ನಾಳೆ,ರಾಮ ಮಂದಿರ ಶಿಲನ್ಯಾಸ; ಹಬ್ಬದಂತೆ ಆಚರಿಸಿ’ ಕರೆ.

Share

‘ರಾಮ ಮಂದಿರ ಶಿಲನ್ಯಾಸ; ಹಬ್ಬದಂತೆ ಆಚರಿಸಿ’

‘ದೇಶದ ಕೋಟ್ಯಂತರ ಜನರ ಬಹುವರ್ಷದ ಕನಸಾದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಉದ್ಘಾಟನೆ ಆಗಸ್ಟ್ 5ರಂದು ನಡೆಯಲಿದೆ. ಅಂದು ಪ್ರತಿಯೊಬ್ಬರ ಮನೆ, ಮನಸ್ಸುಗಳಲ್ಲಿ ಶ್ರೀರಾಮ ಮತ್ತು ಹನುಮರ ಭಕ್ತಿ ಮಾರ್ಧನಿಸಲಿ ಎಂದು ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿಟಿ ಪ್ರಕಾಶ್

ಅಪೂರ್ವ ಸ್ನೇಹ ಬಳಗದ ವತಿಯಿಂದ ಮನೆ ಮನೆಗೂ ರಾಮ ಮನ ಮನೆಗೂ ರಾಮ ಚಾಮುಂಡಿಪುರಂ ಸುತ್ತಮುತ್ತ ನಿವಾಸಿಗಳಿಗೆ ಶ್ರೀರಾಮನ ಭಾವಚಿತ್ರ ಹಾಗೂ ಅನತೆ ವಿತರಿಸುವ ಮೂಲಕ ಮನೆಯಲ್ಲೇ ರಾಮ ಜಪ ಮಾಡಿ ಎಂದು ವಿತರಿಸುವ ಮೂಲಕ ಮನವಿ ಮಾಡಿದರು

‘ಪ್ರಧಾನಿ ನರೇಂದ್ರ ಮೋದಿ ಶ್ರೀರಾಮ ದೇಗುಲದ ಶಿಲಾನ್ಯಾಸ ನೆರವೇರಿಸುವರು. ದೇಶದ ಇತಿಹಾಸದಲ್ಲಿ ಮಹತ್ವವಾದ ದಿನವಾಗಿ ದಾಖಲಾಗುತ್ತದೆ. ಪ್ರತಿಯೊಬ್ಬರೂ ಮನೆಯಲ್ಲಿಯೇ ಇದ್ದು ಶಿಲಾನ್ಯಾಸ ಕಾರ್ಯಕ್ರಮದ ನೇರಪ್ರಸಾರ ಕಣ್ತುಂಬಿಸಿಕೊಳ್ಳಬೇಕು. ಶ್ರೀರಾಮ, ಹನುಮನ ಸ್ಮರಣೆ ನಡೆಸಬೇಕು’ ಎಂದರು.

‘ಶಿಲಾನ್ಯಾಸದ ದಿನ ಪ್ರತಿ ಮನೆ, ಮಂದಿರ, ಕಚೇರಿಗಳಲ್ಲಿ ಧಾರ್ಮಿಕ ವಾತಾವರಣ ಸೃಷ್ಟಿಯಾಗಬೇಕು. ತಳಿರು ತೋರಣ, ಹೂವಿನ ಅಲಂಕಾರ, ಭಗವಾನ್ ಧ್ವಜಗಳಿಂದ ಅಲಂಕರಿಸಬೇಕು. ಕಾರ್ಯಕ್ರಮದ ಸಮಯವಾದ ಬೆಳಿಗ್ಗೆ 11-30ರಿಂದ 12-30ರವರೆಗೆ ಮನೆ, ಮಂದಿರ, ದೇವಾಲಯಗಳಲ್ಲಿ ಶ್ರೀರಾಮನಿಗೆ ದೀಪ ಬೆಳಗಬೇಕು. ಅಂದಿನಿಂದ ನಿತ್ಯ ಕನಿಷ್ಠ 10 ಬಾರಿಯಾದರೂ ಶ್ರೀರಾಮ ಜಯರಾಮ ಜಯ ಜಯ ರಾಮ ಮಂತ್ರ ಜಪಿಸಬೇಕು. ಮಠ, ಮಂದಿರ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಅಭಿಷೇಕ ನೆರವೇರಿಸಬೇಕು’ ಎಂದರು.

ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್ ಮಾತನಾಡಿ, ‘ನಗರದ ಪ್ರತಿ ವೃತ್ತಗಳಲ್ಲೂ ಕೇಸರಿ ಧ್ವಜ ಹಾರಿಸಬೇಕು. ಅಂಗಡಿ, ವಾಣಿಜ್ಯ ಸಂಸ್ಥೆ ಮುಂದೆ ಶ್ರೀರಾಮಚಂದ್ರನ ಚಿತ್ರ ಅಂಟಿಸಬಹುದು. ಎಲ್ಲರಿಗೂ ಕೇಸರಿ ಮಾಸ್ಕ್‌ ಧರಿಸುವ ವ್ಯವಸ್ಥೆ ಮಾಡಬೇಕು’ ಎಂದು ಸಲಹೆ ನೀಡಿದರು.

ಸಾಧ್ಯವಾದರೆ ಸ್ನೇಹಿತರೇ ನೀವು
ಪಾದರಕ್ಷೆ ಹಾಕದೇ ಬರೀಗಾಲಿನಲ್ಲಿ ನಡೆಯುವ
ಸಂಕಲ್ಪ ಮಾಡಿ ಸಾರ್ವಜನಿಕರಿಗೆ ಯುವ ಮುಖಂಡ ವಿಕ್ರಮ ಅಯ್ಯಂಗಾರ್ ಎಂದು ಮನವಿ ಮಾಡಿಕೊಂಡರು

ಭರತ ಖಂಡದ ಹೃದಯ ವಿರಾಜಿತ ಪ್ರಭು ಶ್ರೀರಾಮಚಂದ್ರನ ಆಲಯವು ನಮ್ಮ ಎಷ್ಟೋ ಪೂರ್ವಜರ ಕನಸು ಅದಕ್ಕಾಗಿ ಅವರು ಮಾಡದ ವ್ರತಗಳಿಲ್ಲ ಹೋರಾಟಗಳಿಲ್ಲ
ಆ ಕನಸು ನನಸಾಗುತ್ತಿರುವುದು ನಮ್ಮ ಪೂರ್ವ ಜನ್ಮದ ಪುಣ್ಯ.
ಅದಕ್ಕಾಗಿ ನನ್ನ ಅಳಿಲು ಸೇವೆ
ಶ್ರೀರಾಮಚಂದ್ರನ ದೇಗುಲದ ಭೂಮಿಪೂಜೆ ಎರಡು ದಿನ ನಾನು ಪಾದರಕ್ಷೆ ಹಾಕದೇ ಬರೀಗಾಲಿನಲ್ಲಿ ನಡೆಯುವ ಸಂಕಲ್ಪ ಹೊಂದಿರುತ್ತೇನೆ.

ಪ್ರಭು ಶ್ರೀರಾಮಚಂದ್ರರ ಪರಿವಾರಕ್ಕೆ ಜಯವಾಗಲಿ. ಎಂದರು

ಇದೇ ಸಂದರ್ಭದಲ್ಲಿ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿಟಿ ಪ್ರಕಾಶ್ ,ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್ ,ಯುವ ಮುಖಂಡರಾದ ವಿಕ್ರಂ ಅಯ್ಯಂಗಾರ್ ,ಕೇಬಲ್ ಮಹೇಶ್ ,ಮೈಸೂರು ನಗರ ಬಿಜೆಪಿ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ರೇಣುಕಾ ರಾಜ್ , ನರಸಿಂಹರಾಜ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಲೋಹಿತ್ ,ಮಧು ಎನ್, ಪ್ರಶಾಂತ್ ಭಾರದ್ವಾಜ್, ಸುಚೀಂದ್ರ , ಚಕ್ರಪಾಣಿ, ಹರೀಶ್ ನಾಯ್ಡು ,ಮೈಲಾ ವಿಜಯ್ ಕುಮಾರ್ ,ಜಯಸಿಂಹ ಶ್ರೀಧರ್ ,ಹಾಗೂ ಇನ್ನಿತರರು ಹಾಜರಿದ್ದರು


Share