ದಾನಗಳಲ್ಲಿ ಶ್ರೇಷ್ಠವಾದುದು ಮತದಾನ

Share

 

*ದಾನಗಳಲ್ಲಿ ಶ್ರೇಷ್ಠವಾದುದು ಮತದಾನ: ಅಪೂರ್ವ ಸುರೇಶ್*

ಚಾಮುಂಡಿಪುರಂನಲ್ಲಿರುವ ಅಪೂರ್ವ ಹೋಟೆಲ್ ಮುಂಭಾಗ ಅಪೂರ್ವ ಸ್ನೇಹ ಬಳಗದ ವತಿಯಿಂದ ಸಾರ್ವಜನಿಕರಿಗೆ ಕಡ್ಡಾಯ ಮತದಾನದ ಬಗ್ಗೆ ಜಾಗೃತಿಯ ಫಲಕ ಇಳಿದು ಜಾಗೃತಿ ಮೂಡಿಸಿದರು ವಿಶೇಷವಾಗಿ ಹೋಟೆಲ್ ನ ಬಿಲ್ಗಳಲ್ಲಿ ಸಹ
ತಪ್ಪದೇ ಮೇ 10ರಂದು ಕಡ್ಡಾಯ ಮತದಾನ ಮಾಡಿ ಎಂದು ಪ್ರಕಟಿಸುವ ಮೂಲಕ ವಿಶೇಷವಾಗಿ ಗ್ರಾಹಕರಿಗೆ ಮತದಾನದ ಅರಿವು ಮೂಡಿಸಿದರು

ಜಗತ್ತಿನಲ್ಲಿ ಅನ್ನದಾನ, ಅಕ್ಷರ ದಾನ, ರಕ್ತದಾನ ಜತೆಗೆ ಈಚೆಗೆ ಮತದಾನವನ್ನು ಸೇರಿಸಲಾಗಿದೆ ಎಂದು ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್ ಹೇಳಿದರು.
ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ, ಪ್ರಜೆಗಳೇ ಪ್ರಭುಗಳು. ಒಳ್ಳೆಯ ವ್ಯಕ್ತಿಗಳನ್ನು ಚುನಾಯಿಸಲು ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಮನವಿ ಮಾಡಿದರು

ಇದೇ ಸಂದರ್ಭದಲ್ಲಿ ಅಪೂರ್ವ ಸುರೇಶ್, ಉದ್ಯಮಿ ಜಯರಾಮ್, ಕೆ ಆರ್ ಬ್ಯಾಂಕ್ ಉಪಾಧ್ಯಕ್ಷರಾದ ಬಸವರಾಜ್ ಬಸಪ್ಪ, ಸುಚೇಂದ್ರ, ರಂಜನ್, ಶಿವು, ಬಸವರಾಜು, ರಾಮು, ನಾಗರಾಜಯ್ಯ ಹಾಗೂ ಇನ್ನಿತರರು ಭಾಗಿಯಾಗಿದ್ದರು


Share