ದಿ. ರಾಕೇಶ್ ಹುಟ್ಟುಹಬ್ಬ; ರಕ್ತದಾನ ಶಿಬಿರ

Share

ರಾಜಕಾರಣಿಗಳ ಹುಟ್ಟುಹಬ್ಬ ಸಮಾಜಕ್ಕೆ ಮಾದರಿಯಾಗಲಿ . – .ಡಾ ಬಿಜೆವಿ. 13.7.2020 .

ದಿವಂಗತ ರಾಕೇಶ್ ಸಿದ್ದರಾಮಯ್ಯನವರ ಹುಟ್ಟು ಹಬ್ಬದ ಸವಿನೆನಪಿನ ರಕ್ತದಾನ ಶಿಬಿರ.

ರಾಜಕಾರಣಿಗಳ ಹುಟ್ಟುಹಬ್ಬ ಬಡ ಜನವರ್ಗದ ಕಲ್ಯಾಣ ಕಾರ್ಯಕ್ರಮಗಳಾಗಿ ಪರಿವರ್ತನೆಯಾಗಲಿ ಹಾಗೆಯೇ ಇಂಥ ಹುಟ್ಟುಹಬ್ಬಗಳು ಸಮಾಜದಲ್ಲಿ ಮಾದರಿಯಾಗಿ ರೂಪುಗೊಂಡಾಗ ಮಾತ್ರ
ರಾಜಕಾರಣಿಗಳ ಹುಟ್ಟುಹಬ್ಬಕ್ಕೆ ಸಾರ್ಥಕತೆ ಸಿಗುವುದು ಎಂದು ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಡಾ. ಬಿ.ಜೆ. ವಿಜಯ್ ಕುಮಾರ್ ಅಭಿಪ್ರಾಯಪಟ್ಟರು.
ಶ್ರೀ ರಾಕೇಶ್ ಸಿದ್ದರಾಮಯ್ಯನವರ 44 ಹುಟ್ಟುಹಬ್ಬದ ಸವಿನೆನಪಿಗಾಗಿ
ಕರ್ನಾಟಕ ರಾಜ್ಯ ರಾಕೇಶ್ ಸಿದ್ದರಾಮಯ್ಯ ಯುವ ಬ್ರಿಗೇಡ್ ಮೈಸೂರಿನ ಶ್ರೀ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಸಭಾಂಗಣದಲ್ಲಿ ಏರ್ಪಾಡು ಮಾಡಿದ್ದ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದ ಡಾ. ಬಿಜೆವಿ ಇಂದು ರಾಜ್ಯ ಮತ್ತು ರಾಷ್ಟ್ರದಲ್ಲಿ ಶೇಕಡಾ 40 ರಷ್ಟು ರಕ್ತದ ಕೊರತೆ ಬಿಗಡಾಯಿಸುತ್ತಿದೆ. ಹಾಗೆಯೇ ರಾಜ್ಯದಲ್ಲಿ ಕೊರೋನಾ ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ದ್ವಿಗುಣವಾಗುತ್ತಿರುವ ದರಿಂದ ರಕ್ತದ ಅಭಾವ ಗರಿಷ್ಠ ಮಿತಿಯನ್ನು ಮೀರಿದೇ. ಬಹಳಷ್ಟು ಸರ್ಕಾರಿ ಆಸ್ಪತ್ರೆಗಳಲ್ಲಿ ಬಡ ವರ್ಗದ ರೋಗಿಗಳಿಗೆ ರಕ್ತವಿಲ್ಲದೆ ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಮಿತಿಮೀರುತ್ತಿದೆ. ಇಂತಹ ಗಂಭೀರ ಪರಿಸ್ಥಿತಿಯಲ್ಲಿ ಎಲ್ಲ ಮಿತ್ರರು ಸೇರಿ ರಕ್ತದಾನ ಶಿಬಿರವನ್ನು ಏರ್ಪಡಿಸಿ ನೂರಾರು ಯುವಕರು ರಕ್ತದಾನದಲ್ಲಿ ಪಾಲ್ಗೊಂಡಿರುವುದುಕ್ಕೆ ನಾನು ವೈಯಕ್ತಿಕವಾಗಿ ಹಾಗೂ ಶ್ರೀ ರಾಕೇಶ್ ಅವರ ಕುಟುಂಬ ವರ್ಗದ ಪರವಾಗಿ ಅತ್ಯಂತ ಗೌರವದ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ. ಆಡಂಬರದ ಹಾಗೂ ಅವಿವೇಕದ ಹುಟ್ಟುಹಬ್ಬಗಳು ಸಮಾಜದ ಜನತೆಗೆ ನೆಮ್ಮದಿಯನ್ನ ನೀಡಲಾರದು. ನಾನು ಶ್ರೀ ರಾಕೇಶ್ ಅವರು ಬದುಕಿದ್ದಾಗ ಜಿಲ್ಲೆಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಕೆಲಸ ಮಾಡಿದ್ದೆ. ನಂತರದ ದಿನಗಳಲ್ಲಿ ಅವರ ತಂದೆ ಮುಖ್ಯಮಂತ್ರಿಯಾದಾಗ ಮತ್ತು ಅವರ ಕಿರಿಯ ಮಗ ಡಾ. ಯತೀಂದ್ರ ಸಿದ್ದರಾಮಯ್ಯ ವರುಣ ವಿಧಾನಸಭಾ ಕ್ಷೇತ್ರಕ್ಕೆ ಶಾಸಕರಾದಗ ಮೈಸೂರು ಜಿಲ್ಲೆಯ ಕಾಂಗ್ರೆಸ್ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದೇನೆ. ನಂಬಿಕೆ ಹಾಗೂ ಪ್ರಾಮಾಣಿಕ ರಾಜಕಾರಣಕ್ಕೆ ಈ ಮುಂದುವರೆದ ನಮ್ಮ ಸಂಬಂಧಗಳೆ ಸಾಕ್ಷಿ ಎಂದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಮಾಜಿ ಶಾಸಕರಾದ ಎಂ ಕೆ ಸೋಮಶೇಖರ್ ರವರು ಮಾತನಾಡಿ ಶ್ರೀ ರಾಕೇಶ್ ಅವರು ಈಗ ಬದುಕಿದ್ದರೆ ಶಾಸಕರಾಗಿ ರಾಜ್ಯದಲ್ಲಿ ದೊಡ್ಡ ನಾಯಕರಾಗಿ ಬೆಳೆಯುತ್ತಿದ್ದರು, ಆದರೆ ವಿಧಿ ಅವರ ಬದುಕಿನಲ್ಲಿ ದೀರ್ಘಕಾಲದ ಬದುಕಿಗೆ ಬೆಂಕಿ ಹಚ್ಚಿತ್ತು. ರಕ್ತದಾನ ಸಮಾಜ ಅತ್ಯಂತ ಶ್ರೇಷ್ಠ ದಾನ, ಪ್ರತಿವರ್ಷ ತಾವುಗಳು ಇದನ್ನ ಮುಂದುವರಿಸುವಂತೆ ಸೂಚನೆ ನೀಡಿದರು. ರಕ್ತದಾನ ಶಿಬಿರದಲ್ಲಿ ರಾಜ್ಯ ಯುವ ಬ್ರಿಗೇಡ್ ಅಧ್ಯಕ್ಷರಾದ ಸಂಪತ್ ಕುಮಾರ್, ರಾಜೇಶ್, ಕುರುಬರಹಳ್ಳಿಹೇಮಂತ್, ಸ್ವಾಮಿಗೌಡ, ಕಾಡನಹಳ್ಳಿ ಕೆಪಿ ಚಿಕ್ ಸ್ವಾಮಿ. ಕಾಂಗ್ರೆಸ್ ಮುಖಂಡರಾದ ಇಂಕಲ್ ಪ್ರಕಾಶ್, ಶಿವಪ್ರಸಾದ್. ಹುಣಸೂರು ಬಸವಣ್ಣ. ದಡದಳ್ಳಿ ಮಹಾದೇವ, ಹೇಮಂತ, ಯುವ ಕಾಂಗ್ರೆಸ್ ಅಧ್ಯಕ್ಷರಾದ ಮೋಸಿನ್ ಖಾನ್, ಹಾಗೂ ನೂರಾರು ಯುವಕರು ರಕ್ತದಾನದಲ್ಲಿ ಪಾಲ್ಗೊಂಡರು. ಸಿದ್ದರಾಮಯ್ಯನವರ ಹುಟ್ಟು ಹಬ್ಬದ ಸವಿನೆನಪಿನ ರಕ್ತದಾನ ಶಿಬಿರ.

ರಾಜಕಾರಣಿಗಳ ಹುಟ್ಟುಹಬ್ಬ ಬಡ ಜನವರ್ಗದ ಕಲ್ಯಾಣ ಕಾರ್ಯಕ್ರಮಗಳಾಗಿ ಪರಿವರ್ತನೆಯಾಗಲಿ ಹಾಗೆಯೇ ಇಂಥ ಹುಟ್ಟುಹಬ್ಬಗಳು ಸಮಾಜದಲ್ಲಿ ಮಾದರಿಯಾಗಿ ರೂಪುಗೊಂಡಾಗ ಮಾತ್ರ
ರಾಜಕಾರಣಿಗಳ ಹುಟ್ಟುಹಬ್ಬಕ್ಕೆ ಸಾರ್ಥಕತೆ ಸಿಗುವುದು ಎಂದು ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಡಾ. ಬಿ.ಜೆ. ವಿಜಯ್ ಕುಮಾರ್ ಅಭಿಪ್ರಾಯಪಟ್ಟರು.
ಶ್ರೀ ರಾಕೇಶ್ ಸಿದ್ದರಾಮಯ್ಯನವರ 44 ಹುಟ್ಟುಹಬ್ಬದ ಸವಿನೆನಪಿಗಾಗಿ
ಕರ್ನಾಟಕ ರಾಜ್ಯ ರಾಕೇಶ್ ಸಿದ್ದರಾಮಯ್ಯ ಯುವ ಬ್ರಿಗೇಡ್ ಮೈಸೂರಿನ ಶ್ರೀ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಸಭಾಂಗಣದಲ್ಲಿ ಏರ್ಪಾಡು ಮಾಡಿದ್ದ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದ ಡಾ. ಬಿಜೆವಿ ಇಂದು ರಾಜ್ಯ ಮತ್ತು ರಾಷ್ಟ್ರದಲ್ಲಿ ಶೇಕಡಾ 40 ರಷ್ಟು ರಕ್ತದ ಕೊರತೆ ಬಿಗಡಾಯಿಸುತ್ತಿದೆ. ಹಾಗೆಯೇ ರಾಜ್ಯದಲ್ಲಿ ಕೊರೋನಾ ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಗುಣವಾಗುತ್ತಿರುವ ದರಿಂದ ರಕ್ತದ ಅಭಾವ ಗರಿಷ್ಠ ಮಿತಿಯನ್ನು ಮೀರಿದೇ. ಬಹಳಷ್ಟು ಸರ್ಕಾರಿ ಆಸ್ಪತ್ರೆಗಳಲ್ಲಿ ಬಡ ವರ್ಗದ ರೋಗಿಗಳಿಗೆ ರಕ್ತವಿಲ್ಲದೆ ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಮಿತಿಮೀರುತ್ತಿದೆ. ಇಂತಹ ಗಂಭೀರ ಪರಿಸ್ಥಿತಿಯಲ್ಲಿ ಎಲ್ಲ ಮಿತ್ರರು ಸೇರಿ ರಕ್ತದಾನ ಶಿಬಿರವನ್ನು ಏರ್ಪಡಿಸಿ ನೂರಾರು ಯುವಕರು ರಕ್ತದಾನದಲ್ಲಿ ಪಾಲ್ಗೊಂಡಿರುವುದು ಕ್ಕೆ ನಾನು ವೈಯಕ್ತಿಕವಾಗಿ ಹಾಗೂ ಶ್ರೀ ರಾಕೇಶ್ ಅವರ ಕುಟುಂಬ ವರ್ಗದ ಪರವಾಗಿ ಅತ್ಯಂತ ಗೌರವದ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ. ಆಡಂಬರದ ಹಾಗೂ ಅವಿವೇಕದ ಹುಟ್ಟುಹಬ್ಬಗಳು ಸಮಾಜದ ಜನತೆಗೆ ನೆಮ್ಮದಿಯನ್ನ ನೀಡಲಾರದು. ನಾನು ಶ್ರೀ ರಾಕೇಶ್ ಅವರು ಬದುಕಿದ್ದಾಗ ಜಿಲ್ಲೆಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ನಾನು ಕೆಲಸ ಮಾಡಿದ್ದೆ. ನಂತರದ ದಿನಗಳಲ್ಲಿ ಅವರ ತಂದೆ ಮುಖ್ಯಮಂತ್ರಿಯಾದಾಗ ಮತ್ತು ಅವರ ಕಿರಿಯ ಮಗ ಡಾ. ಯತೀಂದ್ರ ಸಿದ್ದರಾಮಯ್ಯ ವರುಣ ವಿಧಾನಸಭಾ ಕ್ಷೇತ್ರಕ್ಕೆ ಶಾಸಕರಾದಗ ಮೈಸೂರು ಜಿಲ್ಲೆಯ ಕಾಂಗ್ರೆಸ್ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದೇನೆ. ನಂಬಿಕೆ ಹಾಗೂ ಪ್ರಾಮಾಣಿಕ ರಾಜಕಾರಣಕ್ಕೆ ಈ ಮುಂದುವರೆದ ನಮ್ಮ ಸಂಬಂಧಗಳೆ ಸಾಕ್ಷಿ ಎಂದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಮಾಜಿ ಶಾಸಕರಾದ ಎಂ ಕೆ ಸೋಮಶೇಖರ್ ರವರು ಮಾತನಾಡಿ ಶ್ರೀ ರಾಕೇಶ್ ಅವರು ಈಗ ಬದುಕಿದ್ದರೆ ಶಾಸಕರಾಗಿ ರಾಜ್ಯದಲ್ಲಿ ದೊಡ್ಡ ನಾಯಕರಾಗಿ ಬೆಳೆಯುತ್ತಿದ್ದರು, ಆದರೆ ವಿಧಿ ಅವರ ಬದುಕಿನಲ್ಲಿ ದೀರ್ಘಕಾಲದ ಬದುಕಿಗೆ ಬೆಂಕಿ ಹಚ್ಚಿತ್ತು. ರಕ್ತದಾನ ಸಮಾಜ ಅತ್ಯಂತ ಶ್ರೇಷ್ಠ ದಾನ, ಪ್ರತಿವರ್ಷ ತಾವುಗಳು ಇದನ್ನ ಮುಂದುವರಿಸುವಂತೆ ಸೂಚನೆ ನೀಡಿದರು. ರಕ್ತದಾನ ಶಿಬಿರದಲ್ಲಿ ರಾಜ್ಯ ಯುವ ಬ್ರಿಗೇಡ್ ಅಧ್ಯಕ್ಷರಾದ ಸಂಪತ್ ಕುಮಾರ್, ರಾಜೇಶ್, ಕುರುಬರಹಳ್ಳಿಹೇಮಂತ್, ಸ್ವಾಮಿಗೌಡ, ಕಾಡನಹಳ್ಳಿ ಕೆಪಿ ಚಿಕ್ ಸ್ವಾಮಿ. ಕಾಂಗ್ರೆಸ್ ಮುಖಂಡರಾದ ಇಂಕಲ್ ಪ್ರಕಾಶ್, ಶಿವಪ್ರಸಾದ್. ಹುಣಸೂರು ಬಸವಣ್ಣ. ದಡದಳ್ಳಿ ಮಹಾದೇವ, ಹೇಮಂತ, ಯುವ ಕಾಂಗ್ರೆಸ್ ಅಧ್ಯಕ್ಷರಾದ ಮೋಸಿನ್ ಖಾನ್, ಹಾಗೂ ನೂರಾರು ಯುವಕರು ರಕ್ತದಾನದಲ್ಲಿ ಪಾಲ್ಗೊಂಡರು.


Share