ಜಮ್ಮು-ಕಾಶ್ಮೀರ ಬಿಹಾರಗಳಲ್ಲಿ ಭೂಕಂಪನ

Share

ಭೂಕಂಪನದ ರಾಷ್ಟ್ರೀಯ ಕೇಂದ್ರದ ಪ್ರಕಾರ, ಜಮ್ಮು ಮತ್ತು ಕಾಶ್ಮೀರದಲ್ಲಿ ಇಂದು ಬೆಳಿಗ್ಗೆ 10.10 ಕ್ಕೆ ಭೂಮಿ ಕಂಪಿಸಿದೆ.
10 ಕಿ.ಮೀ. ಆಳದಲ್ಲಿ ಭೂಮಿ ಕಂಪಿಸಿದ ಅನುಭವಾಗಿದೆ.
ಇದೇ ಸಮಯದಲ್ಲಿ ಬಿಹಾರದ ಅರಾರಿಯಾ ಪ್ರದೇಶದಲ್ಲಿ 4.3 ತೀವ್ರತೆಯ ಭೂಕಂಪ ಸಂಭವಿಸಿದೆ.
ಪುರ್ನಿಯಾ ಬಳಿ 10 ಕಿಮೀ ಆಳದಲ್ಲಿ ಭೂಕಂಪನ ಸಂಭವಿಸಿದ್ದು ಕತಿಹಾರ್ ಮತ್ತು ಅರಾರಿಯಾದ ಪಕ್ಕದ ಪ್ರದೇಶಗಳಲ್ಲಿ ಕಂಪನದ ಅನುಭವವಾಗಿದೆ ,,ಎಂದು ಭೂಕಂಪನದ ರಾಷ್ಟ್ರೀಯ ಕೇಂದ್ರ ಹೇಳಿದೆ.
ಈ ಸ್ಥಳಗಳಲ್ಲಿ ಸಾವು ನೋವುಗಳಾದ ಬಗ್ಗೆ ಇವರಿಗೆ ವರದಿ ಆಗಿಲ್ಲ.


Share