ನಾಳೆಯಿಂದಲೇ, ಶಿಕ್ಷಕರಿಗೆ ಎಲ್ಲಾ, ಶನಿವಾರ ರಜಾ ಘೋಷಣೆ.

568
Share

ಬೆಂಗಳೂರು ಕೊರೊನಾ ಸೋಂಕು ಹರಡುವುದನ್ನು ನಿಯಂತ್ರಿಸಲು ಶಿಕ್ಷಣ ಇಲಾಖೆಯ ಎಲ್ಲ ಶಾಲೆಗಳಿಗೆ /ಕಚೇರಿಗೆ ಎರಡನೇ ಶನಿವಾರ ಮತ್ತು ನಾಲ್ಕನೇ ಶನಿವಾರ ರಜೆ ಘೋಷಿಸಿದೆ,ಎಂದು ಸರ್ಕಾರಿ ಜ್ಞಾಪನ ಪತ್ರದಲ್ಲಿ ತಿಳಿಸಲಾಗಿದೆ

ಆಯುಕ್ತರ ಕಾರ್ಯಾಲಯ , ಸಾರ್ವಜನಿಕ ಶಿಕ್ಷಣ ಇಲಾಖೆ , ಬೆಂಗಳೂರು ಸಂಖ್ಯೆ ಸಿ 3 ( 5 ) ಪ್ರಾ.ಶಿ.ಇತರೆ 10 / 2020-21 ದಿನಾಂಕ : 10-07-2020 | ಜ್ಞಾಪನ ವಿಷಯ : ಶಿಕ್ಷಣ ಇಲಾಖೆಯ ಎಲ್ಲಾ ಶಾಲಾ ಕಚೇರಿಗಳಿಗೆ ಎರಡನೆ ಶನಿವಾರ ಮತ್ತು ನಾಲ್ಕನೇ ಶನಿವಾರಗಳನ್ನು ಸೇರಿಸಿಕೊಂಡಂತೆ 2020 ರ ಜುಲೈ 10 ರಿಂದ ಎಲ್ಲಾ ಶನಿವಾರಗಳಂದು ದಿ : 08-08-2020ರವರೆಗೆ ರಜೆ ಅನ್ವಯವಾಗುವ ಕುರಿತು . ಉಲ್ಲೇಖ : 1.ಮಾನ್ಯ ಮುಖ್ಯ ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಕಾರ್ಯಕಾರಿ ಸಮಿತಿ , ವಿಧಾನಸೌಧ , ಬೆಂಗಳೂರು ಇವರ ಆದೇಶ ಸಂ : ಕಂಇ 158 ಟಿ.ಎನ್.ಆರ್ .2020 ದಿನಾಂಕ : 28-06-2020 , 2.ಅಧ್ಯಕ್ಷರು / ಪ್ರಧಾನ ಕಾರ್ಯದರ್ಶಿ , ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ , ಬೆಂಗಳೂರು ಇವರಿಂದ ಸ್ವೀಕೃತವಾದ ಮನವಿ ಪತ್ರ ದಿ : 08-07-2020 , ಎಲ್ಲಾ ಮೇಲ್ಕಂಡ ವಿಷಯ ಹಾಗೂ ಉಲ್ಲೇಖದನ್ವಯ ಕೊವಿಡ್ -19 ಸೋಂಕು ಹರಡುವಿಕೆಯನ್ನು ನಿಯಂತ್ರಿಸುವ ಬಗ್ಗೆ ಶಿಕ್ಷಣ ಇಲಾಖೆಯ ಎಲ್ಲಾ ಶಾಲೆಗಳಿಗೆ / ಕಚೇರಿಗಳಿಗೆ ಎರಡನೇ ಶನಿವಾರ ಮತ್ತು ನಾಲ್ಕನೇ ಶನಿವಾರಗಳನ್ನು ಸೇರಿಸಿಕೊಂಡಂತೆ 20200 ಜುಲೈ 10 ರಿಂದ ಶನಿವಾರಗಳಂದು ದಿ : 08-08-2020 ರವರೆಗೆ ವಿಪತ್ತು ನಿರ್ವಹಣಾ ಕಾಯ್ದೆ 2005 , ರಡಿಯಲ್ಲಿ ಹೊರಡಿಸಿಲಾಗಿರುವ ಆದೇಶ ಅನ್ವಯವಾಗುತ್ತದೆ ಹಾಗೂ ಈ ರಜೆಯು ಕೊವಿಡ್ -19 ಕಾರ್ಯಕ್ಕೆ ನಿಯೋಜಿತರಾಗಿರುವ ಶಿಕ್ಷಕರು / ಅಧಿಕಾರಿ / ಸಿಬ್ಬಂದಿಯವರಿಗೆ ಹಾಗೂ ಎಸ್.ಎಸ್.ಎಲ್.ಸಿ ಮೌಲ್ಯಮಾಪನ ಕಾರ್ಯಕ್ಕೆ ನಿಯೋಜಿಸಲಾಗಿರುವ ಶಿಕ್ಷಕರು / ಅಧಿಕಾರಿ / ಸಿಬ್ಬಂದಿಯವರಿಗೆ ಅನ್ವಯವಾಗುವುದಿಲ್ಲವೆಂದು ಸ್ಪಷ್ಟಿಕರಿಸಿದೆ.


Share