ಶುಭಾಶಯಗಳು
ಮೈಸೂರು ಸಂಸ್ಥಾನದ 25ನೇ ದೊರೆ ಶ್ರೀ ಜಯಚಾಮರಾಜ ಒಡೆಯರ್ ಅವರ ಜನ್ಮ ಶತಮಾನೋತ್ಸವದ ಸಮಾರೋಪ ಆಚರಿಸಲಾಗುತ್ತಿರುವುದು ಸಂತಸದ ವಿಷಯ.
ರಾಜಪ್ರಭುತ್ವದಲ್ಲಿ ಅರಸರಾಗಿದ್ದರೂ ಸಹ ರಾಜತ್ವವನ್ನು ತ್ಯಜಿಸಿ ಪ್ರಜಾಪ್ರಭುತ್ವಕ್ಕೆ ಅನುವು ಮಾಡಿಕೊಟ್ಟ ಮಹಾತ್ಮರು ಇವರು. ನಮ್ಮ ರಾಜ್ಯದ ಮೊದಲ ರಾಜ್ಯಪಾಲರಾಗಿ, ಮದ್ರಾಸಿನ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದಾರೆ. ಸಂಗೀತದಲ್ಲಿ ಅಪಾರ ಆಸಕ್ತಿ ಹೊಂದಿದ್ದ ಮಹಾರಾಜರು ಹಲವಾರು ಸಂಗೀತ ಕೃತಿಗಳನ್ನು ರಚಿಸಿದ್ದಾರೆ.
ವನ್ಯಜೀವಿಗಳ ಬಗ್ಗೆ ಅಪಾರ ಪ್ರೀತಿ ಇಟ್ಟುಕೊಂಡಿದ್ದರು. ಕೇಂದ್ರ ಸಂಗೀತ ಅಕಾಡೆಮಿಯ ಅಧ್ಯಕ್ಷರಾಗಿ, ಕೇಂದ್ರ ವನ್ಯಜೀವಿ ಮಂಡಳಿಯ ಅಧ್ಯಕ್ಷರಾಗಿ ಇನ್ನೂ ಅನೇಕ ಕ್ಷೇತ್ರಗಳಲ್ಲಿ ಶ್ರಮಿಸಿ ಮಾದರಿಯಾದವರು.
ಇವರ ಜನ್ಮ ಶತಮಾನೋತ್ಸವದ ಈ ಶುಭ ಸಂದರ್ಭದಲ್ಲಿ ಶುಭಾಶಯಗಳನ್ನು ಕೋರುತ್ತೇನೆ.
ಎಸ್.ಟಿ.ಸೋಮಶೇಖರ್,
ಮಾನ್ಯ ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು,
ಕರ್ನಾಟಕ ಸರ್ಕಾರ.