ತಿರುಪತಿ ದೇವಸ್ಥಾನದ ಮಾಜಿ ಅರ್ಚಕರು ಎನ್ನಲಾದ ಶ್ರೀನಿವಾಸಮೂರ್ತಿ ಅವರು ಇಂದು ಬೆಳಗ್ಗೆ ನಿಧನರಾಗಿದ್ದಾರೆ ಎಂದು ದೇವಸ್ಥಾನದ ಮೂಲಗಳು ತಿಳಿಸಿವೆ. ಮಾಜಿ ಮುಖ್ಯ ಅರ್ಚಕ ಶ್ರೀನಿವಾಸಮೂರ್ತಿ ದೀಕ್ಷುತುಲು ಅವರು ಕಳೆದ ವರ್ಷ ತಮ್ಮ ಕರ್ತವ್ಯದಿಂದ ಮುಕ್ತರಾಗಿದ್ದರು ಎಂದು ತಿರುಮಲ ತಿರುಪತಿ ದೇವಸ್ತಾನದ ಅಧ್ಯಕ್ಷ ವೈ.ವಿ.ಸುಬ್ಬಾ ರೆಡ್ಡಿ ಅವರು ತಿಳಸಿದ್ದಾರೆ. 73 ವರ್ಷದ ಅವರು ಮೂರು ದಶಕಗಳು ದೇವಸ್ಥಾನದಲ್ಲಿ ಮುಖ್ಯ ಅರ್ಚಕರಾಗಿ ಸೇವೆ ಸಲ್ಲಿಸಿದ್ದಾರೆ ಎಂದು ಹೇಳಲಾಗಿದೆ.