ನಾಳೆಯಿಂದ 24 ವರಗೆ ಎನ್ನಾರ್, ಮಂಡಿ, ಲಕ್ಕರ್, ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿರ್ಬಂಧ, ಡಿಸಿ ಪ್ರಕಟ

1163
Share

ವಿಷಯ : ಕೋವಿಡ್ -19 ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ನಗರದ ಕೆಲವು ಪ್ರದೇಶಗಳನ್ನು ನಿರ್ಬಂಧಿತ ವಲಯಗಳೆಂದು ಘೋಷಿಸುವ ಬಗ್ಗೆ .

COVID – 19 ಸೋಂಕು ಪ್ರಕರಣಗಳು ಪ್ರತಿ ದಿನ 100 ಕ್ಕಿಂತ ಹೆಚ್ಚಾಗುತ್ತಿರುವುದರಿಂದ ಕಳೆದ ಎರಡು ವಾರಗಳಿಂದ ಹೆಚ್ಚು ಕೋವಿಡ್ ಸೋಂಕು ಪ್ರಕರಣಗಳಿಗೆ ಸಂಬಂಧಿಸಿದಂತೆ ಸಾವಿನ ಸಂಖ್ಯೆಯಲ್ಲಿಯೂ ಸಹ ಗಣನಿಯವಾಗಿ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ , ಕೋವಿಡ್ -19 ಗ ಸಂಬಂಧಿಸಿದ ಹೆಚ್ಚಿನ ಸಾವಿನ ಸಂಖ್ಯೆಯಲ್ಲಿ ಬಹುತೇಕ ಮೈಸೂರು ನಗರದ ನರಸಿಂಹರಾಜ ವಿಧಾನ ಸಭಾ ಕ್ಷೇತ್ರದ ಹಾಗೂ ಅದಕ್ಕೆ ಹೊಂದಿಕೊಂಡಂತಿರುವ ಚಾಮರಾಜ ವಿಧಾನ ಸಭಾ ಕ್ಷೇತ್ರಗಳ ಕಲವು ಬಡಾವಣೆಗಳಲ್ಲಿ ಮಾತ್ರ ಸೋಂಕಿತರು ಮತ್ತು ಸಾವಿನ ಸಂಖ್ಯೆ ಹೆಚ್ಚಾಗಿ ಕಂಡುಬಂದಿದ್ದು , ಸೋಂಕಿತ ವ್ಯಕ್ತಿಗಳು ತಡವಾಗಿ ಆಸ್ಪತ್ರೆಗೆ ದಾಖಲಾಗುತ್ತಿರುವುದರಿಂದ ನಾವುಗಳು ಸಹ ಹೆಚ್ಚಾಗಲು ಪ್ರಮುಖ ಕಾರಣವಾಗಿರುತ್ತದೆ , ಸೋಂಕು ತೀವ್ರತೆ ಪಡೆಯುವ ಮುಂಚಿತವಾಗಿ ಸೋಂಕಿತರನ್ನು ಚಿಕಿತ್ಸೆ / ಪರೀಕ್ಷೆಗೆ ಒಳಪಡಿಸಿ , ಆರೈಕೆ ನೀಡಿದ್ದಲ್ಲಿ , ಸೋಂಕಿತ ತೀವ್ರತೆಯನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ . ಇದರಲ್ಲಿ ಸಾರ್ವಜನಿಕರ ಪಾತ್ರ ಹಾಗೂ ಮುನ್ನೆಚ್ಚರಿಕೆಯ ಕ್ರಮಗಳು ಅತೀ ಅಗತ್ಯತೆ ಇರುವುದು ಕಂಡುಬಂದಿರುತ್ತದೆ . ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಚಿಕಿತ್ಸೆ ಪಡೆಯಲು ವಿಫಲರಾಗುತ್ತಿದ್ದು ಹಾಗೂ ತಪಾಸಣೆಗೆ ಒಳಗಾಗದೇ ಇರುವುದುರಿಂದ ಪರಿಸ್ಥಿತಿ ಗಂಭೀರವಾಗಿರುತ್ತದೆ , ಸೋಂಕಿತರು ಚಿಕಿತ್ಸೆಗೆ ಒಳಗಾಗದೇ ಇರುವುದನ್ನು ತಪ್ಪಿಸಲು ಹಾಗೂ ಸೋಂಕಿನಿಂದ ಒಳಗಾಗುವ ಸಾವಿನ ಪ್ರಕರಣಗಳ ಸಂಖ್ಯೆಯನ್ನು ನಿಯಂತ್ರಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು , ಸ್ಥಳೀಯ ಶಾಸಕರು , ಇತರೆ ಚುನಾಯಿತ ಪ್ರತಿನಿಧಿಗಳು , ವಿವಿಧ ಧಾರ್ಮಿಕ ಮುಖಂಡರು , ವೈದ್ಯರು , ಪೊಲೀಸ್ ಅಧಿಕಾರಿಗಳು ಮತ್ತು ಮೈಸೂರು ಮಹಾನಗರ ಪಾಲಿಕೆಯ ಅಧಿಕಾರಿಗಳೊಂದಿಗೆ ಕೂಲಂಕುಶವಾಗಿ ಹಲುವು ಸಭೆ ಹಾಗೂ ವಿವಿಧ ಹಂತಗಳಲ್ಲಿ ಚರ್ಚೆಗಳನ್ನು ನಡೆಸಲಾಗಿದೆ .

ನಿರ್ಬಂಧಿತ ಪ್ರದೇಶಗಳು

ನರಸಿಂಹರಾಜ , ಉದಯಗಿರಿ , ಲಷ್ಕರ್ ಹಾಗೂ ಮಂಡಿ ಮೊಹಲ್ಲಾ ಪೊಲೀಸ್ ಠಾಣಾ ವ್ಯಾಪ್ತಿ ನಿರ್ಬಂಧಿತ ಪ್ರದೇಶವೆಂದು ಘೋಷಿಸಿ ದಿನಾಂಕ 17-07-2020 ರಂದು ಬೆಳಗ್ಗೆ 06-00 ಗಂಟೆ 24-07-2020 ರ ಬೆಳಗ್ಗೆ 06-00 ಗಂಟೆ ವರೆಗೆ ಈ ಕೆಳಗಿನಂತೆ ನಿರ್ಬಂಧಗಳನ್ನು ವಿಧಿಸಿಲಾಗಿದೆ :ನಿರ್ಬಂಧಿತ ಪ್ರದೇಶವೆಂದು ಘೋಷಿಸಿ ದಿನಾಂಕ 17-07-2026 ರಂದು ಬೆಳಗ್ಗೆ 24-07-2020 ರ ಬೆಳಗ್ಗೆ 06-00 ಗಂಟೆ ವರೆಗೆ ಈ ಕೆಳಗಿನಂತ ನಿರ್ಬಂಧಗಳನ್ನು ವಿಧಿಸಲಾಗಿದೆ :

1 ) ಎಲ್ಲಾ ತರಹದ ಹೋಟೆಲ್ , ಟಿ ಅಂಗಡಿಗಳನ್ನು ತರೆಯತಕ್ಕದ್ದಲ್ಲ , ಹೋಟೆಲ್ ಮತ್ತು ರಸ್ಟೋರಂಟ್‌ಗಳಿಂದ ಕೊಂಡೊಯ್ಯುವ / ಹೋಮ್ ಡೆಲಿವರಿಗೆ ಮಾತ್ರ ಅವಕಾಶವಿರುತ್ತದೆ .
2 ) ಆಹಾರ , ದಿನಸಿ ಅಂಗಡಿಗಳು , ಹಾಲು , ತರಕಾರಿಗಳು , ದಿನಬಳಕೆ ವಸ್ತುಗಳು , ಹಣ್ಣು ಅಂಗಡಿಗಳು , ಔಷೋಪಚಾರ , ಬ್ಯಾಂಕ್ ಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಿ ಕಚೇರಿಗಳನ್ನು ಹೊರತುಪಡಿಸಿ , ಎಲ್ಲಾ ತರಹದ ಇತರೆ ವಾಣಿಜ್ಯ ವಹಿವಾಟುಗಳನ್ನು ನಡೆಸುವುದು ನಿರ್ಬಂಧಿಸಲಾಗಿದೆ , ಮಾಂಸ ಮತ್ತು ಮೀನುಗಳ ಅಂಗಡಿಗಳನ್ನು ಮಂಗಳವಾರ ಮತ್ತು ಶುಕ್ರವಾರ ಮಾತ್ರ ತಲೆಯತಕ್ಕದ್ದು .
3 ) ಎಲ್ಲಾ ಧರ್ಮಗಳ ಪ್ರಾರ್ಥನಾ ಒಗ್ಗೂಡುವಿಕ ಮತ್ತು ಹಬ್ಬಗಳ ಒಗ್ಗೂಡುವಿಕೆಯನ್ನು ನಿಲ್ಲಿಸತಕ್ಕದ್ದು ಹಾಗೂ ಪ್ರಾಥನಾ ಸ್ಥಳಗಳಿಗೆ ಸಾರ್ವಜನಿಕರ ಪ್ರವೇಶವನ್ನು ನಿಷೇಧ ಪಡಿಸಿದೆ .
4 ) ಈಗಾಗಲೇ ನಿಗದಿ ಪಡಿಸಲಾದ ಮದುವೆಗಳು ಮತ್ತು ಇತರೆ ಸಮಾರಂಭಗಳನ್ನು ( 50 ಜನ ಮೀರದಂತೆ ) ಮಾತ್ರ ಸರ್ಕಾರದ ನಿಯಮಾವಳಿಗಂತ ನಡೆಸಬಹುದಾಗಿರುತ್ತದೆ .
5 ) ಮೇಲೆ ಪ್ರಸ್ತಾಪಿಸಿರುವ ನಿರ್ಬಂಧಿತ ಪ್ರದೇಶಗಳ ಮೂಲಕ ಹಾದು ಹೋಗುವ ಸಾರ್ವಜನಿಕರಿಗೆ ಹಾಗೂ ಇತರೆ ಕಡೆಗಳಲ್ಲಿ ಕೆಲಸ ನಿರ್ವಹಿಸುವ ಸ್ಥಳಿಯರಿಗೆ ಪ್ರಯಾಣಿಸಲು ನಿರ್ಬಂಧವಿರುವುದಿಲ್ಲ . ಆದರೆ ಅನಾವಶ್ಯಕವಾಗಿ ಓಡಾಡುವುದನ್ನು ಕಡ್ಡಾಯವಾಗಿ ನಿರ್ಬಂಧಿಸಿದೆ . ಮೂದಲನ ಹಂತದಲ್ಲಿ ಮುನೀಶ್ವರ ನಗರ , ಕೆ.ಹೆಚ್.ಬಿ ಕಾಲೋನಿ , ಉದಯಗಿರಿ , ರಾಜೀವ ನಗರ , ಬೀಡಿ ಕಾಲೋನಿ ಹಾಗೂ ಸಾತಗಳ್ಳಿ ಬಡಾವಣೆಗಳಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಮನೆಯ ಸುತ್ತ – ಮುತ್ತಲಿನ 400 ಮೀಟರ್ ಸುತ್ತಳತ ವ್ಯಾಪ್ತಿಯನ್ನು ಸಂಪೂರ್ಣ ಲಾಕ್ ಡೌನ್ ಮಾಡಲಾಗುವುದು
1 ) ಲಾಕ್ ಡೌನ್ ಪ್ರದೇಶಗಳಲ್ಲಿರುವ ಆಹಾರ , ದಿನಸಿ ಅಂಗಡಿಗಳು , ಹಾಲು , ತರಕಾರಿಗಳು , ದಿನಬಳಕೆ ವಸ್ತುಗಳು , ಹಣ್ಣು ಅಂಗಡಿಗಳನ್ನು ಪ್ರತಿ ದಿನ ಬೆಳಗ್ಗೆ 06-00 ಗಂಟೆಯಿಂದ 10-00 1 ವರೆಗೆ ಮಾತ್ರ ತೆರೆಯಬಹುದಾಗಿರುತ್ತದೆ . ಸಂಪೂರ್ಣ ಲಾಲ್ ಡೌನ್ ಪ್ರದೇಶದಲ್ಲಿ ಗುರುತಿನ ಚೀಟಿ ಹೊಂದಿರುವ ಖಾಯಂ / ಹೊರಗುತ್ತಿಗೆ

B ) ಸರ್ಕಾರಿ ನೌಕರರನ್ನು ಹೊರತುಪಡಿಸಿ , ಇತರ ಯಾರಿಗೂ ಓಡಾಡಲು ಅವಕಾಶವಿರುವುದಿಲ್ಲ .
3 ) ಸಂಪೂರ್ಣ ಲಾಕ್ ಡೌನ್ ಪ್ರದೇಶದಲ್ಲಿ ಪ್ರತಿ ದಿನ ಮನೆಯಲ್ಲಿರುವ ಎಲ್ಲ ವ್ಯಕ್ತಿಗಳನ್ನೂ ಸಹ ತಪಾಸಣೆಗೆ ಒಳಪಡಿಸಿ , ಅವಶ್ಯಕತೆ ಇದ್ದಲ್ಲಿ Rapid Antigen Kit ಮೂಲಕ ದ್ರವ ಪರೀಕ್ಷೆ ನಡೆಸಲು ಹಾಗೂ ಸೋಂಕು ಕಂಡುಬಂದಲ್ಲಿ ತಕ್ಷಣವೇ ಅಂಬೂಲೆನ್ಸ್ ಮೂಲಕ ಸೂಕ್ತ ಸ್ಥಳಕ್ಕೆ ವರ್ಗಾಯಿಸಲು ಕ್ರಮ ಕೈಗೊಳ್ಳಲು ಆರೋಗ್ಯ ಇಲಾಖೆ ಮತ್ತು ಮೈಸೂರು ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಸೂಚಿಸಿದೆ . ಮೂದಲನೆ ಹಂತದಲ್ಲಿ ಕೋವಿಡ್ ಸೋಂಕು ತಪಾಸಣಾ / ಸಮೀಕ್ಷೆ ಕಾರ್ಯಕ್ಕಾಗಿ ಕನಿಷ್ಟ 400 Rapid Antigen Kit ಗಳನ್ನು ಮೀಸಲಿರಿಸಲು ಹಾಗೂ ತಪಾಸಣಾ ತಂಡಕ್ಕೆ ಕೂಡಲೇ ಹಸ್ತಾಂತರಿಸಲು ಡಾ || ರವಿ , ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿಗಳಿಗೆ ಸೂಚಿಸಿದೆ .
5 ) ಲಕ್ಷಣ ರಹಿತ / ಸೌಮ್ಯ ಲಕ್ಷಣ ಹೊಂದಿದ ಸೋಂಕಿತರನ್ನು ಸ್ಥಳಿಯ 3/3 ರ ಕೇಂದ್ರಗಳಲ್ಲಿ ( Covid Care Center ) ಪ್ರತ್ಯೇಕಿಸುವುದು . ಸ್ಥಳೀಯವಾಗಿ ಕ . ಕೇಂದ್ರಗಳನ್ನು ತೆರೆಯಲು ಪೂರ್ವ ಸಿದ್ಧತೆಯನ್ನು ಮಾಡಲು ಆಯುಕ್ತರು ಮೈಸೂರು ಮಹಾನಗರ ಪಾಲಿಕೆ ರವರಿಗೆ ಸೂಚಿಸಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ


Share