ಜೂನ್ ಒಂದರಿಂದ ಆರಂಭವಾಗುವ ವಿಶೇಷ ರೈಲಿನ ವೇಳಾಪಟ್ಟಿ ಬಿಡುಗಡೆ

ಮೈಸೂರು ಜೂನ್ ಒಂದರಿಂದ ಸಂಚಾರ ಆರಂಭವಾಗುವ ವಿಶೇಷ ರೈಲುನ ವೇಳಾಪಟ್ಟಿಯನ್ನು ರೈಲ್ವೆ ಇಲಾಖೆ ಪ್ರಕಟಿಸಿದೆ ಪ್ರತಿದಿನ ಕೆಎಸ್ಆರ್ ಬೆಂಗಳೂರು ಹುಬ್ಬಳ್ಳಿ ಕೆಆರ್ಎಸ್ ಕೆಎಸ್ಆರ್ ಬೆಂಗಳೂರು ಯಶವಂತಪುರ ಶಿವಮೊಗ್ಗ ಮುಂತಾದ ರೈಲು ಸಂಚಾರದ ವೇಳಾಪಟ್ಟಿಯನ್ನು ಚಿತ್ರದಲ್ಲಿ ನೋಡಬಹುದು- ಮೈಸೂರಿನಲ್ಲಿ ಈಗಾಗಲೇ ವಾರಕ್ಕೆ ಮೂರು ದಿನ ಮೈಸೂರು-ಬೆಂಗಳೂರು ರೈಲು ಸಂಚಾರ ಆರಂಭಿಸಿದೆ. ಇನ್ನು ಮುಂದೆ ಜೂನ್ 1ರಿಂದ ವಿಶೇಷ ರೈಲುಗಳು ಕೂಡ ಓಡಾಟ ನಡೆಸಲಿದೆ.
ಪ್ರತಿದಿನ ಓಡಾಡುವ ರೈಲುಗಳ ವಿವರ ಇಂತಿದೆ. ರೈಲು ಸಂಖ್ಯೆ- 02079 ಕೆಎಸ್ ಆರ್ ಬೆಂಗಳೂರು –ಹುಬ್ಬಳ್ಳಿ, 02080 ಹುಬ್ಬಳ್ಳಿ-ಕೆಎಸ್ ಆರ್ ಬೆಂಗಳೂರು, ,02089 ಯಶವಂತಪುರ-ಶಿವಮೊಗ್ಗಾ ಟೌನ್, ಜೂ.2ರಂದು 02090 ಶಿವಮೊಗ್ಗ ಟೌನ್-ಯಶವಂತಪುರ ನಡುವೆ ಓಡಲಿದೆ. ಜೂ.1ರಂದು 02779/07305 ವಾಸ್ಕೋ ಡ ಗಾಮ/ಹುಬ್ಬಳ್ಳಿ- ಹೆಚ್ ನಿಜಾಮುದ್ದೀನ್ ನಡುವೆ ಓಡಲಿದೆ.
ಜೂ.3ರಂದು 02780 ಹೆಚ್.ನಿಜಾಮುದ್ದೀನ್-ವಾಸ್ಕೋ-ಡ –ಗಾಮ ಪ್ರತಿದಿನ ಓಡಾಡಲಿದೆ. 02629 ಯಶವಂತಪುರ-ಹೆಚ್.ನಿಜಾಮುದ್ದೀನ್ ಮೇ.2ಕ್ಕೆ ಓಡಲಿದ್ದು ಮಂಗಳವಾರ-ಗುರುವಾರ ಓಡಾಡಲಿದೆ. 02630 ಹೆಚ್.ನಿಜಾಮುದ್ದೀನ್-ಯಶವಂತಪುರ ಜೂನ್ 5ರಿಂದ ವಾರದಲ್ಲಿ ಬುಧವಾರ-ಶುಕ್ರವಾರ ಸಂಚರಿಸಲಿದೆ. ಜೂನ್ 1ರಿಂದ ಪ್ರತಿದಿನ 02295 ಕೆಎಸ್ ಆರ್ ಬೆಂಗಳೂರು-ಧನಪುರ, 02296 ಧನಪುರ- ಕೆಎಸ್ ಆರ್ ಬೆಂಗಳೂರು ಜೂನ್ 3ಕ್ಕೆ, 01301 ಮುಂಬೈ ಸಿಎಸ್ ಎಂ ಟಿ ಕೆಎಸ್ ಆರ್ ಬೆಂಗಳೂರು ಜೂನ್ 1ಕ್ಕೆ, 01302 ಕೆಎಸ್ ಆರ್ ಬೆಂಗಳೂರು-ಮುಂಬೈ ಸಿಎಸ್ ಎಂಟಿ ಜೂ.2ರಂದು, 02245ಹೌರಾಹ್-ಯಶವಂತಪುರ ಜೂ.2ರಿಂದ ವಾರದಲ್ಲಿ 5ದಿನ, 022ಯಶವಂತಪುರ-ಹೌರಾಹ್ ಜೂ.4ರಂದು ವಾರಕ್ಕೆ 5ದಿನ, 01139 ಮುಂಬೈ ಸಿಎಸ್ ಎಂಟಿ –ಗದಗ ಜೂ.1ರಂದು ಪ್ರತಿದಿನ, 01140 ಗದಗ-ಮುಂಬೈ ಸಿಎಸ್ ಎಂಟಿ ಜೂ.2ರಂದು ಪ್ರತಿದಿನ ಸಂಚರಿಸಲಿದೆ ಎಂದು ನೈರುತ್ಯ ರೈಲ್ವೆ ವಲಯ ತಿಳಿಸಿದೆ.
ಅದೇ ರೀತಿ ಮೇ.27ರಿಂದ ಅಂತಾರಾಜ್ಯ ವಿಮಾನಗಳು ಕೂಡ ಹಾರಾಟ ನಡೆಸಿವೆ. ಮೈಸೂರು-ಬೆಂಗಳೂರು,ಗೋವಾ, ಕೊಚ್ಚಿನ್, ಹೈದ್ರಾಬಾದ್ ಗಳಿಗೆ ಹಾರಾಟ ನಡೆಸಲಿದೆ.
9891 ಹೈದ್ರಾಬಾದ್ ನಿಂದ 6.30ಕ್ಕೆ ಹೊರಟು ಮೈಸೂರನ್ನು 8.15ಕ್ಕೆ ತಲುಪಲಿದೆ. 9893 ಮೈಸೂರಿನಿಂದ 8.55ಕ್ಕೆ ಹೊರಟು ಕೊಚ್ಚಿನ್ ನ್ನು 10.25ಕ್ಕೆ ತಲುಪಲಿದೆ. 9894 ಕೊಚ್ಚಿನ್ ನಿಂದ 11.05ಕ್ಕೆ ಹೊರಟು ಮೈಸೂರನ್ನು 12.35ಕ್ಕೆ ತಲುಪಲಿದೆ. 9892 ಮೈಸೂರಿನಿಂದ ಮಧ್ಯಾಹ್ನ 1.15ಕ್ಕೆ ಹೊರಟು ಹೈದ್ರಾಬಾದ್ ನ್ನು 3ಗಂಟೆಗೆ ತಲುಪಲಿದೆ. 9898 ಬೆಂಗಳೂರಿನಿಂದ ಮಧ್ಯಾಹ್ 2.50ಕ್ಕೆ ಹೊರಟು ಮೈಸೂರನ್ನು 3.15ಕ್ಕೆ ತಲುಪಲಿದೆ. 9895 ಮೈಸೂರಿನಿಂದ ಮಧ್ಯಾಹ್ನ 3.55ಕ್ಕೆ ಹೊರಟು ಗೋವಾವನ್ನು ಸಂಜೆ 6ಗಂಟೆಗೆ ತಲುಪಲಿದೆ. 9896 ಗೋವಾದಿಂದ ಸಂಜೆ 7ಗಂಟೆಗೆ ಹೊರಟು ಮೈಸೂರನ್ನು ರಾತ್ರಿ 8.30ಕ್ಕೆ ತಲುಪಲಿದೆ. 9897 ಮೈಸೂರಿನಿಂದ ಸಂಜೆ 8.55ಕ್ಕೆ ಹೊರಟು ಬೆಂಗಳೂರನ್ನು 9.45ಕ್ಕೆ ತಲುಪಲಿದೆ. (ಕೆ.ಎಸ್,ಎಸ್.ಎಚ್)