ಧರ್ಮ ,ಮಿತ್ರರಂತೆ ರಕ್ಷಿಸುತ್ತದೆ .

612
Share

ಧರ್ಮವು ಮನುಷ್ಯನ ಜೀವನದಲ್ಲಿ ಮಿತ್ರರಂತೆ ರಕ್ಷಿಸುತ್ತದೆ ಎಂದು ಶ್ರೀ ಗಣಪತಿ ಸಚಿದಾನಂದ ಸ್ವಾಮೀಜಿಯವರ ಸಂದೇಶವಾಗಿರುತ್ತದೆ.ಈ ಹಿನ್ನೆಲೆಯಲ್ಲಿ ಮಿತ್ರ ಎಂದರೆ ವಿದ್ಯೆ ಎಂಬುದರ ಮೂಲಕ ಸರಳವಾಗಿ ತಿಳಿಸಿಕೊಡುವ ಪ್ರಯತ್ನ ಮಾಡಿರುತ್ತಾರೆ ಶ್ರೀ ಸ್ವಾಮೀಜಿಯವರು .ಮಾನವನಿಗೆ ಪ್ರಯಾಣ ಸಮಯದಲ್ಲಿ ವಿದ್ಯೆ ಮಿತ್ರನಂತೆ ರೋಗಬಾಧೆ ನಿವಾರಣೆಗೆ ಔಷಧಿ ಮಿತ್ರನಂತೆ ಮನೆಯಲ್ಲಿ ಪತಿ ಪತ್ನಿಯರು ಸ್ನೇಹದಿಂದ ಇದ್ದರೆ ಸ್ನೇಹ ಮಿತ್ರನಂತೆ ಎಂದ ಶ್ರೀಗಳು ಮಾನವ ಜನ್ಮ ತಾಳಿದವನು ಧರ್ಮದಿಂದ ನಡೆದರೆ ಧರ್ಮ ನಮ್ಮ ಮಿತ್ರನಂತೆ ಮರಣದ ನಂತರ ನಮ್ಮ ಜೊತೆ ಬ೦ದು ಸದ್ಗತಿ ಪ್ರಾಪ್ತಿಯಾಗುತ್ತದೆ ಎಂದು ಧರ್ಮ, ಮಿತ್ರ ನಡುವೆ ಇರುವ ಸಂಬಂಧ ತಿಳಿಸಿದರು.


Share