ಚೀನಾ ಗಡಿ: 3ಯೋಧರ ಹುತಾತ್ಮ. ರಕ್ಷಣಾ ಸಚಿವರಿಂದ ತುರ್ತು ಸಭೆ

Share

ಚೀನಾ ದಾಳಿ 3 ಭಾರತೀಯ ಯೋಧರು ಹುತಾತ್ಮರು. ಭಾರತ ಚೀನಾ ಗಡಿ ಪ್ರದೇಶವಾದ ಗ್ಯಾಲ್ವಾನ್ ಕಣಿವೆ ಪ್ರದೇಶದಲ್ಲಿ ಚೀನಾ ಪಡೆಯವರು ಭಾರತೀಯ ಯೋಧರ ಮೇಲೆ ಗುಂಡಿನ ಮಳೆಗೈದು ಮೂವರು ಭಾರತೀಯರು ಹುತಾತ್ಮರಾಗಿದ್ದಾರೆ .ಓರ್ವ ಕಮಾಂಡಿಂಗ್ ಆಫೀಸರ್ ಹಾಗೂ ಇಬ್ಬರು ಯೋಧರು ಅಸುನೀಗಿದ್ದಾರೆ ಎಂದು ಭಾರತೀಯ ಸೇನೆ ದೃಢಪಡಿಸಿದೆ. 1962 ಎರಡು ದೇಶಗಳ ಮಧ್ಯೆ ನಡೆದ ಭೀಕರ ಯುದ್ಧದ ನಂತರ ಈಗ ಮತ್ತೊಮ್ಮೆ ಯುದ್ಧದ ಕಾರ್ಮೋಡ ಮುಸುಕಿದೆ .ಚೀನಿ ಪಡೆಯವರು ಈ ಕಣಿವೆಯ ಸುತ್ತ ಸುಮಾರು ಶೇಕಡ 80 ಯುದ್ಧ ಸಾಮಗ್ರಿಗಳನ್ನು ಸಂಗ್ರಹಿಸಿದೆ ಎಂದು ಹೇಳಲಾಗುತ್ತಿದೆ .ಕಳೆದ ಹತ್ತು ದಿನಗಳ ಹಿಂದೆಯಷ್ಟೇ ಉದ್ನಿಗ್ನ ಸ್ಥಿತಿ ಬಗ್ಗೆ ಶಾಂತಿ ಮಾತುಕತೆ ನಡೆದಿದ್ದನ್ನು ಇಲ್ಲಿ ಸ್ಮರಿಸಬಹುದು .

ನಿನ್ನೆ ರಾತ್ರಿ ಹನ್ನೊಂದು ಮೂವತ್ತರ ವೇಳೆಯಲ್ಲಿ ಲಡಾಕ್ನ ಈ ಗಡಿ ಪ್ರದೇಶದಲ್ಲಿ ಕಲ್ಲು ಮುಳ್ಳು ತಂತಿ ಗಳಿಂದ ತುಂಬಿದ್ದ ಟ್ರಕ್ ಒಂದು ಭಾರತದ ಗಡಿಯೊಳಗೆ ನುಗ್ಗಲು ಯತ್ನಿಸಿದಾಗ ಇಬ್ಬರ ನಡುವೆಯೂ ಚಕಮಕಿ ನಡೆಯಿತೆಂದು ಹೇಳಲಾಗಿದೆ ಇದೀಗ ಬರುತ್ತಿರುವ ಸುದ್ದಿಯ ಪ್ರಕಾರ ಚೀನಿ ಕಡೆಯವರು ಕೆಲವರು ಸಾವನ್ನಪ್ಪಿದ್ದಾರೆಂದು ಹೇಳಲಾಗುತ್ತಿದೆ .

ದೆಹಲಿ ಚೈನಾ ಭಾರತದ ಯೋಧರ ನಡುವೆ ನಡೆದ ಕಾದಾಟದಲ್ಲಿ ಮೂರು ಸೇನಾಧಿಕಾರಿಗಳು ಹುತಾತ್ಮರಾಗಿದ್ದಾರೆ ಈ ಹಿನ್ನೆಲೆಯಲ್ಲಿ ರಕ್ಷಣ ಸಚಿವರು ತುರ್ತು ಸಭೆಯನ್ನು ಕರೆದು ಚರ್ಚೆ ಆರಂಭಿಸಿದ್ದಾರೆ. ಎಂದು ಹೇಳಲಾಗಿದೆ ಮೂರು ಸೇನೆಯ ಅಧಿಕಾರಿಗಳು ಚರ್ಚೆಯಲ್ಲಿ ಭಾಗವಹಿಸಿದ್ದಾರೆ. ರಕ್ಷಣಾ ಸಚಿವರು ಕರೆದಿರುವ ಸಭೆಯಲ್ಲಿ ವಿದೇಶಾಂಗ ಸಚಿವ ಭಾಗವಹಿಸುತ್ತಿದ್ದಾರೆ ಎಂದು ಹೇಳಲಾಗಿದೆ.
ಯಾವುದೇ ಗುಂಡಿನ ದಾಳಿ ನಡೆದಿಲ್ಲ ಎಂದು ಸೇನಾ ಮುಖ್ಯಸ್ಥರು ತಿಳಿಸಿದ್ದು ಇನ್ನು ಕೆಲವೇ ಸಮಯದಲ್ಲಿ ಪತ್ರಿಕಾಗೋಷ್ಠಿಯನ್ನು ಮಾಡಿ ವಿವರ ನೀಡಲಿದ್ದಾರೆ ಎಂದು ಹೇಳಲಾಗಿದೆ .


Share