ಧ್ವಜದ ಬಗೆಗಿನ ನೀತಿ ಸಂಹಿತೆಗಳನ್ನು ಅರಿವು ಮುಖ್ಯ

 

*ರಾಷ್ಟ್ರಧ್ವಜವನ್ನು ಅತ್ಯಂತ ಹೆಮ್ಮೆಯಿಂದ ಮತ್ತು ಗೌರವದಿಂದ ಕಾಣಬೇಕು : ಕೆ ರಘುರಾಮ್ ವಾಜಪೇಯಿ*

ಕನಕಗಿರಿ ಯಲ್ಲಿರುವ ಸರ್ಕಾರಿ ಶಾರದಾ ವಿಳಾಸ ಹಿರಿಯ ಪ್ರಾಥಮಿಕ ಶಾಲೆಯ
ನಡೆದ ಕಾರ್ಯಕ್ರಮದಲ್ಲಿ ಹಿರಿಯ ಸಮಾಜ ಸೇವಕರಾದ ಕೆ ರಘುರಾಮ್ ವಾಜಪೇಯಿ ಅವರು ರಾಷ್ಟ್ರಧ್ವಜ, ಲಾಂಛನಗಳ ಸಚಿತ್ರ ಸಮಗ್ರ ಮಾಹಿತಿ ನೀಡಿದರು

ಮೈಸೂರು: ‘ರಾಷ್ಟ್ರಧ್ವಜವನ್ನು ಅತ್ಯಂತ ಹೆಮ್ಮೆಯಿಂದ ಮತ್ತು ಗೌರವದಿಂದ ಕಾಣಬೇಕು. ಧ್ವಜದ ಬಗೆಗಿನ ನೀತಿ ಸಂಹಿತೆಗಳನ್ನು ಅರಿತು ಯಾವ ಕ್ರಮದಿಂದ ಧ್ವಜಾರೋಹಣ ಮತ್ತು ಧ್ವಜಾವರೋಹಣ ಮಾಡಬೇಕು ಎಂಬ ಸಮಗ್ರ ಮಾಹಿತಿಯನ್ನು ಎಲ್ಲರೂ ಪಡೆಯಬೇಕು’ ಎಂದು ಹಿರಿಯ ಸಮಾಜ ಸೇವಕರಾದ ಕೆ ರಘುರಾಮ್ ವಾಜಪೇಯಿ ಹೇಳಿದರು.

ಕನಕಗಿರಿಯಲ್ಲಿರುವ ಸರ್ಕಾರಿ ಶಾರದಾ ವಿಲಾಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ
ವಿಚಾರ ವಿನಮಯ ವೇದಿಕೆಯ ವತಿಯಿಂದ ಸ್ವಾತಂತ್ರ್ಯೋತ್ಸವ ಅಂಗವಾಗಿ ಶಾಲಾ ಮಕ್ಕಳಿಗೆ ರಾಷ್ಟ್ರಧ್ವಜ ಹಾಗೂ ರಾಷ್ಟ್ರಗೀತೆಯ ಬಗ್ಗೆ ಜಾಗೃತಿ
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು
ರಾಷ್ಟ್ರಧ್ವಜ ಮಾಹಿತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ರಾಷ್ಟ್ರದ ಉನ್ನತಿಯ ಪ್ರತೀಕವಾದ ರಾಷ್ಟ್ರಧ್ವಜ, ರಾಷ್ಟ್ರಗೀತೆ ಹಾಗೂ ರಾಷ್ಟ್ರ ಲಾಂಛನಗಳನ್ನು ಗೌರವಿಸುವುದು ಪ್ರತಿಯೊಬ್ಬ ಜವಾಬ್ದಾರಿಯುತ ನಾಗರಿಕನ ಕರ್ತವ್ಯವಾಗಿದೆ’ ಎಂದರು.
ಎಲ್ಲರೂ ರಾಷ್ಟ್ರಧ್ವಜದ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು. ರಾಷ್ಟ್ರಧ್ವಜ, ರಾಷ್ಟ್ರ ಗೀತೆ ಮತ್ತು ರಾಷ್ಟ್ರ ಲಾಂಛನಗಳ ಸಚಿತ್ರ ಸಮಗ್ರ ಮಾಹಿತಿ ನೀಡಿ, ರಾಷ್ಟ್ರಧ್ವಜದ ಗಂಟು, ಆರೋಹಣ, ಅವರೋಹಣ ಕ್ರಮ ಪ್ರಾತ್ಯಕ್ಷಿಕೆಯೊಂದಿಗೆ ಮಾಡಿ ತೋರಿಸಿದರು.

ನಗರಪಾಲಿಕ ಸದಸ್ಯರಾದ ಮ ವಿ ರಾಮ್ ಪ್ರಸಾದ್ ಮಾತನಾಡಿ
ಪ್ಲಾಸ್ಟಿಕ್ ಧ್ವಜ ಬೇಡ
ದೇಶಾದ್ಯಂತ ಪ್ಲಾಸ್ಟಿಕ್ ಮತ್ತು ಕಾಗದದಲ್ಲಿ ತಯಾರಿಸಿದ್ದ ತ್ರಿವರ್ಣ ಧ್ವಜದ ಬಳಕೆ ಮತ್ತು ಮಾರಾಟ ಮಾಡದಂತೆ ಕೇಂದ್ರ ಗೃಹ ಸಚಿವಾಲಯ ನಿಷೇಧ ಹೆರಿದೆಯಾದರೂ ಪ್ಲಾಸ್ಟಿಕ್ ಮತ್ತು ಕಾಗದದ ರಾಷ್ಟ್ರಧ್ವಜಗಳ ಬಳಕೆ ಮತ್ತು ಮಾರಾಟ ಇನ್ನು ನಿಲ್ಲುವಂತೆ ಕಾಣುತ್ತಿಲ್ಲ ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯ ದಿನದಂದು ದೇಶಾದ್ಯಂತ ಸರ್ಕಾರಿ ಶಾಲಾ ಕಾಲೇಜು ಸಂಘ ಸಂಸ್ಥೆಗಳಲ್ಲಿ ಶುದ್ಧ ಖಾದಿಯಿಂದ ತಯಾರಿಸಿದ ಧ್ವಜಗಳನ್ನು ಹಾರಿಸುತ್ತಾರೆ ಆದರೆ ಶಾಲಾ ಮಕ್ಕಳ ಕೈಯಲ್ಲಿ ಹೆಚ್ಚಾಗಿ ಕಾಗದ ಅಥವಾ ಪ್ಲಾಸ್ಟಿಕ್‌ ನಿಂದ ತಯಾರಿಸಿದ ಧ್ವಜಗಳು ಕಂಡು ಬರುತ್ತಿದೆ ಮಾರುಕಟ್ಟೆಯಲ್ಲಿ ಇವುಗಳ ಮಾರಾಟವೇ ಅಧಿಕವಾಗಿದೆ.ಕಡಿಮೆ ಬೆಲೆಗೆ ಸಿಗುವ ಈ ಪ್ಲಾಸ್ಟಿಕ್ ಧ್ವಜಗಳನ್ನು ಮಕ್ಕಳು ಖರೀದಿಸಿ ಕಾರ್ಯಕ್ರಮ ಮುಗಿದ ನಂತರ ಶಾಲಾ ಆವರಣದಲ್ಲಿ ಅಥವಾ ರಸ್ತೆ ಚರಂಡಿ ಪಕ್ಕದಲ್ಲಿ ಎಸೆದು ಬಿಡುತ್ತಾರೆ ಈ ಧ್ವಜಗಳು ತ್ಯಾಜ್ಯದಲ್ಲಿ ಸೇರಿ ತಿಪ್ಪೆಗುಂಡಿಯಲ್ಲಿ ಛಿದ್ರ ಛಿದ್ರವಾಗಿ ಬಿದ್ದಿರುತ್ತವೆ ಇಂತಹ ನಡುವಳಿಕೆ ಯಿಂದಾಗಿಯೇ ನಾವು ರಾಷ್ಟ್ರಧ್ವಜಕ್ಕೆ ಅಗೌರವ ತೋರಿದಂತಾಗುತ್ತದೆ ಆದ್ದರಿಂದ ಪ್ರತಿಯೊಬ್ಬ ಭಾರತೀಯರು ಕೂಡ ಈ ಸಮಸ್ಯೆಯ ಬಗ್ಗೆ ಗಂಭೀರ ಚಿಂತನೆ ಮಾಡಬೇಕಾಗಿದೆ ಸ್ವಾತಂತ್ರ್ಯ ದಿನಾಚರಣೆ ಆಚರಿಸಲು ಕೆಲವೇ ದಿನಗಳು ಬಾಕಿ ಉಳಿದಿವೆ.ಈ ಸಂದರ್ಭದಲ್ಲಿ ಯಾರೂ ಪ್ಲಾಸ್ಟಿಕ್ ಹಾಗೂ ಕಾಗದದ ಧ್ವಜಗಳು ಬಳಸದಂತೆ ಹಾಗೂ ಮಾರಾಟ ಮಾಡದಂತೆ ರಾಷ್ಟ್ರಧ್ವಜದ ಮಹತ್ವದ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಇಲಾಖೆ ಜನರಲ್ಲಿ ಜಾಗೃತಿ ಮೂಡಿಸಬೇಕು

ಇದೇ ಸಂದರ್ಭದಲ್ಲಿ ಸಮಾಜ ಸೇವಕರಾದ ಕೆ ರಘುರಾಮ್ ವಾಜಪೇಯಿ, ನಗರ ಪಾಲಿಕೆ ಸದಸ್ಯರದ ಮ ವಿ ರಾಮ್ ಪ್ರಸಾದ್, ವಿಚಾರ ವಿನಮಯ ವೇದಿಕೆಯ ಅಧ್ಯಕ್ಷರಾದ ಪುರುಷೋತ್ತಮ್, ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷರಾದ ವಿಕ್ರಮ ಅಯ್ಯಂಗಾರ್ , ಅಜಯ್ ಶಾಸ್ತ್ರಿ, ಆರ್ ನಾರಾಯಣ,ಶಾಲೆಯ ಮುಖ್ಯ ಶಿಕ್ಷಕರಾದ ಉಷಾ ಮತ್ತು ಜಯಲಕ್ಷ್ಮಿ ಹಾಗೂ ಇನ್ನಿತರರು ಭಾಗವಹಿಸಿದ್ದರು