ನಗರದಲ್ಲಿ ಫುಟ್ ಪಾತ್ ಅತಿಕ್ರಮಣ ಸೂಕ್ತ ಕಡಿವಾಣಕ್ಕೆ ವಿಕ್ರಂ ಅಯ್ಯಂಗಾರ್ ಆಗ್ರಹ

Share

ನಗರದಲ್ಲಿ ಫುಟ್ ಪಾತ್ ಅತಿಕ್ರಮಣ ಸೂಕ್ತ ಕಡಿವಾಣಕ್ಕೆ ಆಗ್ರಹ

ಫುಟ್ ಪಾತ್ಅತಿಕ್ರಮಣ ಮತ್ತು ನಿಯಮ ಬಾಹಿರ ಚಟುವಟಿಕೆಗೆ ಕಡಿವಾಣ ಹಾಕಲು ಹಾಗೂ ಕಡ್ಡಾಯ ಸ್ವಚ್ಛತೆ ಪಾಲನೆಯ ಕ್ರಮ ಕೈಗೊಳ್ಳಲು ನಗರಪಾಲಿಕೆ ಅಧಿಕಾರಿಗಳು ಸೂಚನೆ ನೀಡಬೇಕು ಹಾಗೂ ಜಾಗೃತಿ ಮೂಡಿಸಿ ಅತಿಕ್ರಮಣವಾಗಿ ಫುಟ್ ಪಾತ್ ನಲ್ಲಿ ವ್ಯಾಪಾರ ಮಾಡುತ್ತಿರುವ ವ್ಯಾಪಾರಸ್ಥರಿಗೆ ಪ್ರಕರಣ ದಾಖಲಿಸಬೇಕೆಂದು ನಗರಪಾಲಿಕೆಗೆ ಮನವಿ ಮಾಡಿಕೊಳ್ಳುತ್ತೇವೆ
ಸ್ಮಾರ್ಟ್ ಸಿಟಿ ಯೋಜನೆಯ ಅನುದಾನದಡಿ ಪಾದಚಾರಿಗಳ ಸುರಕ್ಷಿತ ಓಡಾಟಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ನಿರ್ಮಿಸಿರುವ ಫುಟ್ ಪಾತ್ ಗಳು ನಗರದ ಬಹುತೇಕ ಭಾಗಗಳಲ್ಲಿ ಮೂಲ ಉದ್ದೇಶಕ್ಕೆ ಬಳಕೆಯಾಗುತ್ತಿಲ್ಲ ,ಬದಲಿಗೆ ಒತ್ತುವರಿಯಾಗಿವೆ ನಿಯಮ ಬಾಹಿರ ಚಟುವಟಿಕೆಯ ತಾಣವಾಗುತ್ತಿವೆ .ಬಾರ್ ಅಂಡ್ ರೆಸ್ಟೊರೆಂಟ್, ಫುಟ್ ಪಾತ್
ಹೋಟೆಲ್, ಅಂಗಡಿ ಮುಂಗಟ್ಟು ಸೇರಿದಂತೆ ಲೈಸೆನ್ಸ್ ಹೊಂದಿರುವ ಅನೇಕ ದೊಡ್ಡ ಹೋಟೆಲ್ ಗಳಲ್ಲೂ ಸಹ ಸ್ವಚ್ಛತಾ ನಿಯಮಗಳನ್ನು ಪಾಲಿಸದಿರುವ ಕಾರಣ ಕೂರೂನಾ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಹರಡುವ ಭೀತಿ ಮೈಸೂರು ನಗರದ ಜನತೆಗೆ ಆತಂಕ ಹೆಚ್ಚಾಗುತ್ತಿದೆ ,ಹೋಟೆಲ್ ಅಂಗಡಿ ಮುಗ್ಗಟ್ಟುಗಳಲ್ಲಿ ಕಡ್ಡಾಯವಾಗಿ ಸ್ವಚ್ಛತೆಗೆ ಮೊದಲು ಆದ್ಯತೆ ನೀಡಲು ಸರ್ಕಾರ ಸೂಚಿಸಿದ್ದರು ಕೆಲವು ಬಾರ್ ಮತ್ತು ರೆಸ್ಟೋರೆಂಟ್ ಗಳಲ್ಲಿ ಹಾಗೂ ಫುಟ್ ಪಾತ್
ವ್ಯಾಪಾರಿಗಳು ಆ ನಿಯಮ ಅನುಸರಿಸುತ್ತಿಲ್ಲ ,
ನಗರದ ಪ್ರಮುಖ ರಸ್ತೆಗಳಲ್ಲಿ
ಫುಟ್ ಪಾತ್ ವನ್ನು ಸಣ್ಣಪುಟ್ಟ ವ್ಯಾಪಾರಿಗಳು .ಗಾಡಿ ಅಂಗಡಿ. ತಳ್ಳುಗಾಡಿಗಳು ಅತಿಕ್ರಮಿಸಿವೆ.ಸಿದ್ದಪ್ಪ ವೃತ್ತದಲ್ಲಿ
ಬಾರ್ ಅಂಡ್ ರೆಸ್ಟೋರೆಂಟ್ ಸಂಖ್ಯೆ ಅಧಿಕ ,ಅಂತೆಯೇ ಬಾರ್ ಗಳ ಮುಂದೆ ಎಗ್ ರೈಸ್, ಚುರುಮುರಿ ,ಸೇರಿದಂತೆ ಅನೇಕ
ಫುಟ್ ಪಾತ್ ಅಂಗಡಿಗಳು ಸಾಲುಗಟ್ಟಿರುತ್ತವೆ.ಕುಡುಕರ ಹಾಗೂ ಗ್ರಾಹಕರ ಹಾವಳಿಯಿಂದಾಗಿ ಪಾದಚಾರಿಗಳ ನೆಮ್ಮದಿಯ ಸಂಚಾರಕ್ಕೆ ಸಮಸ್ಯೆ ಎದುರಾಗಿದೆ.ಅನೇಕ ಕಡೆ ಗ್ರಾಹಕರಿಗೆ ಸ್ಯಾನಿಟೈಸರ್ ನೀಡುತ್ತಿಲ್ಲ .ಫುಟ್ ಪಾತ್ ವ್ಯಾಪಾರಿ ಗಳಷ್ಟೇ ಅಲ್ಲ .ಲೈಸೆನ್ಸ್ ಹೊಂದಿರುವ ಅನೇಕ ದೊಡ್ಡ ಹೋಟೆಲ್ಗಳಲ್ಲೂ ಬಳಸಿ ಬಿಸಾಕುವ ಲೋಟ ಮತ್ತು ಫ್ಲ್ಯಾಟ್ ನೀಡದೆ ಸ್ಟೀಲ್ ತಟ್ಟೆಗಳಲ್ಲಿ ತಿಂಡಿ ಊಟ ನೀಡಲಾಗುತ್ತಿದೆ.ಎಂಜಲು ತಟ್ಟೆ ಲೋಟಗಳನ್ನು ಸರಿಯಾಗಿ ಬಿಸಿ ನೀರಿನಿಂದ ತೊಳೆಯದೇ ಗ್ರಾಹಕರಿಗೆ ನೀಡಲಾಗುತ್ತಿದೆ ದಯಮಾಡಿ ಇತ್ತ ನಗರ ಪಾಲಿಕೆ ಅಧಿಕಾರಿಗಳು ಗಮನ ಹರಿಸಬೇಕೆಂದು ಒತ್ತಾಯಿಸುತ್ತೇವೆ

ಇಂತಿ
ವಿಕ್ರಂ ಅಯ್ಯಂಗಾರ್ ಸಾಮಾಜಿಕ ಹೋರಾಟಗಾರರು
ಮೈಸೂರು


Share