ನಟ ಕಮಲ್ ಹಾಸನ್ ರಾಜಕೀಯ ಬೆಂಬಲ ಯಾರಿಗೆ ?

136
Share

ಚೆನ್ನೈ:
ನಟ-ರಾಜಕಾರಣಿ ಕಮಲ್ ಹಾಸನ್ ಅವರು ಇಂದು ತಮ್ಮ ಪಕ್ಷದ ಎಂಎನ್‌ಎಂನ ರಾಜಕೀಯ ಮೈತ್ರಿಗಾಗಿ ಚರ್ಚೆಗಳು ನಡೆಯುತ್ತಿವೆ ಮತ್ತು ರಾಷ್ಟ್ರದ ಬಗ್ಗೆ “ನಿಸ್ವಾರ್ಥವಾಗಿ” ಯೋಚಿಸುವ ಪಕ್ಷ ಬೆಂಬಲಿಸುವುದಾಗಿ ಒತ್ತಿ ಹೇಳಿದ್ದಾರೆ.
ತಮ್ಮ ಮಕ್ಕಳ್ ನೀದಿ ಮೈಯಂನ 7 ನೇ ವಾರ್ಷಿಕೋತ್ಸವದ ಸಮಾರಂಭದ ನಂತರ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಹಾಸನ್, ತಮಿಳು ನಟ ವಿಜಯ್ ಅವರ ಇತ್ತೀಚಿನ ರಾಜಕೀಯ ಪ್ರವೇಶವನ್ನು ಸ್ವಾಗತಿಸಿದ್ದಾರೆ.
ಬಹುಪಕ್ಷೀಯ ವಿರೋಧ ಪಕ್ಷವಾದ INDIA ಮೈತ್ರಿಗೆ ಎಂಎನ್‌ಎಂ ಸೇರುತ್ತದೆಯೇ ಎಂಬ ಪ್ರಶ್ನೆಗೆ, “ನಾನು ಈಗಾಗಲೇ ಹೇಳಿದ್ದೇನೆ, ನಾವು ಪಕ್ಷ ರಾಜಕಾರಣವನ್ನು ಮಸುಕುಗೊಳಿಸಬೇಕು ಮತ್ತು ರಾಷ್ಟ್ರದ ಬಗ್ಗೆ ಯೋಚಿಸಬೇಕಾದ ಸಮಯ ಇದು. ರಾಷ್ಟ್ರದ ಬಗ್ಗೆ ನಿಸ್ವಾರ್ಥವಾಗಿ ಯೋಚಿಸುವ ಯಾರಾದರೂ, ನನ್ನ ಎಂಎನ್‌ಎಂ ಅದರ ಭಾಗವಾಗಿರುತ್ತದೆ ” ಎಂದು ಸ್ಪಷ್ಟ ಪಡಿಸಿದ್ದಾರೆ.
ತಮ್ಮ ಪಕ್ಷದ ಸಂಭವನೀಯ ರಾಜಕೀಯ ಮೈತ್ರಿ ಕುರಿತು, ಅವರು “ಚರ್ಚೆಗಳು ನಡೆಯುತ್ತಿವೆ” ಮತ್ತು ಈ ನಿಟ್ಟಿನಲ್ಲಿ ಯಾವುದೇ ಒಳ್ಳೆಯ ನಿರ್ಧಾರವಾದಲ್ಲಿ ಸುದ್ದಿ ಮಾಧ್ಯಮಗಳಿಗೆ ತಿಳಿಸಲಾಗುವುದು ಎಂದು ಹೇಳಿದ್ದಾರೆ.

Share