ತಲೆ ಮೇಲೆ ಕಲ್ಲು ಇಟ್ಕೊಂಡು ರೈತರು ರಸ್ತೆ ತಡೆ ಚಳವಳಿ.

812
Share

ಭೂ ಸುಧಾರಣೆ ಕಾಯ್ದೆ ಜಾರಿಗೆ ಬಂದರೆ ರೈತನ ತಲೆ ಮೇಲೆ ಕಲ್ಲು ಎಂದು ಸಾಂಕೇತಿಕವಾಗಿ ತಲೆ ಮೇಲೆ ಕಲ್ಲನ್ನು ಇಟ್ಟುಕೊಂಡು ರೈತರು ಇಂದು ಪ್ರತಿಭಟನೆ ನಡೆಸಿದರು.

ಭೂ,
ಸುಧಾರಣೆ ಕಾಯ್ದೆ ತಿದ್ದುಪಡಿ ವಿರುದ್ಧ ಮೈಸೂರು ಊಟಿ ರಸ್ತೆಯಲ್ಲಿರುವ ಎಪಿಎಂಸಿ ಮಾರುಕಟ್ಟೆ ಬಳಿ ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಮೈಸೂರು ಜಿಲ್ಲೆ ಕಾರ್ಯಕರ್ತರು ರೈತರು ರಸ್ತೆ ತಡೆ ಚಳುವಳಿಯನ್ನು ಆರಂಭಿಸಿದ್ದಾರೆ .
ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ವಿರುದ್ಧವಾಗಿ ಸಾಮೂಹಿಕ ನಾಯಕತ್ವದ ಕರ್ನಾಟಕ ರಾಜ್ಯ ರೈತ ಸಂಘವು ಕರ್ನಾಟಕ ರಾಜ್ಯಾದ್ಯಂತ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳನ್ನು ತಡೆಹಿಡಿಯುವ ಮೂಲಕ ರೈತರ ಪ್ರತಿಭಟನೆಗೆ ಇಂದು ಚಾಲನೆಯನ್ನು ನೀಡುತ್ತಿರುವುದಾಗಿ ತಿಳಿಸಲಾಗಿದೆ.
ಈ ತಿದ್ದುಪಡಿಯಿಂದ ರೈತರ ಕುಲಕ್ಕೆ ಮತ್ತು ಸಮಾಜದ ಕಟ್ಟಕಡೆಯ
ವ್ಯಕ್ತಿಗೂ ಮಾರಕವಾಗಲಿದೆ ಎಂದು ಮುಖ್ಯಮಂತ್ರಿಗೆ ನೀಡಿರುವ ಮನವಿ ಪತ್ರದಲ್ಲಿ ತಿಳಿಸಲಾಗಿದೆ


Share