ದೇವಾಲಯ ಮುಚ್ಚಿದರೆ ಬ್ರಾಹ್ಮಣರು ಸೇರಿದಂತೆ ಉಳಿದವರ ಜೀವನವೂ ಹಾಳಾಗಿದೆ

ದೇವಾಲಯ ಮುಚ್ಚಿರುವುದರಿಂದ ಎಷ್ಟು ವರ್ಗದ ಜನರ ಆದಾಯ ಇಲ್ಲದೆ ಜೀವನ ಹಾಳಾಗುತ್ತಿದೆ ? ದೇವಾಲಯ ಎಂದರೆ ಬ್ರಾಹ್ಮಣರಿಗೆ ಮಾತ್ರ ಆದಾಯವೇ? ಸತ್ಯ ಚಿಂತನೆ ಮಾಡಿ

೧. ಹೂ ಮಾರುವವರು
೨. ಹೊ ಬೆಳೆಯುವವರು
೩. ಮುಡಿ ಮಾಡುವವರು
೪. ಲಾಡ್ಜ್, ಅತಿಥಿ ಗೃಹದ ಮಾಲೀಕರು ಅದರಲ್ಲಿ ಕೆಲಸ ಮಾಡುವ ಕಾರ್ಮಿಕರು
೫. ಪುಣ್ಯ ಕ್ಷೇತ್ರಗಳಲ್ಲಿ ಆಟೋ, ಕಾರ್ ಚಾಲಿಸುವವರು
೬. ದೇವಾಲಯದ ಶುದ್ಧೀಕರಣ ಕಾರ್ಮಿಕರು
೭. ದೇವಾಲಯಕ್ಕೆ ದಿನಸಿ ನೀಡುವ ಅಂಗಡಿ ಕಾರ್ಮಿಕರು
೮. ವಾದ್ಯ ನುಡಿಸುವವರು
೯. ಸಂಬಳವಿಲ್ಲದೆ ಆರತಿ ತಟ್ಟೆ ಕಾಸಿನಲ್ಲಿ ಜೀವನ ನಡೆಸುವ ಪುರೋಹಿತರು
೧೦. ಹಣ್ಣು ಕಾಯಿ ಪೂಜಾ ಸಾಮಗ್ರಿ ಮಾರುವವರು
೧೧. ಕ್ಷೇತ್ರ ಇತಿಹಾಸ, ಪೋಟೋ ಮಾರುವವರು
೧೨. ಪ್ರಸಿದ್ಧ ದೇಗುಲಗಳ ಬಳಿ ಇರುವ ಛಾಯಾಗ್ರಹಣ ಮಾಡುವವರು
೧೩. ಕ್ಷೇತ್ರಗಳಲ್ಲಿನ ಕಲ್ಯಾಣ ಮಂಟಪದ ಕಾರ್ಮಿಕರು
೧೪. ತರಕಾರಿ ಮಾರುವವರು, ಬೆಳೆಯುವವರು
೧೫. ಪ್ರವಾಸಿ ಮಾರ್ಗದರ್ಶಕರು
೧೬. ದೇವಾಲಯದ ಮುಂದೆ ಭಿಕ್ಷೆ ಬೇಡುವವರು
೧೭. ದೇವಾಲಯದ ಮುಂದೆ ಚಪ್ಪಲಿ ಮತ್ತು ಸಾಮಾನುಗಳನ್ನು ರಕ್ಷಿಸುವವರು
೧೮. ಕ್ಷೇತ್ರಗಳಲ್ಲಿ ಹೋಟೆಲ್ ನಡೆಸುವವರು
೧೯. ತಿಂಡಿ, ತಿನಿಸು ಇತ್ಯಾದಿ ಮಾರಿ ಬದುಕುವವರು
೨೦. ಕೂಲಿಯ ಕೆಲಸ ಮಾಡುವವರು
೨೧. ಕಲೆ, ವಾಸ್ತುಶಿಲ್ಪ ಇತ್ಯಾದಿ ಮಾರುವವರು
೨೨. ದಾಸಯ್ಯ ವೃತ್ತಿ ಮಾಡುವವರು
೨೩. ಇತರ ಪರೋಕ್ಷ ಕೆಲಸಗಾರರು

ಹೀಗೆ ದೇವಸ್ಥಾನ ಮುಚ್ಚಿದ್ದರಿಂದ ಭಾರತದಾದ್ಯಂತ ಕೋಟ್ಯಂತರ ಜನ ಬಾಧಿತರಾಗಿದ್ದಾರೆ. ಭಾರತದಲ್ಲಿ ಅತಿ ಹೆಚ್ಚು ಆರ್ಥಿಕ ಚಟುವಟಿಕೆ ನಡೆಯುವುದು ಧಾರ್ಮಿಕ ಪ್ರವಾಸದ ಮೂಲಕವೆ. ಇಂತಹ ಚಟುವಟಿಕೆ ನಿಂತಿದ್ದರಿಂದ ದೇವಾಲಯದ ಮೇಲೆ ಅವಲಂಬಿತರಾಗಿರುವ ಹಲವಾರು ಮೇಲೆ ತಿಳಿಸಿದ ವರ್ಗದ ಜನರಿಗೆ ಜೀವನ ದುಸ್ತರವಾಗಿದೆ.

ಕೆಲವರು ಅಭಿಪ್ರಾಯ ಪಟ್ಟಂತೆ ಕೇವಲ ತಟ್ಟೆಕಾಸು ಹೋಗಿ ಬ್ರಾಹ್ಮಣರಿಗೆ ಮಾತ್ರ ಜೀವನ ಕಷ್ಡವಾಗುತ್ತಿಲ್ಲ. #ಅಂಕಿ_ಸಂಖ್ಯೆ ಮತ್ತು ಸತ್ಯಾಂಶ ಎಂದರೆ ದೇವಾಲಯದಿಂದ ಅನುಕೂಲವಾಗುವುದು ಕೇವಲ ೨% ಬ್ರಾಹ್ಮಣರಿಗೆ ಮಾತ್ರ. ಉಳಿದ ೯೮% ಇತರ ಜಾತಿಯವರಿಗೆ ! ಮೇಲೆ ತಿಳಿಸಿದ ವೃತ್ತಿಗಳಿಂದ ಜೀವನ ನಡೆಸುತ್ತಿರುವ ಜಾತಿ ಸಮೀಕ್ಷೆ ಮಾಡಿ. ನನ್ನ ಮಾತಿನಲ್ಲಿ ಇರುವ ಸತ್ಯ ನಿಮ್ಮ ಬುದ್ಧಿಗಳಿಗೆ ರಾಚುತ್ತದೆ.

ಅನಗತ್ಯವಾಗಿ ಬ್ರಾಹ್ಮಣರ ಮೇಲೆ #ಆರೋಪ, #ದ್ವೇಷ, #ತಾರತಮ್ಯ, #ಎತ್ತಿಕಟ್ಟುವಿಕೆ, #ಕೀಳಾಗಿನೋಡುವುದು ಇತ್ಯಾದಿಗಳನ್ನು ಬಿಟ್ಟು ಸಮಾಜ ಒಡೆಯುವ ಬದಲು, ಸಮಾಜ ಜೋಡಿಸುವ ಕೆಲಸ ಮಾಡಿ.

ಬ್ರಾಹ್ಮಣರು ಕಷ್ಟದಲ್ಲಿಯೂ ಪರಂಪರೆ ಉಳಿಸುವ ಕೆಲಸ ಮಾಡುತ್ತಿದ್ದಾರೆ, ಮಾಡಿದ್ದಾರೆ. ಸಾಧ್ಯವಾದರೆ ಅವರಿಗೆ ಧನ್ಯವಾದ ಹೇಳಿ ಇಲ್ಲದಿದ್ದರೆ ಸುಮ್ಮನಿರಿ. ಆಧಾರ ರಹಿತ ದೂಷಿಸದಿರಿ.

ಸಮಾಜ ಕಟ್ಟುವ ಎಲ್ಲ ಸಜ್ಜನರಿಗೂ ಧನ್ಯವಾದಗಳು

ಡಾ. ಶಲ್ವಪ್ಪಿಳ್ಳೈ ಅಯ್ಯಂಗಾರ್