ದಿ. ಅಂಬರೀಷ್ 68 ನೇ ಹುಟ್ಟುಹಬ್ಬ ಹಿನ್ನೆಲೆ ಆಶಾ ಕಾರ್ಯಕರ್ತರಿಗೆ ಆಹಾರ ಕಿಟ್ ವಿತರಣೆ .

386
Share

ದಿ ಅಂಬರೀಶ್ 68 ನೇ ಹುಟ್ಟುಹಬ್ಬ ಹಿನ್ನೆಲೆ
ಮದ್ದೂರಿನ ಆಶಾ ಕಾರ್ಯಕರ್ತೆಯರಿಗೆ ಆಹಾರ ಕಿಟ್ ವಿತರಣೆ

ಮದ್ದೂರಿನಲ್ಲಿ ಇಂದು ದಿ. ಅಂಬರೀಶ್ ಅವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಆಶಾ ಕಾರ್ಯಕರ್ತೆಯರಿಗೆ ಆತ್ಮಸ್ಥೈರ್ಯ ಹೆಚ್ಚಿಸುವ ಸಲುವಾಗಿ ಆಹಾರ ಸಚಿವರಾದ ಕೆ.ಗೋಪಾಲಯ್ಯ, ಸಂಸದೆ ಸುಮಲತಾ ಅಂಬರೀಶ್ ಅವರು ಆಹಾರದ ಕಿಟ್ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಆಹಾರ ಸಚಿವರಾದ ಗೋಪಾಲಯ್ಯ ಅವರು ಅಂಬರೀಶ್ ಮೇರು ವ್ಯಕ್ತಿತ್ವದ ನಟ, ರಾಜಕಾರಣಿಯಾಗಿದ್ದರು. ಅವರು ಸಾಂಸ್ಕೃತಿಕ ಹಾಗೂ ಕಲಾ ಲೋಕವನ್ನು ಶ್ರೀಮಂತಗೊಳಿಸಿದ ವ್ಯಕ್ತಿ.

ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಕೇಂದ್ರ ಸಚಿವ ಸ್ಥಾನಕ್ಕೆ‌ ರಾಜೀನಾಮೆ‌ನೀಡಿ ರಾಜ್ಯಕ್ಕೆ ಗೌರವ ತಂದ ರಾಜಕಾರಣಿ

ಅವರ ಹೃದಯ ವೈಶಾಲ್ಯತೆ, ಕೆಲಸ ಕಾರ್ಯಗಳಿಂದ ಇನ್ನೂ ಜೀವಂತವಾಗಿದ್ದಾರೆ

ಸಿನಿಮಾ ರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದವರು.

ಅವರು ಇನ್ನಷ್ಟು ದಿನಗಳ‌ ಕಾಲ ನಮ್ಮ ಜೊತೆ ಇರಬೇಕಿತ್ತು

ವಸತಿ ಸಚಿವರಾಗಿದ್ದ ವೇಳೆ ನನ್ನ ಕ್ಷೇತ್ರಕ್ಕೆ 500 ಮನೆ ಮಂಜೂರು ಮಾಡಿದ್ದರು.

ಅಂದು ಮಂಜೂರಾದ ಮನೆಗಳು ಇಂದು ಪೂರ್ಣಗೊಂಡಿವೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಸಂಸದೆ ಸುಮಲತಾ ಅಂಬರೀಶ್ ಅವರು ಇವತ್ತು ರೆಬೆಲ್ ಸ್ಟಾರ್ ಅಂಬರೀಶ್ ಹುಟ್ಟು ಹಬ್ಬ..

ಸಚಿವ ಗೋಪಾಲಯ್ಯರವರು ವೈಯಕ್ತಿಕವಾಗಿ ಕಿಟ್ ವಿತರಣೆ ಮಾಡ್ತಿದ್ದರೆ ಅವರಿಗೆ ದನ್ಯವಾದಗಳು…

ಕೊರೋನಾ ವೈರಸ್ ನಾನು ಮಾತನಾಡಿದ ಭಾಷಣದಲ್ಲಿ ಕೋರೋನಾ ವಾರಿಯರ್ಸ್‌ ಗೆ ಅರ್ಪಿಸುತ್ತೆನೆ..

ಕರೋನಾ ಸೈನಿಕರು ಪ್ರಾಣವನ್ನು ತೊರೆದು ಹೊರಾಡುತ್ತಿದ್ದಾರೆ‌..

ಆಶಾಕಾರ್ಯಕರ್ತರಲ್ಲಿ ಅ ದೇವರನ್ನ ನೋಡ್ತಿದ್ದೇವೆ..

ಅಂಬರೀಶ್ ರವರ ಜನ್ಮದಿನ ಸೇವ ಮಾಡುವ ಅವಕಾಶ ಕೊಟ್ಟಿದ್ದಿರಾ..

ಆದರೆ ಇಂದು ಕೊರೋನಾ ವಾರಿಯರ್ಸ್‌ ನ ಆರಾಧಿಸುತ್ತೆವೆ..

ಎಲ್ಲಾರು ಸಹಕಾರ ನೀಡಿರುವ ಎಲ್ಲಾರೀಗೂ ದನ್ಯವಾದಗಳು ತಿಳಿಸಿದ ಅವರು ಕೊರೋನಾ ಅದಷ್ಟು ಬೇಗ ತೊಲಗಲಿ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಡಿಸಿ ಡಾ.ಎಂ.ವಿ.ವೆಂಕಟೇಶ್,‌ ಎಎಸ್ಪಿ ಡಾ.ಶೋಭಾರಾಣಿ ಹಾಗೂ ಇತರೆ ಗಣ್ಯರು ಉಪಸ್ಥಿತಿರಿದ್ದರು.


Share