ನಿರ್ಬಂಧ ಹೇರಲಾಯಿತು.