ಜನರ ಅಹವಾಲು ಆಲಿಸಿ, 1500 ಕ್ಕೂ ಹೆಚ್ಚು ಅರ್ಜಿ ವಿಲೇವಾರಿ ; ಡಿಸಿಎಂ ಡಿ.ಕೆ. ಶಿ

21
Share

 

ಕನಕಪುರ ಜನರ ಅಹವಾಲು ಆಲಿಸಿ, 1500 ಕ್ಕೂ ಹೆಚ್ಚು ಅರ್ಜಿ ವಿಲೇವಾರಿ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ರಾಮನಗರ,

ಹಾರೋಹಳ್ಳಿವರೆಗೂ ಬರುತ್ತಿರುವ ಬಿಎಂಟಿಸಿ ಬಸ್ ಅನ್ನು ಕನಕಪುರದವರೆಗೂ ವಿಸ್ತರಿಸಿ.., ನಮ್ಮ ಜಮೀನಿಗೆ ದಾರಿ ಬುಡ್ತಿಲ್ಲ ನೋಡಿ.., ನಮ್ಮ ಜಮೀನಲ್ಲಿ ಉಳುಮೆ ಮಾಡಲು ಫಾರೆಸ್ಟ್ ಅಧಿಕಾರಿಗಳು ತೊಂದರೆ ಕೊಡ್ತಾ ಅವ್ರೆ.., ಕುರಿ-ಮೇಕೆ ಸಾಕೋಕೆ ಸಾಲ ಕೊಡ್ಸಿ.., ನಂದು ಒಂದು ಕಾಲಿಲ್ಲ, ಮೂರು ಚಕ್ರದ ಗಾಡಿ ಕೊಡ್ಸಿ…

ಕನಕಪುರ ಜನಸಂಪರ್ಕ ಸಭೆಯಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಅವರಿಗೆ ಜನರಿಂದ ಬಂದ ದೂರುಗಳ ಸ್ಯಾಂಪಲ್ ಇದು.

ಎಲ್ಲ ದೂರುಗಳನ್ನು ಸಾವಧಾನವಾಗಿ ಆಲಿಸಿದ ಡಿಸಿಎಂ ಅವರು ದೂರು/ ಅರ್ಜಿಗಳ ಮೇಲೆ ಸೂಚನೆ ಬರೆದು ಸಂಬAಧಪಟ್ಟ ಅಧಿಕಾರಿಗಳಿಗೆ ಪರಿಹಾರ ಕಲ್ಪಿಸಲು ಸ್ಥಳದಲ್ಲೇ ಸೂಚನೆ ನೀಡಿದರು.

ಬಹುತೇಕ ದೂರುಗಳು ಖಾತೆ ಬದಲಾವಣೆ, ಉದ್ಯೋಗ, ಮನೆ, ಬ್ಯಾಂಕ್ ಸಾಲ, ಆಸ್ತಿ ದಾಖಲೆ ಪತ್ರಗಳ ಬದಲಾವಣೆ, ಪೋಡಿ, ಪೌತಿ ಖಾತೆಗೆ ಸಂಬAಧಪಟ್ಟದ್ದು ಆಗಿತ್ತು.

ಡಿಸಿಎಂ ಅವರು ಬೆಳಗಿನಿಂದ ಸಂಜೆವರೆಗೂ ಇಡೀ ದಿನ ಕನಕಪುರದ ಅಂಬೇಡ್ಕರ್ ಭವನದಲ್ಲಿ ಕುಳಿತು ಸುಮಾರು 1,500 ಕ್ಕೂ ಹೆಚ್ಚು ಅರ್ಜಿಗಳನ್ನು ವಿಲೇವಾರಿ ಮಾಡಿದರು.

ಸಂಸದ ಡಿ. ಕೆ. ಸುರೇಶ್ ಅವರು ಗ್ರಾಮ ಪಂಚಾಯಿತಿ ಮಟ್ಟದಲ್ಲೇ ಜನಸಂಪರ್ಕ ಸಭೆಗಳನ್ನು ಮಾಡಿ ಪರಿಹಾರ ಒದಗಿಸಿರುವುದರಿಂದ ಬಹುತೇಕ ಸಮಸ್ಯೆಗಳು ಬಗೆಹರಿದಿವೆ ಎಂದೂ ಹಲವಾರು ಹೇಳಿದರು.


Share