ಜಿಲ್ಲಾಡಳಿತ ವಿರುದ್ದ ಕೆಜಿಎಫ್ ಶಾಸಕಿ ಮೌನ ಹೋರಾಟ.

Share

ಕೋಲಾರ.
ಜಿಲ್ಲಾಡಳಿತ ವಿರುದ್ದ ಕೆಜಿಎಫ್ ಶಾಸಕಿ ಮೌನ ಹೋರಾಟ ಪ್ರಾರಂಭಿಸಿದ್ದಾರೆ. ನಗರದ ಹೊರ ವಲಯದಲ್ಲಿನ ಜಿಲ್ಲಾಧಿಕಾರಿಗಳವರ ಕಛೇರಿಯ ಮೆಟ್ಟಲುಗಳ ಮಧ್ಯೆ ಏಕಾಂಗಿಯಾಗಿ ನಿಂತು ಹೋರಾಟ ನಡೆಸಿರುವ ಕಾಂಗ್ರೆಸ್ ಶಾಸಕಿ ರೂಪಾ ಶಶಿಧರ್
ಕೆಜಿಎಫ್ ನ ರಸ್ತೆ ಅಗಲೀಕರಣ ಕಾಮಗಾರಿಯಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವ ಜಿಲ್ಲಾಡಳಿತ ಕಳೆದೊಂದು ವರುಷದಿಂದಲೂ ಕೆ ಜಿ ಎಫ್ ನಗರದ ಅಶೋಕ ರಸ್ತೆ ಅಗಲೀಕರಣದ ಕಾಮಗಾರಿ ನಡೆಸದೇ ಸಬೂಬು ಹೇಳುತ್ತಿದೆˌ ನಾನು ಜನಪ್ರತಿನಿಧಿಯಾಗಿದ್ದು ಸ್ಥಳೀಯರ ಒತ್ತಾಯಕ್ಕೆ ಉತ್ತರ ನೀಡಲಾಗುತ್ತಿಲ್ಲವೆಂದೂ ಈ ಸಂಬಂಧ ನನ್ನ ಈ ಮೌನ ಹೋರಾಟ ಅನಿರ್ವಾಯವೆಂದೂ ಅವರು ತಿಳಿಸಿದರು. ಅಲ್ಲದೇ ಸೋಮವಾರದ ಒಳಗೆ ನನ್ನ ಈ ಮೌನ ಹೋರಾಟಕ್ಕೆ ಜಿಲ್ಲಾಡಳಿತವು ಸ್ಪಂಧಿಸದಿದ್ದರೆ ಸೋಮವಾರದಿಂದ ನಡೆಯಲಿರುವ ಅಧಿವೇಶನಕ್ಕೆ ಗೈರು ಹಾಜರಾಗಿ ಪ್ರತಿಭಟನೆ ನಡೆಸುತ್ತೇನೆಂದು ಅವರು ತಿಳಿಸಿದರು.


Share