ಬೆಂಗಳೂರು ಕೊರೊನ ಸಮಸ್ಯೆಯಿಂದ ಲಾಕ್ ಡೌನ್ ಆಗಿ ವಿಳಂಬವಾಗಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆ ಜೂನ್ ಇಪ್ಪತ್ತೈದರಿಂದ ಆರಂಭವಾಗಲಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಇಂದು ಪ್ರಕಟಿಸಿದರು ಎಸ್ಸೆಸ್ಸೆಲ್ಸಿ ಪರೀಕ್ಷೆ ಒಂದು ದಿನದ ಅಂತರದಲ್ಲಿ ಪ್ರತಿಯೊಂದು ವಿಷಯಕ್ಕೂ ಹತ್ತು ದಿನಗಳ ಕಾಲ ನಡೆಯಲಿದೆ ಎಂದ ಅವರು ಪಿಯುಸಿ ಪರೀಕ್ಷೆ ಜೂನ್ ಹದಿನೆಂಟು ರಂದು ನಡೆಯಲಿದೆ ಎಂದು ವೇಳಾಪಟ್ಟಿಯನ್ನು ಪ್ರಕಟಿಸಿದ್ದಾರೆ ಸುರೇಶ್ ಕುಮಾರ್ ಅವರು
ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಎಲ್ಲಿ ಇದ್ದರೂ ಅದೇ ಸ್ಥಳದಿಂದ ಪರೀಕ್ಷೆ ಬರೆಯುವಂಥ ವ್ಯವಸ್ಥೆ ಮಾಡಲಾಗಿದೆ ಜಿಲ್ಲೆ ಬಿಟ್ಟು ಜಿಲ್ಲೆ ಹೋಗಿದ್ದರೂ ಇರುವ ಜಿಲ್ಲೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬಹುದು ಎಂದು ಅವರು ತಿಳಿಸಿದರು ಒಂದು ವೇಳೆ ವಿದ್ಯಾರ್ಥಿಗಳು ಅನಾರೋಗ್ಯದಿಂದ ಬಳಲುತ್ತಿದ್ದರೆ ಸದರಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಿ ಪರೀಕ್ಷೆ ಬರೆಯುವುದಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ .