ಜ್ಞಾನ ಸಂಪಾದನೆ ಶಾಶ್ವತ ಆಸ್ತಿ : ರಾಮದಾಸ್

Share

 

ಜ್ಞಾನ ಸಂಪಾದನೆ ಶಾಶ್ವತ ಆಸ್ತಿ : ರಾಮದಾಸ್ಮೈ

ಜ್ಞಾನ ಸಂಪಾದನೆ ಎಂಬುದು ಶಾಶ್ವತ ಆಸ್ತಿ ಇದ್ದಂತೆ ಎಂದು ಶಾಸಕ ಎಸ್.ಎ.ರಾಮದಾಸ್ ತಿಳಿಸಿದರು.

2022ನೇ ಏಪ್ರಿಲ್ ನಲ್ಲಿ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮೈಸೂರು ದಕ್ಷಿಣ ವಲಯದ ಮೂವರು ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಅವರು ಮಾತನಾಡಿದರು.

ಶಾಲೆ ಅಭಿವೃದ್ಧಿ ಎಂದರೆ ಕೇವಲ ಕುರ್ಚಿ, ಬೆಂಚು, ವ್ಯವಸ್ಥೆ ಮಾತ್ರವಲ್ಲ. ಮಕ್ಕಳ ಜ್ಞಾನ ಹೆಚ್ಚಿಸುವುದು ಮುಖ್ಯ. ಆದ್ದರಿಂದ ಜ್ಞಾನ ಪಡೆಯುವತ್ತ ಮಕ್ಕಳನ್ನು ಆಕರ್ಷಿಸಬೇಕು ಎಂದರು.
ಜ್ಞಾನ ಎಂಬುದನ್ನು ಕೊಂಡು ತರಲು ಸಾಧ್ಯವಿಲ್ಲ. ನೀವೇ ಸಂಪಾದಿಸಬೇಕು. ಆದ್ದರಿಂದ ಪ್ರತಿ ಕ್ಷಣವನ್ನು ಓದಿಗಾಗಿ, ಜ್ಞಾನ ಸಂಪಾದನೆಗಾಗಿ ಮುಡುಪಿಡಿ ಎಂದು ಹೇಳಿದರು.
ಇದೇ ವೇಳೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮೈಸೂರು ದಕ್ಷಿಣ ವಲಯದ ಮೂರು ವಿದ್ಯಾರ್ಥಿಗಳಾದ ವಿಭು ವಿಶ್ವಕರ್ಮ, ಕೆಪಿಎಸ್ ಶಾಲೆ. ಮಾನಸ, ಸರ್ಕಾರಿ ಕನಕಗಿರಿ ಪ್ರೌಢಶಾಲೆ, ಹಾಗೂ ಅಗ್ರಿನ್ ಎಲಿಜಬೆತ್, ಸರ್ಕಾರಿ ಪ್ರೌಢಶಾಲೆ ರೈಲ್ವೆ ಕಾರ್ಯಗಾರದ ಈ ಮೂವರು ವಿದ್ಯಾರ್ಥಿಗಳಿಗೆ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ. ರಾಮದಾಸ್ ಅಭಿನಂದಿಸಿದರು.
ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಆರ್. ರಾಮಾರಾದ್ಯ, ಶಿಕ್ಷಕರ ಸಂಘದ ಅದ್ಯಕ್ಷ ಸೋಮೇಗೌಡ, ವಲಯದ ಎಲ್ಲಾ ಅನುಪಾಲನಾಧಿಕಾರಿಗಳು ಹಾಗೂ ಶಿಕ್ಷಕವೃಂದ, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಶಾಸಕರು ದತ್ತು ಪಡೆದಿರುವ ಕನಕಗಿರಿ ಸರ್ಕಾರಿ ಶಾಲೆಗೆ ಮಕ್ಕಳು ಕುಳಿತುಕೊಳ್ಳುವ 50 ಡೆಸ್ಕ್ ಗಳನ್ನು ಶಾಲಾ ಮುಖ್ಯ ಶಿಕ್ಷಕರಿಗೆ ಹಸ್ತಾಂತರಿಸಿದರು.


Share