ನಾಳೆ ಆನ್ ಲೈನ್ ನಲ್ಲಿ ದ್ಯಾನ ಕಾರ್ಯಕ್ರಮ

ಪ್ರತ್ಯೇಕವಾಗಿ ಕನ್ನಡದಲ್ಲಿ ಅತಿದೊಡ್ಡ ಉಚಿತ ಆನ್ ಲೈನ್ ಧ್ಯಾನ ಕಾರ್ಯಕ್ರಮ. ವನ್ನು ನಾಳೆ ಸಂಜೆ ಹಮ್ಮಿಕೊಳ್ಳಲಾಗಿದೆ ಎಂದು ಸಹಜಯೋಗ ಸಂಸ್ಥೆಯ ಮುಖ್ಯಸ್ಥರು ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು

ನಮ್ಮ ಸುತ್ತಲಿನ ಜಗತ್ತಿನಲ್ಲಿ ಆಗುತ್ತಿರುವ ಬದಲಾವಣೆಯ ಕಾರಣ ಕಳೆದ ಹಲವು ತಿಂಗಳಿನಿಂದ ಸಾಕಷ್ಟು ಆತಂಕ ,ಅಸಮಾಧಾನ ಭಯವನ್ನು ಎದುರಿಸುತ್ತಿದ್ದೇವೆ. ಬಹುಮುಖ್ಯವಾಗಿ ದೈಹಿಕ ಮಾನಸಿಕ ಕ್ಷೇಮಕ್ಕೆ ಸಂಬಂಧಿಸಿದ ಹಲವಾರು ಪ್ರಶ್ನೆಗಳು ನಮ್ಮನ್ನು ಕಾಡುತ್ತಿದೆ.

ನಿಮಗೆ ಗೊತ್ತೇ?
ನಮ್ಮ ಸೂಕ್ಷ್ಮ ಶರೀರದಲ್ಲಿ ಸಂಗ್ರಹಿಸಿರುವ ಪವಿತ್ರ ಶಕ್ತಿಯ ಜಾಗೃತಿಯಿಂದ ಉತ್ತಮ ಆರೋಗ್ಯ, ಆನಂದ ಸಂಪೂರ್ಣ ಯೋಗ ಕ್ಷೇಮವನ್ನು ನಮ್ಮ ಜೀವನದಲ್ಲಿ ಪಡೆಯಲು ಸಾಧ್ಯ!ಕಳೆದ ಎರಡು ತಿಂಗಳಿನಿಂದ ಸುಮಾರು 3.6 ದಶ ಲಕ್ಷ ಜನ ಸಹಜ ಯೋಗ ಆನ್ ಲೈನ್ ಧ್ಯಾನದಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ.

ಈ ಸರಳ ಹಾಗು ಅಗಾಧವಾದ ಧ್ಯಾನದಿಂದ ಆಗುವ ಲಾಭಗಳು ಲಕ್ಷಾಂತರ ಜನರಿಗೆ ತಲುಪಲಿಯೆಂದು ಸಂಪೂರ್ಣ ಉಚಿತವಾಗಿ ಆನ್ ಲೈನ್ನ್ ಧ್ಯಾನ ಕಾರ್ಯಕ್ರಮವನ್ನು ಕನ್ನಡದಲ್ಲಿ ನಡೆಸುತಿದ್ದೇವೆ. ಎಂದು ಸಹಜಯೋಗ ಸಂಸ್ಥೆಯ ಸಂಚಾಲಕರಾದ ಭಾಗ್ಯಶ್ರೀ ಅವರು ತಿಳಿಸಿದರು

ಸಮಯ: 31 ನೇ ಮೇ, 2020; ಸಂಜೆ 5:00 – 6:00

ಇನ್ನಷ್ಟು ತಿಳಿಯಿರಿ: www.syonline.in