ಜಿಲ್ಲಾ ಆಡಳಿತದ ಪ್ರಮುಖರಿಗೆ ಅಭಿನಂದನಾ ಕಾರ್ಯಕ್ರಮ

ಮಾನವೀಯತೆ ದೊಡ್ಡದು-ಒಂದು ಸ್ಮರಣೆ
ಕಾರ್ಯಕ್ರಮದಡಿಯಲ್ಲಿ ಕೊರೊನಾ ಲಾಕ್ ಡೌನ್ ಆದ ಪ್ರಾರಂಭದ ದಿನದಿಂದಲೂ ಮಾಜಿ ಶಾಸಕರಾದ ಶ್ರೀ ಎಂ ಕೆ ಸೋಮಶೇಖರ್ ರವರ ನೇತೃತ್ವದಲ್ಲಿ ಮಾಸ್ಕ್,ಆಹಾರ,ನೀರು,ಸ್ಯಾನಿಟೈಜರ್ ,ಆಹಾರ ಪದಾರ್ಥಗಳ ಕಿಟ್ ಗಳನ್ನು 56 ದಿನಗಳಿಂದಲೂ ವಿತರಿಸಿದ್ದು ಇಂದು ಕೊರೊನಾ ಹೋರಾಟದಲ್ಲಿ ಭಾಗವಹಿಸಿದ ಜಿಲ್ಲಾಡಳಿತದ ಪ್ರಮುಖರಿಗೆ ಅಭಿನಂದನೆಗಳನ್ನು ಸಲ್ಲಿಸಲಾಯಿತು.ಈ ಸಂಧರ್ಭದಲ್ಲಿ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಕಿರಿಯ ಸ್ವಾಮಿಜಿಗಳಾದ ಶ್ರೀ ಶ್ರೀ ದತ್ತ ವಿಜಯಾನಂದ ಸ್ವಾಮೀಜಿ ಯವರು ಸಾನಿಧ್ಯ ವಹಿಸಿದ್ದರು.ಮಾಜಿ ಶಾಸಕರಾದ ಶ್ರೀ ಎಂ ಕೆ ಸೋಮಶೇಖರ್ ರವರು ಅಧ್ಯಕ್ಷತೆ ವಹಿಸಿದ್ದರು.ಮಾಜಿ ಸಂಸದರಾದ ಶ್ರೀ ಆರ್ ಧೃವನಾರಯಣ್,ಜಿಲ್ಲಾ ಆರೋಗ್ಯಾಧಿಕಾರಿಗಳಾದ ಶ್ರೀ ವೆಂಕಟೇಶ್ ,ವೈದ್ಯಾಧಿಕಾರಿ ಡಾ.ನಾಗರಾಜು,ಮಾಜಿ ಶಾಸಕರಾದ ಶ್ರೀ ಕಳಲೇ ಕೇಶವಮೂರ್ತಿ,ಅರಗು ಮತ್ತು ಬಣ್ಣದ ಕಾರ್ಖಾನೆ ಅಧ್ಯಕ್ಷರಾದ ಹೆಚ್.ಎ.ವೆಂಕಟೇಶ್,ಮಾಜಿ ಮಹಾಪೌರರಾದ ಟಿ.ಬಿ.ಚಿಕ್ಕಣ್ಣ,ನಾರಯಣ್,ಕಾಂಗ್ರೆಸ್ ಮುಖಂಡರಾದ ಹರೀಶ್ ಗೌಡ,ಪಾಲಿಕೆ ಸದಸ್ಯರಾದ ಜೆ.ಗೋಪಿ,ಲೋಕೇಶ್ ಪಿಯಾ,ಶೋಭಾ ಸುನೀಲ್,ಶಿವಕುಮಾರ್,ಪ್ರಧಾನ ಕಾರ್ಯದರ್ಶಿ ಶಿವಣ್ಣ,ಮಾಜಿ ಅಧ್ಯಕ್ಷರಾದ ಟಿ.ಎಸ್.ರವಿಶಂಕರ್,ಮಾಜಿ ಪಾಲಿಕೆ ಸದಸ್ಯರಾದ ಇಟ್ಟಿಗೆಗೂಡು ಸತ್ಯಪ್ಪ,ಡಾ.ಸುಜಾತರಾವ್,ವಕ್ತಾರರುಗಳಾದ ಲಕ್ಷ್ಮಣ್,ಮಂಜುಳಾ ಮಾನಸ,ಮಾಜಿ ಪಾಲಿಕೆ ಸದಸ್ಯ ಎಂ ಸುನೀಲ್ ಇನ್ನೂ ಹಲವರು ಉಪಸ್ಥಿತರಿದ್ದರು.ಬ್ಲಾಕ್ ಅಧ್ಯಕ್ಷರಾದ ಜಿ ಸೋಮಶೇಖರ್ ಸ್ವಾಗತಿಸಿದರು.