ಡಿಪ್ಲೊಮಾ, ಬಿಇ ಡೈರೆಕ್ಟ್ ಪಾಸ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಶುಕ್ರದೆಸೆ

849
Share

ಜುಲೈ 30 ಹಾಗೂ 31 ಸಿಇಟಿ ಪರೀಕ್ಷೆ ಇರುತ್ತದೆ ಎಂದು ಸರ್ಕಾರ ಘೋಷಿಸಿದೆ.

ಡಿಪ್ಲೊಮಾ, ಬಿಇ ಡೈರೆಕ್ಟ್ ಪಾಸ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಶುಕ್ರದೆಸೆ -.ಪ್ರಸಕ್ತ ಸನ್ನಿವೇಶಕ್ಕೆ ಅನುಗುಣವಾಗಿ ಎಂಜಿನಿಯರಿಂಗ್ ಮತ್ತು ಡಿಪ್ಲೊಮಾ ಪರೀಕ್ಷೆಗಳನ್ನು ರದ್ದು ಪಡಿಸಲು ತೀರ್ಮಾನಿಸಲಾಗಿದೆ ಎಂದು ಉನ್ನತ ಶಿಕ್ಷಣ ಇಲಾಖೆ ತಿಳಿಸಿದೆ .ಡಿಸಿಎಂ ಅಶ್ವತ್ಥ್ ನಾರಾಯಣ್ ಅವರು ಹೇಳಿಕೆಯೊಂದನ್ನು ನೀಡಿ ಮೂರನೇ ವರ್ಷದವರೆಗೆ ಎಲ್ಲಾ ಸೆಮಿಸ್ಟರ್ ಪರೀಕ್ಷೆಗಳನ್ನು ರದ್ದುಪಡಿಸಲಾಗಿದೆ ಎಂದು ತಿಳಿಸಿದ್ದಾರೆ .ಎಂಜಿನಿಯರಿಂಗ್ ಪರೀಕ್ಷೆಗಳನ್ನು ಮೂರನೇ ವರ್ಷದವರೆಗೆ ರದ್ದುಪಡಿಸಿ ಕೇವಲ ಕೊನೆಯ ಮತ್ತು ನಾಲ್ಕನೇ ಪರೀಕ್ಷೆ ಮಾತ್ರ ನಡೆಸಲು ತೀರ್ಮಾನಿಸಲಾಗಿದೆ ಹಾಗೆಯೇ ಡಿಪ್ಲೋಮಾ ಪರೀಕ್ಷೆಯ ಮೊದಲನೇ ಮತ್ತು ಎರಡನೇ ವರ್ಷದ ಪರೀಕ್ಷೆ ರದ್ದುಪಡಿಸಿ ಮೂರನೇ ವರ್ಷದಅಂತಿಮ ಪರೀಕ್ಷೆ ಮಾತ್ರ ನಡೆಸಲು ಉನ್ನತ ಶಿಕ್ಷಣ ಇಲಾಖೆ ಸ್ಪಷ್ಟನೆ ಸೆಪ್ಟೆಂಬರ್ ತಿಂಗಳಲ್ಲಿ ಅಂತಿಮ ವರ್ಷದ ಪರೀಕ್ಷೆಗಳನ್ನು ನಡೆಸಲಾಗುವುದು ಹಿಂದಿನ ಸೆಮಿಸ್ಟರ್ ಪರೀಕ್ಷೆಗಳ ಅಂಕಿ ಅಂಶಗಳ ಆಧಾರದಲ್ಲಿ ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೆ ಕೊನೆಯ ವರ್ಷದ ಅಥವಾ ಕೊನೆಯ ಸೆಮಿಸ್ಟರ್ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಇಲಾಖೆ ತಿಳಿಸಿದೆ.ವಿದ್ಯಾರ್ಥಿಗಳು ಬ್ಯಾಕ್ಲಾಗ್ ಆಗಿದ್ದರೆ ಅಂತಹ ಪರೀಕ್ಷೆಗಳನ್ನು ಕೊನೆಯ ವರ್ಷದ ಅಥವಾ ಕೊನೆಯ ಸೆಮಿಸ್ಟರ್ನಲ್ಲಿ ತೆಗೆದುಕೊಳ್ಳಬೇಕಾಗುತ್ತದೆ .


Share