ಜ್ಯುಬಿಲಿಯಂಟ್ ಕಾರ್ಖಾನೆ ಪ್ರಕರಣ ಸಿಬಿಐ ತನಿಖೆಗೆ ಆಗ್ರಹ

ಮೈಸೂರು .ಜ್ಯುಬಿಲಿಯಂಟ್ ಪ್ರಕರಣ ಸಿಬಿಐ ತನಿಖೆಗೆ ನೀಡಬೇಕು ಎಂದು ಮಾಜಿ ಸಂಸದ ಧ್ರುವನಾರಾಯಣ್ ಅವರು ಆಗ್ರಹಿಸಿದ್ದಾರೆ ಅವರು ಇಂದು ಬೆಳಗ್ಗೆ ಜಲದರ್ಶಿನಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ಜ್ಯುಬಿಲಿಯಂಟ್ ಕಾರ್ಖಾನೆ ಮಾಲೀಕರ ಜೊತೆ ಸರ್ಕಾರ ಕಿಕ್ ಬ್ಯಾಕ್ ಪಡೆದಿರುವುದು ಬಗ್ಗೆ ಸಂಶಯ ವ್ಯಕ್ತಪಡಿಸಿದರು ಅವರು ಮುಂದುವರಿದು ಮಾತನಾಡುತ್ತಾ ಕಾರ್ಖಾನೆ ಪುನರ್ ಆರಂಭಿಸುವುದರ ಬಗ್ಗೆ ತಮ್ಮ ತಕರಾರಿಲ್ಲ ಆದರೆ ಸಿಬಿಐ ತನಿಖೆ ಗೆ ನೀಡಬೇಕು ಎಂದು ಅವರು ಸರ್ಕಾರಕ್ಕೆ ಒತ್ತಾಯಿಸಿದರು.