ದಶಪಥ ರಸ್ತೆ ಕಾಮಗಾರಿ ಪೂರ್ಣ ಆಗದೆ ಉದ್ಘಾಟನೆ ಅನಿವಾರ್ಯ ಇದೆಯೇ

Share

ಮೈಸೂರು ಬೆಂಗಳೂರು ದಶಪಥ ರಸ್ತೆ ಯೋಜನೆ ಕಾಮಗಾರಿ ಸಂಪೂರ್ಣವಾದ ನಂತರ ಉದ್ಘಾಟನೆ ಮಾಡಿದರೆ ಚೆನ್ನಾಗಿರುತ್ತಿತ್ತು ಎಂದು ಮಾಜಿ ಸಚಿವ ಮಹದೇವಪ್ಪ ಅವರು ತಿಳಿಸಿದ್ದಾರೆ.

 ಅವರು ಇಂದು ಬೆಳಗ್ಗೆ ಸಿದ್ಧಲಿಂಗಪುರದ ಬಳಿ ಮೈಸೂರು ಬೆಂಗಳೂರು ದಶಪಥ ರಸ್ತೆ ಕಾಮಗಾರಿ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು ಮೈಸೂರು ಬೆಂಗಳೂರು ದಶಪಥ ರಸ್ತೆ ಕಾಮಗಾರಿ ಮುಗಿಯಲು ಇನ್ನೂ ಎಂಟು ತಿಂಗಳು ಬೇಕಾಗುತ್ತದೆ ಹೀಗಿರುವಾಗ ತರಾತುರಿಯಲ್ಲಿ ಉದ್ಘಾಟನೆ ಅವಶ್ಯಕತೆ ಇರಲಿಲ್ಲ ಎಂದರು.
 ದಶಪಥ ರಸ್ತೆ ಕಾಂಗ್ರೆಸ್ ಸರ್ಕಾರದ ಕನಸಸು,ಆಡಳಿತದಲ್ಲಿ ಕಾಮಗಾರಿ ನಡೆಸಲು ಮುಂದಾಗಿತ್ತು ಕೇಂದ್ರ ಸರ್ಕಾರ ಆಸ್ಕರ್ ಫರ್ನಾಂಡಿಸ್ ನೆರವು ನೀಡಿತು ಎಂದು ಮಹದೇವಪ್ಪ ಅವರು ತಿಳಿಸಿದರು. ದಶಪಥ ರಸ್ತೆ ಸಾರ್ವಜನಿಕರ ತೆರಿಗೆ ಹಣದಿಂದ ನಿರ್ಮಾಣವಾಗಿದ್ದು ಯಾರಿಗೂ ಕ್ರೆಡಿಟ್ ಸೇರುವುದಿಲ್ಲ ಎಂದರು ಮುಂದುವರೆದು ಮಾತನಾಡುತ್ತಾ ಟೋಲ್ ಹಣದ ಬಗ್ಗೆ ಮಾತನಾಡಲು ಪ್ರತಾಪ್ ಸಿಂಹ ಯಾರು ಎಂದು ವಾಗ್ದಾಳಿ ನಡೆಸಿದರು. ಅಭಿವೃದ್ಧಿ ಕಾರ್ಯ ಮಾಡುವುದು  ಸಂವಿಧಾನದ ಜನಪ್ರತಿನಿಧಿಗಳ ಜವಾಬ್ದಾರಿ ಎಂದರು ಮಾದೇವಪ್ಪ

Share