ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಅಗ್ನಿ ಅವಘಡ

Share

ನವ ದೆಹಲಿ:
ದೆಹಲಿಯ ಏಮ್ಸ್‌ನ ತುರ್ತು ಚಿಕಿತ್ಸಾ ವಿಭಾಗದ ಬಳಿ ಇರುವ ಎಂಡೋಸ್ಕೋಪಿ ಕೊಠಡಿಯಲ್ಲಿ ಇಂದು ಬೆಂಕಿ ಕಾಣಿಸಿಕೊಂಡಿತ್ತು. ಎಂಟು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಹತೋಟಿಗೆ ತರಲಾಗಿದೆ.
ಬೆಳಗ್ಗೆ 11:54ಕ್ಕೆ ತುರ್ತು ಚಿಕಿತ್ಸಾ ವಿಭಾಗದಿಂದ ಅಗ್ನಿಶಾಮಕ ಕರೆ ಬಂದ ನಂತರ ಸುತ್ತಮುತ್ತಲಿನ ಎಲ್ಲಾ ರೋಗಿಗಳು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು ಎಂದು ಮೂಲಗಳು ತಿಳಿಸಿವೆ.
“ಬೆಂಕಿ ಅನಾಹುತ ನಿಯಂತ್ರಣಕ್ಕೆ ಬಂದಿದೆ. ನಿರ್ದೇಶಕರು ಕೂಡ ಪರಿಸ್ಥಿತಿಯನ್ನು ಅವಲೋಕಿಸಲು ಸ್ಥಳಕ್ಕೆ ತಲುಪಿದ್ದಾರೆ” ಎಂದು ಏಮ್ಸ್ ಮೂಲಗಳು ತಿಳಿಸಿದೆ.
ಎಂಡೋಸ್ಕೋಪಿ ಕೊಠಡಿಯು ಹಳೆಯ ಹೊರರೋಗಿ ವಿಭಾಗದ (OPD) ಎರಡನೇ ಮಹಡಿಯಲ್ಲಿರುವುದಾಗಿ ತಿಳಿದುಬಂದಿದೆ.
“ಓಲ್ಡ್ ರಾಜ್ ಕುಮಾರಿ ಒಪಿಡಿ ಕಟ್ಟಡದ ಎರಡನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡು ಅಗ್ನಿಶಾಮಕ ಸಿಬ್ಬಂದಿ ಅದನ್ನು ನಿಯಂತ್ರಣಕ್ಕೆ ತಂದರು, ಆದರೆ ಶೋಧ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ” ಎಂದು ಅಗ್ನಿಶಾಮಕ ಇಲಾಖೆ ತಿಳಿಸಿದೆ.

ಹೆಚ್ಚಿನ ಮಾಹಿತಿ ಬರಬೇಕಿದೆ.


Share