ನನ್ನ ಗೆಲುವು ನಿಮ್ಮಂತಹ ಕಾರ್ಯಕರ್ತರಿಗೆ ಸಮರ್ಪಣೆ ಯದುವೀರ್

Share

 

*ನನ್ನ ಗೆಲುವು ನಿಮ್ಮಂತಹ ಕಾರ್ಯಕರ್ತರಿಗೆ ಸಮರ್ಪಣೆ ಯದುವೀರ್*

ಮೈಸೂರಿನ ರಾಜ ವಂಶಸ್ಥ ಯದುವೀರ್ ಒಡೆಯರ್ ಚುನಾವಣೆ ರಾಜಕೀಯಕ್ಕೆ ಬಂದ ನಂತರ ಮೈಸೂರಿನ ಯುವ ತಂಡವೂ ಯದುವೀರ್ ಯುವ ಬ್ರಿಗೇಡ್ ಎಂಬ ಹೆಸರಿನ ತಂಡವನ್ನು ರಚಿಸಿ ಪ್ರಚಾರ ಕಾರ್ಯದಲ್ಲಿ ತೊಡಗಿ ಯಶಸ್ವಿಯಾದರು ಇದೇ ತಂಡ ಗೆಲುವಿನ ಮುಂಚೆಯೇ ಯದುವೀರ್ ಒಡೆಯರ್ ಹೆಸರಿನ ನಾಮಫಲಕವನ್ನು ಸಂಸದರು ಎಂದು ಬರೆಸಿ ಚಾಮುಂಡೇಶ್ವರಿಯ ಸನ್ನಿಧಿಯಲ್ಲಿ ಪೂಜೆಯನ್ನು ಸಲ್ಲಿಸಿ ಯದುವೀರ್ ರವರಿಗೆ ಅಭಿನಂದನೆ ಸಲ್ಲಿಸಿ ಆ ನಾಮಫಲಕವನ್ನು ಹಸ್ತಾಂತರ ಮಾಡಿದರು
ಇದೇ ಸಂದರ್ಭದಲ್ಲಿ ಮಾತನಾಡಿದ ಯದುವೀರ್ ಒಡೆಯರ್”ರಾಜಕೀಯವಾಗಿ ಸಾಮಾಜಿಕವಾಗಿ ನಮಗೆ ಇರುವ ಶಕ್ತಿ ಎಂದರೆ ನಮ್ಮ ಕಾರ್ಯಕರ್ತರು ಇಂತಹ ಕಾರ್ಯಕರ್ತರಿಗೆ ನನ್ನ ಗೆಲುವನ್ನು ಸಮರ್ಪಿಸುತ್ತೇನೆ ಎಂದು ಹೇಳಿದರು

ನಂತರ ಮಾತನಾಡಿದ ಯದುವೀರ್ ಯುವ ಬ್ರಿಗೇಡ್ ಅಧ್ಯಕ್ಷ ದರ್ಶನ್ ಯದುರಾಜ್ “ಮೈಸೂರಿನ ಯದುವಂಶದ ಕುಡಿ ಎದುವೀರ್ ಒಡೆಯರ್ ರವರು ಅವರು ರಾಜಕೀಯಕ್ಕೆ ಬರುತ್ತಾರೆ ಎಂದು ತಿಳಿದು ಕೂಡಲೇ ಮೊದಲು ಸಂತಸ ಪಟ್ಟವರಲ್ಲಿ ನಾನು ಕೂಡ ಒಬ್ಬ ಅದೇ ರೀತಿ ಸಂತೋಷವನ್ನು ಮನಸ್ಸಿನಲ್ಲಿಟ್ಟುಕೊಳ್ಳದೆ ಪ್ರಚಾರದ ರೂಪದಲ್ಲಿ ಹೊರಹಾಕಿದವರೆ ನಮ್ಮ ತಂಡ ಅದು ಯದುವೀರ್ ಯುವ ಬ್ರಿಗೇಡ್..
ಯದುವೀರ್ ಒಡೆಯರ್ ರವರ ರಾಜಕೀಯ ಯುಗರಂಭಕ್ಕೆ ಮೊದಲನೆ ಮೆಟ್ಟಿಲು” ಎಂದರು
ನಂತರ ಯದುವೀರ್ ರವರ ಹೆಸರಿ‌ನ ಸಂಸದರ ನಾಮಫಲಕವನ್ನು ಗೆಲುವಿನ ಮೊದಲೆ ಸಿದ್ದಪಡಿಸಿ ಚಾಮುಂಡೆಶ್ವರಿಯ ಸನ್ನಿದಿಯಲ್ಲಿ ಪೂಜೆ ಸಲ್ಲಿಸಿ ಯದುವೀರ್ ರವರಿಗೆ ಹಸ್ತಾಂತರಿಸಿದರು

ಇದೇ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ, ರಾಜೇಂದ್ರ
ಬಿಜೆಪಿ ಮೈಸೂರು ನಗರಾಧ್ಯಕ್ಷರಾದ, L ನಾಗೇಂದ್ರಣ್ಣ, ಯದುವೀರ್ ಯುವ ಬ್ರಿಗೇಡ್, ಸಂಸ್ಥಾಪಕ ಅಧ್ಯಕ್ಷರಾದ ದರ್ಶನ್ ಯದುರಾಜ್, ಪ್ರಶಾಂತ್, ನಾಗೇಂದ್ರ, ಪ್ರವೀಣ್, ಶರತ್, ಸುದರ್ಶನ್, ಅಕ್ಷಯ್, ದೀಪು, ಶಿವು, ಮಧು ಗೌಡ, ಆದಿತ್ಯ ಮತ್ತಿತರರು ಉಪಸ್ಥಿತರಿದ್ದರು


Share