ಜಿಲ್ಲೆಯಲ್ಲಿ 19ರ0ದು 56 ನಾಮಪತ್ರಗಳ ಸಲ್ಲಿಕೆ

Share

 

ಜಿಲ್ಲೆಯಲ್ಲಿ ಇಂದು 56 ನಾಮಪತ್ರಗಳ ಸಲ್ಲಿಕೆ
ಮೈಸೂರು ಮೈಸೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ ಏಪ್ರಿಲ್ 19 ರಂದು 56 ನಾಮಪತ್ರಗಳು ಸಲ್ಲಿಕೆಯಾಗಿವೆ.

210- ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಬಹುಜನ ಸಮಾಜವಾದಿ ಪಕ್ಷದಿಂದ ಪ್ರದೀಪ ಎಸ್, ಪಕ್ಷೇತರ ಅಭ್ಯರ್ಥಿಗಳಾಗಿ ಕೃಷ್ಣಕುಮಾರ್ ಹೆಚ್ ಜೆ. ಹಾಗೂ ಶ್ರೀನಿವಾಸ್ ಪಿ ಅವರು ನಾಮಪತ್ರ ಸಲ್ಲಿಸಿದ್ದಾರೆ.

211- ಕೆ.ಆರ್ ನಗರ ವಿಧಾನ ಸಭಾ ಕ್ಷೇತ್ರದಿಂದ ಆಮ್ ಆದ್ಮಿ ಪಕ್ಷದ ಮುರುಗೇಶ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರವಿಶಂಕರ್ ಡಿ, ಪಕ್ಷೇತರ ಅಭ್ಯರ್ಥಿಯಾಗಿ ಶಿವನಂಜಪ್ಪ ಅವರು ನಾಮಪತ್ರ ಸಲ್ಲಿಸಿದ್ದಾರೆ.

212-ಹುಣಸೂರು ವಿಧಾನ ಸಭಾ ಕ್ಷೇತ್ರದಿಂದ ಆಮ್ ಆದ್ಮಿ ಪಕ್ಷದ ಜಿ. ರವಿಶಂಕರ್, ಬಹುಜನ ಸಮಾಜವಾದಿ ಪಕ್ಷದ ಅಭ್ಯರ್ಥಿ ಪ್ರಸನ್ನ ಕುಮಾರ್ , ಉತ್ತಮ ಪ್ರಜಾಕೀಯ ಪಕ್ಷ ದ ಅಭ್ಯರ್ಥಿ ಸುನೀಲ್ ಡಿ.ಎನ್. ಪಕ್ಷೇತರ ಅಭ್ಯರ್ಥಿಗಳಾಗಿ ಚನ್ನೇಗೌಡ, ಲೋಕೇಶ್ ಬಿ. ಎಲ್. ಅವರು ನಾಮಪತ್ರ ಸಲ್ಲಿಸಿದ್ದಾರೆ.

213- ಹೆಚ್.ಡಿ.ಕೋಟೆ ವಿಧಾನ ಸಭಾ ಕ್ಷೇತ್ರದಿಂದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಕೆ.ಎಂ. ಕೃಷ್ಣ, ಪಕ್ಷೇತರ ಅಭ್ಯರ್ಥಿಯಾಗಿ ಜಿ ಎನ್ ದೇವದತ್ತ ಅವರು ನಾಮಪತ್ರ ಸಲ್ಲಿಸಿದ್ದಾರೆ.

214- ನಂಜನಗೂಡು ವಿಧಾನಸಭಾ ಕ್ಷೇತ್ರದಿಂದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ ಮಹಾದೇವನ್ ಆರ್, ಪಕ್ಷೇತರ ಅಭ್ಯರ್ಥಿಯಾಗಿ ಆನಂದ ಜಿ. ಅವರು ನಾಮ ಪತ್ರ ಸಲ್ಲಿಸಿದ್ದಾರೆ.

215- ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದ ಉತ್ತಮ ಪ್ರಜಾಕೀಯ ಪಾರ್ಟಿ ಅಭ್ಯರ್ಥಿ ಎಸ್ ಹರೀಶ್, ಕರ್ನಾಟಕ ಪ್ರಜಾ ಪಾರ್ಟಿ ( ರೈತ ಪರ್ವ) ಅಭ್ಯರ್ಥಿ ಶಿವಣ್ಣ ಬಿ. ಪಕ್ಷೇತರ ಅಭ್ಯರ್ಥಿಗಳಾಗಿ ಬಿ ಪ್ರಕಾಶ, ಎಂ ನಾಗರಾಜು, ಎಂ ರಂಗಸ್ವಾಮಿ, ಶ್ರೀನಿವಾಸ, ಶ್ರೀನಿವಾಸ ಎಂ., ಜಿ. ಎಂ ಮಹದೇವ ಅವರು ನಾಮಪತ್ರ ಸಲ್ಲಿಸಿದ್ದಾರೆ

216- ಕೃಷ್ಣರಾಜ ವಿಧಾನಸಭಾ ಕ್ಷೇತ್ರದಿಂದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಜಯಶ್ರೀ ವೈ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಎಂ ಕೆ ಸೋಮಶೇಖರ್, ಪಕ್ಷೇತರ ಅಭ್ಯರ್ಥಿಗಳಾಗಿ ಎಸ್ ಪ್ರಕಾಶ ಪ್ರಿಯ ದರ್ಶನ್, ಉದಯಶಂಕರ್ ಹೆಚ್ ಪಿ ಅವರು ನಾಮಪತ್ರ ಸಲ್ಲಿಸಿದ್ದಾರೆ.

217- ಚಾಮರಾಜ ವಿಧಾನಸಭಾ ಕ್ಷೇತ್ರದಿಂದ ಭಾರತೀಯ ರಾಷ್ಟ್ರೀಯಕಾಂಗ್ರೆಸ್ಸಿನ ಕೆ ಹರೀಶ್ ಗೌಡ, ಪಕ್ಷೇತರ ಅಭ್ಯರ್ಥಿಯಾಗಿ ಸಿದ್ಧರಾಜು ಹೆಚ್ ಡಿ ಅವರು ನಾಮಪತ್ರ ಸಲ್ಲಿಸಿದ್ದಾರೆ.

218- ನರಸಿಂಹರಾಜ ವಿಧಾನಸಭಾ ಕ್ಷೇತ್ರದಿಂದ ಆಲ್ ಇಂಡಿಯಾ ಮಹಿಳಾ ಎಂಪವರ್ಮೆಂಟ್ ಪಾರ್ಟಿ ಅಭ್ಯರ್ಥಿ ಖಲೀಲ್ ಉರ್ ರಹಮಾನ್ ಷರಿಪ್ , ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಅಭ್ಯರ್ಥಿ ಅಬ್ದುಲ್ ಮಜೀದ್ ಕೆ ಹೆಚ್, ಭಾರತೀಯ ರಾಷ್ಟ್ರೀಯಕಾಂಗ್ರೆಸ್ಸಿನ ತನ್ವೀರ್ ಸೇಠ್, ಆಮ್ ಆದ್ಮಿ ಪಾರ್ಟಿಯ ಲಕ್ಷ್ಮೀಕಾಂತ ತಿವಾರಿ, ಪಕ್ಷೇತರ ಅಭ್ಯರ್ಥಿಗಳಾಗಿ ರಿಹಾನ ಬಾನು, ಲಿಂಗರಾಜ್ ಎಂ., ಜಿ ಬಿ ಶಿವಣ್ಣ, ನೀಲಕಂಠ ಎಂ. ಎಸ್, ಅವರು ಅವರು ನಾಮ ಪತ್ರ ಸಲ್ಲಿಸಿದ್ದಾರೆ.

219- ವರುಣಾ ವಿಧಾನ ಸಭಾ ಕ್ಷೇತ್ರದಿಂದ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ಮಹದೇವಸ್ವಾಮಿ ಆರ್, ಭಾರತೀಯ ರಾಷ್ಟ್ರೀಯಕಾಂಗ್ರೆಸ್ಸಿನ ಅಭ್ಯರ್ಥಿ ಸಿದ್ದರಾಮಯ್ಯ, ಪಕ್ಷೇತರ ಅಭ್ಯರ್ಥಿ ಗಳಾಗಿ ಖಲೀಮ್ ಉಲ್ಲಾ, ವಿ. ಪಿ. ಸುಶೀಲ ಅವರು ನಾಮ ಪತ್ರ ಸಲ್ಲಿಸಿದ್ದಾರೆ.

220- ಟಿ. ನರಸೀಪುರ ವಿಧಾನ ಸಭಾ ಕ್ಷೇತ್ರದಿಂದ ಇಂಡಿಯನ್ ಮೂಮೆಂಟ್ ಪಾರ್ಟಿ ಅಭ್ಯರ್ಥಿ ಶ್ರೀನಿವಾಸ್, ಸಮಾಜವಾದಿ ಜನತಾ ಪಾರ್ಟಿ ( ಕರ್ಣಾಟಕ ) ಅಭ್ಯರ್ಥಿ ಎ ಎನ್. ಶಿವಲಿಂಗಪ್ಪ, ಬಹುಜನ ಸಮಾಜ ಪಾರ್ಟಿ ಅಭ್ಯರ್ಥಿ ಬಿ. ಆರ್. ಪುಟ್ಟಸ್ವಾಮಿ ಪಕ್ಷೇತರ ಅಭ್ಯರ್ಥಿಗಳಾಗಿ ಮಹದೇವ ಡಿ , ಎಂ. ಕುಮಾರ ಕ್ರಾಂತಿ ಅವರು ನಾಮಪತ್ರ ಸಲ್ಲಿಸಿದ್ದಾರೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಕೆ.ವಿ.ರಾಜೇಂದ್ರ ಅವರು ತಿಳಿಸಿದ್ದಾರೆ.


Share