ದಿ.ಧ್ರುವನಾರಾಯಣ ಅವರ ಪಕ್ಷ ನಿಷ್ಠೆ – ಮಾದರಿ

 

*ಮಾಜಿ ಸಂಸದ ಆರ್.ಧ್ರುವನಾರಾಯಣ ಅವರ ಪಕ್ಷ ನಿಷ್ಠೆ, ಸರಳತೆ, ಸಮಯ ಪಾಲನೆ ಇಂದಿನ ರಾಜಕಾರಣಿಗಳಿಗೆ ಮಾದರಿ ಎಂದು : ನಜರ್ಬಾದ್ ನಟರಾಜ್*

ಮೈಸೂರು: ನಗರದ ಎಲೆ ತೋಟ ವೃತ್ತದಲ್ಲಿ ಕೃಷ್ಣರಾಜ ಯುವ ಬಳಗ ಹಾಗೂ ಅಹಿಂದ ಸಂಘಟನೆ ವತಿಯಿಂದ ಮಾಜಿ ಸಂಸದ ಆರ್.ಧ್ರುವನಾರಾಯಣ ರವರ ಜನ್ಮದಿನಾಚರಣೆಯನ್ನು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಅವರನ್ನು ಸ್ಮರಿಸುತ್ತಾ ಆಚರಿಸಲಾಯಿತು
ನಂತರ ಮಾತನಾಡಿದ ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್
ಕಾಂಗ್ರೆಸ್ ರಾಜ್ಯದಲ್ಲಿ ಬಹುಮತ ಬಂದು ಅಧಿಕಾರ ಹಿಡಿಯಲು ಧ್ರುವನಾರಾಯಣ ಅವರ ಪರಿಶ್ರಮ ಕಾರಣ.
ಇಂದು ಈ ರೀತಿ ಅವರ ಜನ್ಮದಿನವನ್ನು ಆಚರಿಸುತ್ತೇವೆ ಎಂದು ಅಂದುಕೊಂಡಿರಲಿಲ್ಲ. ಧ್ರುವನಾರಾಯಣ ಅವರ ಪ್ರತಿರೂಪವಾಗಿ ಅವರ ಮಗ ದರ್ಶನ್ ನಡೆದುಕೊಳ್ಳುತ್ತಿದ್ದಾರೆ. ಅವರ ಜನ್ಮದಿನವನ್ನು ಆಚರಣೆ ಮಾಡುವ ಮೂಲಕ ನೆನಪಿಸಿಕೊಳ್ಳುವ ಕೆಲಸ ಮಾಡಲಾಗಿದೆ ಎಂದು ತಿಳಿಸಿದರು.
ನಂತರ ಕೆಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ ಮಾತನಾಡಿ
ಧ್ರುವನಾರಾಯಣ ನೆನಪಿನಲ್ಲಿ ಪ್ರತಿ ಕ್ಷಣವೂ ಇದ್ದೇವೆ. ಅವರು ಸದಾಕಾಲವೂ ನಮಗೆ ದಾರಿದೀಪ ಆಗಿದ್ದಾರೆ. ಅವರು ಎಂದೂ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರಲಿಲ್ಲ. ಜೀವನ ಪರ್ಯಾಂತ ಜನಸೇವೆ ಮಾಡಿಕೊಂಡು ಬಂದರು. ನಾವು ಕೂಡ ಅವರ ಮಾರ್ಗದರ್ಶನದಲ್ಲಿ ಸಾಗೋಣ. ಎಂದು ಹೇಳಿದರು

ಇದೇ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್, , ಎಂಪಿ ರಾಜೇಶ್ (ಪಳನಿ), ವರುಣ ಮಹದೇವ್, ಲೋಕೇಶ್ ,ಕನಕ ಮೂರ್ತಿ, ಮಹದೇವ್ ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು