ಟಿಟಿಡಿ ಸಿಬ್ಬಂದಿಗೆ ಕೊರೊನ ಗೋವಿಂದರಾಜ ಸ್ವಾಮಿ ದೇಗುಲ ಬಂದ್

ತಿರುಪತಿ

ಟಿಟಿಡಿ ಸಿಬ್ಬಂದಿ ಒಬ್ಬರಿಗೆ ಕರೋನ ವೈರಸ್ ದೃಢಪಟ್ಟಿದ್ದು ತಿರುಪತಿ ಶ್ರಿ ಗೋವಿಂದರಾಜ ಸ್ವಾಮಿ ದೇವಾಲಯವನ್ನು ಬಂದ್ ಮಾಡಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ ಸಿಬ್ಬಂದಿಯವರಿಗೆ ಕರೋನವೈರಸ್ ದೃಢಪಟ್ಟಿರುವ ವಿಷಯ ತಿಳಿಯುತ್ತಿದ್ದಂತೆ ದೇವಾಲಯವನ್ನು ಎರಡು ದಿನ ಸ್ಯಾನಿಟೈಸರ್ ಮಾಡಲು ಕಾರ್ಯ ಆರಂಭಿಸಲಾಗಿದೆ ಎಂದು ಹೇಳಲಾಗಿದೆ ದೇವಾಲಯದಲ್ಲಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಸಿಬ್ಬಂದಿಗೆ ಕರೋನ ವೈರಸ್ ದೃಡಪಟ್ಟಿದೆ ಎಂದು ಟಿಟಿಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ಹೇಳಲಾಗಿದೆ