ಮೈಸೂರು ನಗರ ಹಾಗೂ ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ, ರಾಜ್ಯ ಬಿಜೆಪಿ ಸರ್ಕಾರವು ಕೋವಿಡ್ 19 ಮಹಾಮಾರಿ ನಿಯಂತ್ರಿಸಲು ಖರೀದಿಸಲಾಗಿರುವ ಉಪಕರಣಗಳು ಮಾರುಕಟ್ಟೆ ಬೆಲೆಗಿಂತ ಅತಿ ದುಬಾರಿಯಾಗಿರುವುದು ಮತ್ತು 3300 ಕೋಟಿ ಅವ್ಯವಹಾರ ನಡೆಸಲಾಗಿದೆ ಎನ್ನಲಾಗಿರುವ ದರ ಬಗ್ಗೆ ತನಿಖೆಯಾಗಬೇಕು ಮತ್ತು ಮಾನ್ಯ ರಾಜ್ಯಪಾಲರು ಈ ವಿಚಾರಕ್ಕೆ ಸಂಬಂಧಪಟ್ಟಂತೆ ಮಧ್ಯಪ್ರವೇಶಿಸಬೇಕೆಂದು. ಘನತೆವೆತ್ತ ರಾಜ್ಯಪಾಲರಿಗೆ ಮಾನ್ಯ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಮಾಡಲಾಯಿತು. ಈ ಸಂದರ್ಭದಲ್ಲಿ ಡಿಸಿಸಿ ಅಧ್ಯಕ್ಷರಾದ ಡಾ ಬಿಜೆ ವಿಜಯಕುಮಾರ್, ಆರ್ ಮೂರ್ತಿ, ಕಾಂಗ್ರೆಸ್ ಪದಾಧಿಕಾರಿಗಳಾದ ಎಡತಲೆ ಮಂಜುನಾಥ್, ಬಸವರಾಜ್ ನಾಯಕ್, ಶಿವಪ್ರಸಾದ್, ಪ್ರಕಾಶ್ ಕುಮಾರ್, ಶಿವಣ್ಣ, ಈಶ್ವರ್ ಚಕಡಿ, ಸೀತಾರಾಮ್, ವಕೀಲರಾದ ಸಿಎಂ ಜಗದೀಶ್, ಗೋಪಾಲ್, ಸುರೇಶ್ ಪಾಳ್ಯ, ವೈದ್ಯನಾಥ್, ಕಾಂತರಾಜ್, ತಿಮ್ಮಯ್ಯ, ಮಹೇಶ್, ಮೀನಾಕ್ಷಿ, ಕವಿತಾ, ಶಿವಕುಮಾರ್, ಹೇಮಂತ್, ಮಹೇಶ್ ಇತರರು ಭಾಗವಹಿಸಿದ್ದರು.