ಜಾತಿ ಪತ್ರ ನೀಡಲು ಮುಖ್ಯಮಂತ್ರಿ ಸೂಚನೆ

774
Share

ಬೆಂಗಳೂರು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನೂತನ ಕಚೇರಿ ಮತ್ತು ಜಾಲತಾಣ ಉದ್ಘಾಟನೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮ ಗೃಹ ಕಚೇರಿ ಯಲ್ಲಿ ಉದ್ಘಾಟಿಸಿದರು ಈ ಸಂದರ್ಭದಲ್ಲಿ ಅವರು ಮಾತನಾಡುತ್ತಾ ದೇಶದ ಬಲವರ್ಧನೆಗಾಗಿ ಬ್ರಾಹ್ಮಣ ಸಮಾಜದ ಸೇವೆ ಮುಖ್ಯವಾಗಿದ್ದು ಇವರೆಲ್ಲರ ಹಿತರಕ್ಷಣೆಗಾಗಿ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ರಚನೆ ಹಾಗೂ ಮಂಡಳಿಗೆ ಬೇಕಾದ ಸರ್ಕಾರದ ಸಹಾಯ ಹಸ್ತವನ್ನು ನೀಡುತ್ತೇವೆ ಎಂದು ಅವರು ಭರವಸೆ ನೀಡಿದರು ಉದ್ಘಾಟನೆಯ ಕಾರ್ಯಕ್ರಮದಲ್ಲಿ ಮೈಸೂರು ನಗರದ ಕೆಆರ್ ಕ್ಷೇತ್ರದ ರಾಮದಾಸವರು ತಾಲೂಕು ಕಚೇರಿಯಲ್ಲಿ ಬ್ರಾಹ್ಮಣರಿಗೆ ಜಾತಿ ಪತ್ರ ನೀಡುತ್ತಿಲ್ಲ ಹೀಗಾಗಿ ಸರ್ಕಾರ ಕೂಡಲೇ ಆದೇಶ ಹೊರಡಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಳಿ ಮನವಿ ಮಾಡಿದರು ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಾಮದಾಸ್ ಅವರ ಮನವಿಗೆ ಸ್ಪಂದಿಸಿದ ಅವರು ಸ್ಥಳದಲ್ಲೇ ಇದ್ದ ಕಂದಾಯ ಸಚಿವರಿಗೆ ಜಾತಿ ಪತ್ರವನ್ನು ನೀಡುವಂತೆ ತಾಲೂಕು ಕಚೇರಿಗಳಿಗೆ ಸರ್ಕಾರ ಆದೇಶ ಹೊರಡಿಸುವಂತೆ ಸೂಚನೆ ನೀಡಿದರು.


Share