ಚಾಮುಂಡೇಶ್ವರಿ ಉತ್ಸವ ಮೂರ್ತಿ ಪ್ರದಕ್ಷಿಣೆ.

ಮೈಸೂರು ,
ನಾಡದೇವತೆ ಚಾಮುಂಡೇಶ್ವರಿ ದೇವಿ ಉತ್ಸವ ಮೂರ್ತಿ ಪ್ರದಕ್ಷಣೆ ಕಾರ್ಯಕ್ರಮ ಎಂದಿನಂತೆ ನಡೆಯಿತು ಬೆಳಗ್ಗೆ ವಿಧಿ ವಿಧಾನದ ಪ್ರಕಾರ ಪ್ರದಕ್ಷಿಣೆ ಕಾರ್ಯಕ್ರಮ ಮುಗಿದ ನಂತರ ದೇವಾಲಯವನ್ನು ಮುಚ್ಚಲಾಯಿತು ಎಂದು ಹೇಳಲಾಗಿದೆ.
ದೇವಸ್ಥಾನದ ಆಡಳಿತ ಮಂಡಳಿ ಮತ್ತು ಅರ್ಚಕರ ತಂಡದವರು ದೇವಸ್ಥಾನದಲ್ಲಿ ಭಾಗವಹಿಸಿದ್ದರು ಎಂದು ಹೇಳಲಾಗಿದೆ. ಚಾಮುಂಡಿ ಬೆಟ್ಟದ ಮೇಲೆ ಬಿಕೋ ಎನ್ನುತ್ತಿದ್ದ ವಾತಾವರಣ ಕಂಡು ಬಂದಿತು.