ಜಾನ್ಸಿರಾಣಿ ಲಕ್ಷ್ಮೀಬಾಯಿ ಪುಣ್ಯಸ್ಮರಣೆ

ಹಿಂದೂ ಪರ ಮಹಿಳಾ ವೇದಿಕೆ ವತಿಯಿಂದ ನಮ್ಮ ಭಾರತದ ವೀರ ಮಹಿಳೆ ಝಾನ್ಸಿ ರಾಣಿ ಲಕ್ಷ್ಮಿಬಾಯಿ ಅವರ 162ನೇ ಪುಣ್ಯ ಸ್ಮರಣೆ ಅಂಗವಾಗಿ ಮಾತೃ ಮಂಡಳಿ ವೃತ್ತದಲ್ಲಿ ಅವರ ಭಾವಚಿತ್ರ ಹಿಡಿದು ಸ್ಮರಿಸಲಾಯಿತು
ನಂತರ ಮಾತನಾಡಿದ ಬಿಜೆಪಿ ಮಹಿಳಾ ಮುಖಂಡರು ಹಾಗೂ ಹಿಂದೂಪರ ಮಹಿಳಾ ಸಂಘಟನೆಯ ಅಧ್ಯಕ್ಷರಾದ ಲಕ್ಷ್ಮೀದೇವಿ ಭಾರತದ ನವ ಇತಿಹಾಸದಲ್ಲಿ ಎಂದು ಮರೆಯದ ಹೆಸರು.ರಾಣಿ ಲಕ್ಷ್ಮೀ ಬಾಯಿ
ಭಾರತದಲ್ಲಿ ಬ್ರಿಟಿಷರು ತಮ್ಮ ಸಾಮ್ರಾಜ್ಯ ವಿಸ್ತರಿಸಲು ವಿಚಿತ್ರವಾದ ಕಾನೂನುಗಳನ್ನು ಜಾರಿಗೆ ತಂದು ಹಲವು ಸಂಸ್ಥಾನಗಳನ್ನು ಕೈವಶ ಮಾಡಿಕೊಂಡರು. ಅಂತಹ ಒಂದು ಕಾನೂನೇ
*ದತ್ತು ಮಕ್ಕಳಿಗೆ ಹಕ್ಕು ಇಲ್ಲ.
ಜಾನ್ಸಿ ಯ ರಾಜ ಗಂಗಾಧರ ರಾವ್ ಅವರ ಕಿರಿಯ ಪತ್ನಿ ಲಕ್ಷ್ಮೀಭಾಯಿ, ಧೀರೆ ,ಯುದ್ಧ ಕೌಶಲ್ಯ ಚತುರೆ.ರಾಜ ಆಡಳಿತ ನಿಷ್ಣಾತೆ. ತನಗಿಂತ ಮೂರು ಪಟ್ಟು ಹೆಚ್ಚು ವಯಸ್ಸಿನ ರಾಜನನ್ನು ಮದುವೆ ಆಗಿ ದ್ದಳು. ಆದರೆ ರಾಜನಿಗೆ ಯಾವ ರಾಣಿಯರಲ್ಲೂ ಮಕ್ಕಳಾಗಲೇ ಇಲ್ಲ.
ರಾಜ ಗಂಗಾಧರ ರಾವ್ ಅವರ ಅಕಾಲಿಕ ಮರಣ ದ ಸಂಧರ್ಭ ದಲ್ಲಿ ಅವರ ದತ್ತು ಪುತ್ರ ಎಳೆಯ ವಯಸ್ಸಿನ ದಾಮೋದರ್ ರಾವ್ ನನ್ನು ವಾರಸುದಾರ ನಾಗಿ ನಿಯುಕ್ತಿ ಗೊಳಿಸಿ, ರಾಜ್ಯದ ಉಳಿವಿನ ಸಂಕಲ್ಪ ದೊಂದಿಗೆ, ಲಕ್ಷ್ಮೀ ಬಾಯಿ ಆಡಳಿತ ಯಂತ್ರ ವನ್ನು ಕೈ ವಶ ಮಾಡಿಕೊಂಡಳು.
ಬ್ರಿಟಿಷ್ ಗೌವರ್ನರ್ ಜನರಲ್ ಡಾಲಹೌಸಿ ಯ ಪಿತೂರಿ ಯಿಂದ ಲಕ್ಷ್ಮೀ ಬಾಯಿ ಹಾಗೂ ಅವಳ ದತ್ತು ಪುತ್ರ ದಾಮೋದರ್ ರಾವ್ ರಾಜ್ಯ ಕಳೆದುಕೊಂಡು ರಾಜ್ಯಭ್ರಷ್ಟ ರಾಗಬೇಕಾಯಿತು.
ಬ್ರಿಟಿಷ್ ಆಡಳಿತ ವಿರುದ್ಧ ಆಕೆ ಹಲವು ಯುದ್ಧ ಮಾಡಿದ್ದಳು. ಕೊನೆಗೆ ಗ್ವಾಲಿಯರ್ ರಾಜ ಮಾನಸಿಂಗ್ ಮೋಸ ದಿಂದ ಆಕೆಯನ್ನು ಹಿಡಿದು ಬ್ರಿಟಿಷರಿಗೆ ಒಪ್ಪಿಸಿದ. ಆಕೆಯನ್ನು ದೇಶದ್ರೋಹದ ಸುಳ್ಳು ಆಪಾದನೆ ಗೆ ಸಿಕ್ಕಿಸಿ ಕೊಲ್ಲಲಾಯಿತು.
ಭಾರತದ ಧೀರ ವನಿತೆಯ ಅಂತ್ಯ ವಾಯಿತು.
ನವ ಭಾರತದ ವನಿತೆಯರಿಗೆ ಆಕೆ ಸ್ಫೂರ್ತಿ
ಇದೇ ಸಂದರ್ಭದಲ್ಲಿ ಪ್ರೇಮ. ಸ್ವಾತಿ .ರಾಜೇಶ್ವರಿ. ರೇಣುಕಾ .ಮಹದೇವಮ್ಮ ಅಮೂದ .ಹಾಗೂ ಇನ್ನಿತರರು ಹಾಜರಿದ್ದರು