ತಮ್ಮ ಕಾಮಿಡಿ ಶೋಗೆ ಪ್ರಧಾನಿಯವರನ್ನು ಆಹ್ವಾನಿಸಿದ ಕಪಿಲ್ ಶರ್ಮ

Share

ಕಾಮಿಡಿ ಶೋನ ನಿರೂಪಕರಾಗಿರುವ ಕಪಿಲ್ ಶರ್ಮಾ ಅವರು ಸತ್ಯ ಸಂಗತಿಯೊಂದನ್ನು ತೆರೆದಿಟ್ಟಿದ್ದಾರೆ. ಕಾಮಿಡಿ ವಿತ್ ಕಪಿಲ್ ಶೋಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಿದ್ದೆ ಎಂದು ಕಪಿಲ್ ಶರ್ಮಾ ಬಹಿರಂಗಪಡಿಸಿದ್ದಾರೆ.
‘ನಾನು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾಗ, ಸರ್ ನಮ್ಮ ಕಾಮಿಡಿ ವಿತ್ ಕಪಿಲ್ ಶೋದಲ್ಲಿ ಭಾಗವಹಿಸಿ ಎಂದು ಕೇಳಿಕೊಂಡಿದ್ದೆ. ಅವರು ತಕ್ಷಣಕ್ಕೆ ಇಲ್ಲ ಎಂದು ಹೇಳದೆ ಸದ್ಯ ನಮ್ಮ ವಿರೋಧ ಪಕ್ಷದವರು ಚೆನ್ನಾಗಿ ಕಾಮಿಡಿ ಮಾಡುತ್ತಿದ್ದಾರೆ. ನೋಡೊಣ.. ಎಂದು ಹೇಳಿದರು. ಪ್ರಧಾನಿಯವರು ಚೆನ್ನಾಗಿ ಜೋಕ್‌ಗಳನ್ನು ಮಾಡುವುದನ್ನು ನಾನು ನೋಡಿದ್ದೇನೆ, ಕೇಳಿದ್ದೇನೆ. ನಮ್ಮ ಶೋಕ್ಕೆ ಬರುವ ನಿರೀಕ್ಷೆ ಇದೆ. ಇದು ನಿಜವಾದರೆ ಇದಂತೂ ಅತ್ಯಂತ ಖುಷಿಯ ವಿಚಾರ’ ಎಂದು ಕಪಿಲ ಶರ್ಮ ಹೇಳಿದ್ದಾರೆ.


Share