ಮಾನ್ಯ ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರ ಜೂನ್ 5 ಶುಕ್ರವಾರದ ಕಾರ್ಯಕ್ರಮಗಳು
- ಬೆಳಗ್ಗೆ 9.30: ಕೇಂದ್ರ ಸರ್ಕಾರ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಒಂದು ವರ್ಷದ ಸಾಧನೆಯ ಮಾಹಿತಿ ಪತ್ರವನ್ನು ಮನೆಮನೆಗೆ ಹಂಚುವ ಕಾರ್ಯಕ್ರಮಕ್ಕೆ ಚಾಲನೆ, ಸ್ಥಳ: ನಟರಾಜ ಚಿತ್ರಮಂದಿರದ ಎದುರು, ಶಂಕರಮಠ ರಸ್ತೆ, ಅಗ್ರಹಾರ, ಉಲ್ಲೇಖ: ಮಾನ್ಯ ಶಾಸಕರಾದ ಎಸ್.ಎ ರಾಮದಾಸ್ ಅವರು
- ಬೆಳಗ್ಗೆ 10.30: ಮೈಸೂರಿನ ಶೃಂಗೇರಿ ಜಗದ್ಗುರು ಶ್ರೀ ಶ್ರೀ ಶ್ರಿ ಭಾರತೀ ತೀರ್ಥ ಮಹಾಸ್ವಾಮಿಗಳವರ ಉದ್ಯಾನವನ, ಜೆ.ಪಿ.ನಗರ ಇಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮೈಸೂರು ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ ಸಹಯೋಗದೊಂದಿಗೆ ಗಿಡ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸುವರು, ಉಲ್ಲೇಖ ಜಿಲ್ಲಾಡಳಿತ
- ಬೆಳಗ್ಗೆ 11.30: ಮೈಸೂರು ವಿಶ್ವವಿದ್ಯಾಲಯದ ಮಾನಸ ಗಂಗೋತ್ರಿಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಗವಾಗಿ ಗಿಡ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
- ಮಧ್ಯಾಹ್ನ 12: ನರಸಿಂಹರಾಜ ವಿಧಾನಸಭಾ ಕ್ಷೇತ್ರದಲ್ಲಿ ಗಿಡ ನೆಡುವ ಕಾರ್ಯಕ್ರಮದಲ್ಲಿ ಭಾಗಿ, ಸ್ಥಳ: ದೇವನೂರು 3ನೇ ಹಂತ, ಮುಡಾ ಪಾರ್ಕ್
- ಮಧ್ಯಾಹ್ನ 12.30: ಮೈಸೂರು ಜಿಲ್ಲೆಯ 2860 ಅಂಗನವಾಡಿ ಕಾರ್ಯಕರ್ತೆಯರಿಗೆ ಆಹಾರ ಕಿಟ್ ಕೊಡಲು ತೀರ್ಮಾನಿಸಲಾಗಿದ್ದು, ಸಾಂಕೇತಿಕವಾಗಿ 100 ಜನ ಅಂಗನವಾಡಿ ಕಾರ್ಯಕರ್ತೆಯರಿಗೆ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಸ್ಥಳ: ಕಲಾಮಂದಿರ ಮೈಸೂರು