ಡಾ. ಎಪಿಜೆ ಅಬ್ದುಲ್ ಕಲಾಂ ರವರ 5ನೇ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ ಹಣ್ಣು ವಿತರಣೆ

ಭಾರತದ ರಾಷ್ಟ್ರಪತಿಗಳಾಗಿದ್ದ ದಿವಂಗತ ಡಾ. ಎಪಿಜೆ ಅಬ್ದುಲ್ ಕಲಾಂ ರವರ 5ನೇ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ
ಬೇರು ಫೌಂಡೇಷನ್ ವತಿಯಿಂದ
ಒಂಟಿಕೊಪ್ಪಲ್ ವೃತ್ತದಲ್ಲಿರುವ ಡಿಆರ್ ಎಂ ಹಾಸ್ಪಿಟಲ್ ನಲ್ಲಿರುವ ರೋಗಿಗಳಿಗೆ ಹಣ್ಣು ಹಂಪಲು ವಿತರಿಸುವ ಮೂಲಕ ಎಬಿಜಿ ಅಬ್ದುಲ್ ಕಲಾಂ ರವರ ಪುಣ್ಯಸ್ಮರಣೆ ಆಚರಿಸಲಾಯಿತು
ನಂತರ ಮಾತನಾಡಿದ ಬೇರು ಫೌಂಡೇಶನ್ ಅಧ್ಯಕ್ಷರಾದ ಮಧು ಎನ್ ಪೂಜಾರ್
ಭಾರತವು ವಿಶ್ವದಲ್ಲೆ ಮಾದರಿ ರಾಷ್ಟ್ರವಾಗಿ ನಿರ್ಮಾಣವಾಗಬೇಕೆನ್ನುವುದು ಅಬ್ದುಲ್‌ ಕಲಾಂ ರವರ ಮೂಲ ಧ್ಯೇಯವಾಗಿತ್ತು, ದೇಶ ಪ್ರಗತಿಸಾಧಿಸಬೇಕಾದರೆ ವಿದ್ಯಾವಂತರು ಪದವೀಧರರು ಸಂಖ್ಯೆ ಹೆಚ್ಚಾಗಬೇಕಿದೆ
ಇಂದಿನ ದಿನಗಳಲ್ಲಿ ಉನ್ನತಸ್ಥಾನದಲ್ಲಿರುವ ಹಿರಿಯ ಸಾಧಕರನ್ನು ಗಮನಿಸಿದರೆ ಅವರೆಲ್ಲರೂ ಸರ್ಕಾರಿ ಶಾಲೆಯಲ್ಲೇ ಓದಿದವರು ಆದರೆ ಇಂದಿನ ದಿನಗಳಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ವ್ಯಾಪಾರಿಕರಣದ ಕೇಂದ್ರವಾಗಿ ಮಾರ್ಪಟ್ಟಗಿದೆ,ಅಬ್ದುಲ್ ಕಲಾಂ ಜೀವನದ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಂಡು ಅವರಂತೆ ಪಾಲಿಸಲು ಮುಂದಾದರೆ ಸಾಧಕರಾಗಿ ಸಮಾಜದಲ್ಲಿ ಉನ್ನತ ಸ್ಥಾನಕೇರಬಹುದು ಎಂದು ಮಾತನಾಡಿದರು ಇದೇ ಸಂದರ್ಭದಲ್ಲಿ
ಬೇರು ಫೌಂಡೇಶನ್ ಅಧ್ಯಕ್ಷರಾದ ಮಧು ಎನ್ ಪೂಜಾರ್ , ಪ್ರಧಾನ ಕಾರ್ಯದರ್ಶಿಗಳಾದ ಜಯ್ ಅರ್ಜುನ್, ವಿಜಿಲೆನ್ಸಿ ಸದಸ್ಯರಾದ ಶಿವಪ್ರಕಾಶ್ , DRM ಆಸ್ಪತ್ರೆಯ ಮ್ಯಾನೇಜರ್ ಲೋಕೇಶ್, ಸಂತೋಷ್ ,ಸಚಿನ್ ಹಾಗೂ ಬೇರು ಫೌಂಡೇಶನ್ ಸದಸ್ಯರು ಭಾಗವಹಿಸಿದ್ದರು