ನಗರದ ಪ್ರತಿಷ್ಠ ಕಾಲೇಜುಗಳಲ್ಲಿ ಡ್ರಗ್ ದಂದೆ, ಮುತಾಲಿಕ್ ಗಂಭೀರ ಆರೋಪ.

Share

ಮೈಸೂರು ನಗರದ ಪ್ರತಿಷ್ಠಾ ಕಾಲೇಜುಗಳಲ್ಲಿ ಪ್ರಜ್ಞೆಂತೆ ನಡೆಯುತ್ತಿದೆ ಎಂದು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರು ಗಂಭೀರ ಆರೋಪ ಮಾಡಿದ್ದಾರೆ ಅವರು ಇಂದು ಬೆಳಗ್ಗೆ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ನಗರದ ಪ್ರತಿಷ್ಠಿತ ಕಾಲೇಜುಗಳಲ್ಲಿ ಮತ್ತು ಕಾಲೇಜಿನಲ್ಲಿ ಇರುವ ವಿದೇಶಿ ವಿದ್ಯಾರ್ಥಿಗಳು ಡ್ರಗ್ ವ್ಯವಹಾರ ನಡೆಸುತ್ತಿದ್ದಾರೆ ಎಂದು ತಿಳಿಸಿದರು. ರಾಜ್ಯದ ರಾಜಕಾರಣಿಗಳು ದಂಧೆ ನಡೆಸುತ್ತಿದ್ದಾರೆ ಈ ಸಂಬಂಧ ನಾಳೆ 34 ರಾಜಕಾರಣಿಗಳ ಹೆಸರನ್ನು ಬಯಲು ಮಾಡುವುದಾಗಿ ಅವರು ತಿಳಿಸಿದರು ರಾಜಕಾರಣಿಗಳು ಪೊಲೀಸರ ಕೈಯನ್ನು ಕಟ್ಟಿಹಾಕಿದ್ದಾರೆ ಹೀಗಾಗಿ ಅವರು ಕೆಲಸ ಮಾಡಲು ಆಗುತ್ತಿಲ್ಲ ಎಂದರು.ಶ್ರೀರಾಮಸೇನೆಯ ಮುಖ್ಯ ಬೇಡಿಕೆಗಳು ನೀಡುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ನೀಡಲಾಗುವುದು ಎಂದು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿ ಬೇಡಿಕೆಗಳ ವಿವರವನ್ನು ನೀಡಿದರು .ಸಾಂಸ್ಕೃತಿಕ ತಾಣವಾದ ನಮ್ಮ ರಾಜ್ಯದಲ್ಲಿ ಕಳೆದ ಹಲವಾರು ವರ್ಷಗಳಿಂದ ಡ್ರಗ್ಸ್ ಜಿಹಾದ್‌ನ ಅಂತಾರಾಷ್ಟ್ರೀಯ ಜಾಲ ವ್ಯಾಪಕವಾಗಿ ಹರಡಿ , ರಾಜ್ಯದ ಘನತೆಗೆ , ಯುವಜನಾಂಗಕ್ಕೆ ಶಾಪವಾಗಿ ಪರಿಣಮಿಸಿದ್ದು ದೇಶದ ನಮ್ಮ ಸಂಘಟನೆ ಈ ಮಾಫಿಯಾ ವಿರುದ್ಧ ಹೋರಾಡಲು ತಮಗೆ ಸಂಪೂರ್ಣ ಸಹಕಾರ ನೀಡುತ್ತದೆ . ಈ ಡ್ರಗ್ಸ್ ಮಾರಾಟ ಹಾಗೂ ಸಾಗಾಟ ಮಾಡುವವರನ್ನು ರಾಷ್ಟ್ರೀಯ ಸುರಕ್ಷಾ ಕಾಯಿದೆಯಲ್ಲಿ ಬಂಧಿಸುವಂತೆ ಕಾನೂನು ತರಲು ಆಗ್ರಹಿಸುತ್ತೇವೆ . ಶಾಲಾ , ಕಾಲೇಜುಗಳ ಪರಿಸರದಲ್ಲಿ ಗುಪ್ತಚರ ಇಲಾಖೆಯ ಗಸ್ತು ಹೆಚ್ಚಿಸಿ . ಯಾವ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಡ್ರಗ್ಸ್ ಪತ್ತೆಯಾಗುತ್ತೋ ಆ ಠಾಣಾಧಿಕಾರಿಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಜವಾಬ್ದಾರರನ್ನು ಮಾಡಲು ಒತ್ತಾಯಿಸುತ್ತೇವೆ . ಪಬ್ , ಕ್ಲಬ್ , ಲೈವ್‌ಬ್ಯಾಂಡ್ , ಸ್ಟಾರ್ ಹೋಟೆಲ್ ಮುಂತಾದ ಸ್ಥಳಗಳಲ್ಲಿ ನಿರಂತರ ತನಿಖೆ ನಡೆಸುವಂತೆ ಆಗ್ರಹಿಸುತ್ತೇವೆ . ಕೆಲವು ರಾಜಕಾರಣಿಗಳು , ದೊಡ್ಡ ದೊಡ್ಡ ಉದ್ದಿಮೆದಾರರು , ಪಕ್ಷಗಳಿಗೆ ದೇಣಿಗೆ ನೀಡುವ ದೊಡ್ಡ ಕುಳಗಳು ಈ ದಂಧೆಯ ಹಿಂದೆ ಇರುವುದರ ಬಗ್ಗೆ ತನಿಖೆಗೆ ಆಗ್ರಹಿಸುತ್ತೇವೆ . ಚಿತ್ರರಂಗದಲ್ಲಿಯೂ ಜಾಲ ಪಸರಿಸಿದ್ದು , ಅದರ ಬಗ್ಗೆಯೂ ವ್ಯಾಪಕ ತನಿಖೆಗೆ ತಂಡ ರಚಿಸಲು ಒತ್ತಾಯಿಸುತ್ತೇವೆ . ಮಾನ್ಯರಾದ ತಾವು ಈ ಭಯಾನಕ ಜಾಲವನ್ನು ಭೇದಿಸಿ ರಾಜ್ಯದ ಜನತೆ ನೆಮ್ಮದಿಯಿಂದ ಇರುವಂತೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತೇವೆ . ವಂದನೆಗಳೊಂದಿಗೆ , ಭವಿಷ್ಯಕ್ಕೆ ಕಂಟಕವಾಗಿದೆ . ತಾವು ಕಟ್ಟುನಿಟ್ಟಿನ ಉಗ್ರ ಕ್ರಮಕ್ಕೆ ಮುಂದಾಗಲು ಆ ಸಾಲಗಾಗಿ ಆಗ್ರಹಿಸುತ್ತೇವೆ .


Share