ಜೀವ ಜಗತ್ತು

607
Share

ಪ್ರಕೃತಿಯಲ್ಲಿ ಲಕ್ಷಾಂತರ ಭಿನ್ನ ಜೀವಿಗಳವಿ ಪಕ್ಷಿಗಳಿಗೆ ಏಕೆ ಪ್ರಾಧಾನ್ಯತೆ? ನಾವು ಮನೆಯಿಂದ ಹೊರಗೆ ಬಂದಾಗ ಕಾಣುವ ಜೀವಿಗಳಲ್ಲಿ ಪಕ್ಷಿಗಳೇ ಮೊದಲು ಮತ್ತು ಕೆಲವು ಪರಿಚಿತ ಹಾಗಾಗಿ ಅವುಗಳ ಮೂಲಕ ಉಳಿದ ಜೀವಿಗಳನ್ನು ನೋಡಲು, ಪರಿಚಯಿಸಿಕೊಳ್ಳಲು, ಅವುಗಳ ಬಗ್ಗೆ ಅರಿವು ಮೂಡಿಸಿ ಕೊಳ್ಳಲು ಪಕ್ಷಿಗಳ ಪರಿಚಯ ಅರಿವು ಮುಖ್ಯ ಅನಿಸುತ್ತದೆ.

ಇನ್ನು ಪಕ್ಷಿಗಳ ವಿಷಯಕ್ಕೆ ಬಂದರೆ ಅವುಗಳಲ್ಲಿ ಸ್ಥಳೀಯ, ಸ್ಥಳೀಯವಲಸೆ ಮತ್ತು ವಲಸೆ ಹಕ್ಕಿಗಳು ಅಂತ ಮೂರು ಭಾಗಗಳಾಗಿ ನೋಡ ಬಹುದು.

ಸ್ಥಳೀಯ ಪಕ್ಷಿಗಳು ಅಂದರೆ ಉದಾಹರಣೆಗೆ ಕಾಗೆ, ಗುಬ್ಬಚ್ಚಿ, ಮೈನಾ ಹೀಗೆ ಹಲವು ದಿನನಿತ್ಯ ವರುಷ ಪೂರ ನಮ್ಮ ಸುತ್ತಲೂ ಕಾಣ ಸಿಗುತ್ತವೆ.

ಸ್ಥಳೀಯ ವಲಸೆ ಹಕ್ಕಿಗಳು ಅವು ವರುಷದ ಪೂರ ಅಲ್ಲಲ್ಲಿ ಆಗಾಗ ಒಂಟಿಯಾಗಿ ಕಾಣಿಸಿ ಕೊಳ್ಳುತ್ತಿರುತ್ತವೆ,ಆದರೆ ಸಂತಾನೋತ್ಪತ್ತಿ ಕಾಲದಲ್ಲಿ ಗುಂಪಾಗಿಯು,ಹೆಚ್ಚಾಗಿಯು ಕಾಣಿಸಿ ಕೊಳ್ಳುತ್ತವೆ.ಕೆರೆಗಳಲ್ಲಿ , ಹೆಚ್ಚು ಮರಗಿಡಗಳು ಇರುವಲ್ಲಿ ಉದಾಹರಣೆಗೆ ಪಾರ್ಕು, ಕೆರೆಗಳು ಹೀಗೆ‌.

ಇನ್ನು ವಲಸೆ ಹಕ್ಕಿಗಳು ಇವು ಬೇರೆ ರಾಜ್ಯಗಳಿಂದ, ದೇಶಗಳಿಂದ ವಿಶೇಷವಾಗಿ ನಮ್ಮ ದಕ್ಷಿಣದ ಭಾಗಕ್ಕೆ ಚಳಿಗಾಲದಲ್ಲಿ ಆಹಾರಕ್ಕಾಗಿ ಸಾವಿರಾರು ಕಿಲೋಮೀಟರ್ ದೂರದಿಂದಲೂ ವಲಸೆ ಬರುತ್ತವೆ ಮತ್ತೆ ಬೇಸಿಗೆ ಪ್ರಾರಂಭವಾದಾಗ ತಮ್ಮ ಜಾಗಗಳಿಗೆ ಹಿಂತಿರುಗಿ ಹೋಗಿ ಅಲ್ಲಿ ಗೂಡು ಕಟ್ಟಿ ಮರಿ ಮಾಡುತ್ತವೆ.

ಮನುಷ್ಯನೂ ಪ್ರಕೃತಿಯಲ್ಲಿ ಒಂದು ಭಾಗ ವಾಗಿರುವುದುರಿಂದ ತನ್ನ ಉಳಿವಿಗೆ ತನ್ನ ಸಹ ಜೀವಿಗಳ ಬಗ್ಗೆ ತಿಳಿದುಕೊಳ್ಳಬೇಕಾದ ಅನಿವಾರ್ಯ ಹಾಗೂ ಅವಶ್ಯ ಕಾಲಘಟ್ಟದಲ್ಲಿ ನಾವು ಇದ್ದೇವೆ……. ಶೈಲಜೇ ಶ (ರಾಜು)


Share