ತಾಕತ್ತಿದ್ದರೆ ಸಚಿವರು ಚರ್ಚೆಗೆ ಬರಲಿ.

ಮೈಸೂರು , ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ಬಗ್ಗೆ ಕಂದಾಯ ಸಚಿವ ಅಶೋಕ್ ಅವರು ತಾಕತ್ತಿದ್ದರೆ ಬಹಿರಂಗ ಚರ್ಚೆಗೆ ಬರಲಿ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ರಾಜ್ಯಾಧ್ಯಕ್ಷರಾದ ಕುರುಬೂರು ಶಾಂತಕುಮಾರ್ ಅವರು ಆಹ್ವಾನಿಸಿದ್ದಾರೆ.
ಅವರು ಇಂದು ಬೆಳಗ್ಗೆ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ಭೂಸುಧಾರಣಾ ಕಾಯಿದೆಯನ್ನು ತಿದ್ದುಪಡಿ ಮಾಡಿ ವಿಶೇಷ ಮೂಲಕ ಕಾನೂನು ಜಾರಿಗೆ ತರಲು ಮುಂದಾಗಿರುವ ಕಂದಾಯ ಸಚಿವ ಅಶೋಕ್ ರೈತರಿಗೆ ಮಣ್ಣು ಹಾಕುವ ಕಾರ್ಯಕ್ಕೆ ಮುಂದಾಗಿದ್ದಾರೆ ರೈತರಿಗೆ ಶಾಸನ ವರದಾನವಾಗುತ್ತದೆ ಎಂದು ಹೇಳುವ ಕಂದಾಯ ಸಚಿವರು ತಾಕತ್ತಿದ್ದರೆ 5 ರೈತ ಮುಖಂಡರನ್ನು ಸಭೆಗೆ ಕರೆದು ಮಾಧ್ಯಮಗಳ ಸಮ್ಮುಖದಲ್ಲಿ ಬಹಿರಂಗ ಚರ್ಚೆಗೆ ಬರಲಿ ಎಂದು ಅವರು ರಾಜ್ಯ ಸರ್ಕಾರಕ್ಕೆ ಸವಾಲ್ ಹಾಕಿದ್ದಾರೆ.

ಹವಾಮಾನ ವೈಫಲ್ಯ, ಕೋರೋನ, ಬಿಕ್ಕಟ್ಟು ಕೃಷಿ ಉತ್ಪನ್ನಗಳ ಬೆಲೆ ಕುಸಿತದ ಸಂಕಷ್ಟಗಳಿಂದ ರೈತರು ಬಳಲಿ ಬೆಂಡಾಗಿದ್ದ ಇಂತಹ ಸಂಕಷ್ಟದ ಸಮಯದಲ್ಲಿ ರೈತರನ್ನು ಕೃಷಿಯಿಂದ ಹೊರಗೆ ಹಾಕಲು ಕಾರ್ಪೋರೇಟ್ ಕಂಪನಿಗಳ ಲಾಭಿಗೆ ಮಣಿದು ರಾಜ್ಯ-ಕೇಂದ್ರ ಸರ್ಕಾರಗಳು ಎಪಿಎಂಸಿ ಭೂಸುಧಾರಣಾ ಕಾಯಿದೆ ಜಾರಿಗೆ ತರುವ ಮೂಲಕ ಮೂರ್ಖತನದ ಕಾನೂನುಗಳನ್ನು ಜಾರಿಗೆ ತರುತ್ತಿದೆ ಎಂದು ಅವರು ತಿಳಿಸಿದರು.
ನಾಳೆ ರಾಜ್ಯದ ರೈತ ಮುಖಂಡರ ಜೊತೆ ಚರ್ಚಿಸಿ ರಾಜ್ಯದ್ಯಂತ ಸಂಘಟಿತ ಹೋರಾಟ ನಡೆಸಲು ರಾಜ್ಯ ಸರ್ಕಾರಕ್ಕೆ ರೈತರ ಚಾಟಿ ಬೀಸಿ ತೋರಿಸಲು ತೀರ್ಮಾನಿಸಲಾಗುತ್ತದೆ ಎಂದು ಅವರು ತಿಳಿಸಿದರು. ಸರ್ಕಾರಗಳು ರೈತರ ರಕ್ಷಣೆ ಮಾಡುವ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಕೃಷಿಗೆ ಬೇಕಾದ ಸೌಲಭ್ಯ ದೊರೆಯುತ್ತಿಲ್ಲ ಮುಂದಿನ ದಿನಗಳಲ್ಲಿ ಮತ್ತಷ್ಟು ರೈತರ ಮಹತ್ವ ತಿಳಿಸಬೇಕಾಗಿದೆ, ಅದಕ್ಕಾಗಿ ಕೃಷಿ ಉತ್ಪನ್ನಗಳ ಬೆಲೆ ರಜಾ(crop Holiday) ಮಾಡಲು ಚಿಂತನೆ ಮಾಡಬೇಕು ಎಂದು ಅವರು ತಿಳಿಸಿದ್ದಾರೆ.
ಹಳ್ಳಿಗಾಡಿನಲ್ಲಿ ಕೊರೋನಾ ಸಂಕಷ್ಟದಿಂದ ರೈತ ಮಹಿಳೆಯರು ಜೀವನ ನಿರ್ವಹಣೆ ಮಾಡಲು ಸನ್ ಕಷ್ಟಪಡುತ್ತಿದ್ದಾರೆ ಆಸಗಿ ಫೈನಾನ್ಸ್ ಗಳು ಸಾಲ ವಸೂಲಿಗಾಗಿ ರೈತ ಮಹಿಳೆಯರು ಹಾಗೂ ಸ್ವಸಹಾಯ ಸಂಘಗಳ ಮಹಿಳೆಯರ ಮೇಲೆ ದಬ್ಬಾಳಿಕೆ, ಬೆದರಿಕೆ ಹಾಕುತ್ತಿದ್ದಾರೆ . ಈ ಸಂಬಂಧ ರಾಜ್ಯ ಸರ್ಕಾರ ಕಠಿಣ ಸೂಚನೆಯೊಂದಿಗೆ ಆಗಸ್ಟ್ 31ರ ವರೆಗೆ ಸಾಲ ವಸೂಲಾತಿ ಕೆಲಸವನ್ನು ಕೈಬಿಡಬೇಕು ಎಂದು ಆದೇಶ ಹೊರಡಿಸಲು ಅವರು ಆಗ್ರಹಿಸಿದರು.