ದೇಶದಾದ್ಯಂತ 1,309 ರೈಲ್ವೆ ನಿಲ್ದಾಣಗಳ ಪರಿವರ್ತನೆ

ಅಮೃತ ಭಾರತ ನಿಲ್ದಾಣ ಯೋಜನೆಯಡಿ’ಯಲ್ಲಿ ದೇಶದಾದ್ಯಂತ 508 ರೈಲ್ವೆ ನಿಲ್ದಾಣಗಳಿಗೆ ಚಾಲನೆ
ದೇಶಾದ್ಯಂತ 508 ರೈಲ್ವೆ ನಿಲ್ದಾಣಗಳಿಗೆ 25,000 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ನಿಲ್ದಾಣಗಳು ವಿಶ್ವ ದರ್ಜೆಗೆ, ಏರಿಸಲಾಗಿದೆ
• ಕರ್ನಾಟಕದ 13 ರೈಲ್ವೆ ನಿಲ್ದಾಣಗಳು 303 ಕೋಟಿ ರೂಪಾಯಿಯಲ್ಲಿ ಆಧುನೀಕರಣಗೊಂಡು ಮೇಲ್ದರ್ಜೆಗೆರಲಿವೆ.
ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿ ಭಾನುವಾರ (06.08.2023) ರಂದು ವಿಡಿಯೋ ಕಾನ್ಸರೆನ್ಸ್ ಮೂಲಕ ‘ಅಮೃತ್ ಭಾರತ್ ನಿಲ್ದಾಣ ಯೋಜನೆ’ಯಡಿ ದೇಶಾದ್ಯಂತ 508 ರೈಲ್ವೆ ನಿಲ್ದಾಣಗಳ ರೂಪಾಂತರಕ್ಕೆ ಚಾಲನೆ ನೀಡಿದರು.
ಅಮೃತ ಭಾರತ ನಿಲ್ದಾಣ ಯೋಜನೆಯಡಿಯಲ್ಲಿ ದೇಶದಾದ್ಯಂತ 1,309 ರೈಲ್ವೆ ನಿಲ್ದಾಣಗಳನ್ನು ಪರಿವರ್ತನೆ ಮತ್ತು ಪುನರುಜ್ಜಿವನಗೊಳ್ಳಲು ಸಜ್ಜಾಗಿವೆ.
ಇವುಗಳಲ್ಲಿ ಕರ್ನಾಟಕದ 13 ರೈಲ್ವೆ ನಿಲ್ದಾಣಗಳಾದ ಬಳ್ಳಾರಿ, ಘಟಪ್ರಭಾ, ಗೋಕಾಕ್ ರೋಡ್, ಬೀದರ, ಅಳ್ಳಾವರ, ಗದಗ, ಕೊಪ್ಪಳ, ಹರಿಹರ, ಅರಸೀಕೆರೆ, ಮಂಗಳೂರು ಜಂಕ್ಷನ್, ವಾಡಿ, ಕಲಬುರಗಿ ಜಂಕ್ಷನ್, ಶಹಾಬಾದ ಈ ನಿಲ್ದಾಣಗಳು 303 ಕೋಟಿ ರೂಪಾಯಿಗಳಲ್ಲಿ ಆಧುನೀಕರಣವಾಗಿ ಹೊರಹೊಮ್ಮಲಿವೆ.