ಚಿಕ್ಕಮಗಳೂರಿನಲ್ಲಿ 17 ಕೋಟಿ ಮೌಲ್ಯದ ಚಿನ್ನ ವಶ

Share

ಚಿಕ್ಕಮಗಳೂರಿನ ತರಿಕೆರೆಯ ಎಂಸಿ ಹಳ್ಳಿ ಚೆಕ್ ಪೋಸ್ಟ್‌ನಲ್ಲಿ ಶುಕ್ರವಾರ ಲಾಜಿಸ್ಟಿಕ್ ವಾಹನದಲ್ಲಿ ಸುಮಾರು 6.44 ಕೋಟಿ ಮೌಲ್ಯದ 17 ಕೆಜಿ ಚಿನ್ನ ಪತ್ತೆಯಾಗಿದೆ.
ಪೊಲೀಸರ ಪ್ರಕಾರ, ಸೀಕ್ವೆಲ್ ಲಾಜಿಸ್ಟಿಕ್ಸ್‌ಗೆ ಸೇರಿದ ವಾಹನದಲ್ಲಿ ಚಿನ್ನವು ಪತ್ತೆಯಾಗಿದೆ. ಇದಕ್ಕೆ ಯಾವುದೇ ಸೂಕ್ತ ದಾಖಲೆಗಳಿಲ್ಲದೆ ಚಿನ್ನವನ್ನು ಸಾಗಿಸಲಾಗುತ್ತಿದ್ದು ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ತರೀಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೋಲೀಸ್ ಇಲಾಖೆ ತಿಳಿಸಿದೆ.


Share