ಚಿಲ್ಲರೆ ರಾಜಕಾರಣ ಮಾಡುತ್ತಿವೆ ವಿರೋಧಪಕ್ಷಗಳು ರಾಜ್ಯ ಬಿಜೆಪಿ ಅಧ್ಯಕ್ಷ .

ಮೈಸೂರು ರಾಜ್ಯದಲ್ಲಿ ವಿರೋಧಪಕ್ಷಗಳು ಚಿಲ್ಲರೆ ರಾಜಕಾರಣ ಮಾಡುತ್ತಿವೆ ಎಂದು ರಾಜ್ಯದ ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಗುಡುಗಿದ್ದಾರೆ ಅವರು ಇಂದು ಬೆಳಗ್ಗೆ ನಗರದ ಹೋಟೆಲೊಂದರಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ವಿರೋಧ ಪಕ್ಷದವರಿಗೆ ಆಡಳಿತ ಮಾಡುತ್ತಿರುವ ಸರ್ಕಾರದ ಬಗ್ಗೆ ಟೀಕಿಸಲು ಬೇರೆ ಏನು ವಿಷಯ ಇಲ್ಲ ಎಂದ ಅವರು ವಿರೋಧಪಕ್ಷಗಳು ಚಿಲ್ಲರೆ ರಾಜಕಾರಣ ಮಾಡುವ ಸಮಯವಲ್ಲ ಎಂದು ಬುದ್ಧಿವಾದ ಹೇಳಿದರು ಅವರು ಮುಂದುವರೆದು ಮಾತನಾಡುತ್ತ ನರೇಂದ್ರ ಮೋದಿಯವರ ಆಡಳಿತ ಬಗ್ಗೆ ಸುಮಾರು 30 ನಿಮಿಷಕ್ಕೂ ಹೆಚ್ಚು ಪತ್ರಿಕಾಗೋಷ್ಠಿಯಲ್ಲಿ ಹೊಗಳಿದರು ನಂತರ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ರಾತ್ರಿ-ಹಗಲು ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.