ರಾಹುಗ್ರಸ್ತ ಚೂಡಾಮಣಿ ಸೂರ್ಯಗ್ರಹಣ
ಶ್ರೀ ಶಾರ್ವರಿ ನಾಮ ಸಂವತ್ಸರದ ಜ್ಯೇಷ್ಠ ಕೃಷ್ಣ ಅಮಾವಾಸ್ಯೆ 21-06-2020 ರವಿವಾರ, ಮೃಗಶಿರ ಹಾಗೂ ಆರಿದ್ರಾ ನಕ್ಷತ್ರದಲ್ಲಿ, ಮಿಥುನ ರಾಶಿಯಲ್ಲಿ, ಸಿಂಹ ಮತ್ತು ಕನ್ಯಾ ಲಗ್ನಗಳಲ್ಲಿ , ರಾಹುಗ್ರಸ್ತ ಸೂರ್ಯಗ್ರಹಣ ಸಂಭವಿಸುತ್ತದೆ.
ಗ್ರಹಣ ಸಮಯ : 21/06/2020 ರವಿವಾರ ಸೂರ್ಯೋದಯ ನಂತರ 03 ಗಂಟೆ 19 ನಿಮಿಷಗಳ ಕಾಲ….
ಗ್ರಹಣ ಸ್ಪರ್ಶ ಕಾಲ : ಬೆಳಿಗ್ಗೆ 10-13 am
ಗ್ರಹಣ ಮಧ್ಯ ಕಾಲ : ಬೆಳಿಗ್ಗೆ 11-52 am
ಗ್ರಹಣ ಮೋಕ್ಷ ಕಾಲ : ಮಧ್ಯಾಹ್ನ 01-32 pm
ಗ್ರಹಣವು ಭಾರತ ದೇಶಕ್ಕೆ ಕಾಣಿಸುವುದರಿಂದ ಗ್ರಹಣಾಚರಣೆ ಇರುತ್ತದೆ.
ಜ್ಯೇಷ್ಠ ಮಾಸದ ಕೃಷ್ಣ ಅಮಾವಾಸ್ಯೆ ಯಂದು ರಾಹುಗ್ರಸ್ತ ಚೂಡಾಮಣಿ ಸೂರ್ಯ ಗ್ರಹಣ ಸಂಭವಿಸಲಿದ್ದು, ಸ್ಪರ್ಶ ಕಾಲ 21/06/2020 ಬೆಳಿಗ್ಗೆ 10-13 ರಿಂದ ಪ್ರಾರಂಭವಾಗಿ ಬೆಳಿಗ್ಗೆ 01-32 ಕ್ಕೆ ಮೋಕ್ಷ ಕಾಲವಾಗಿರುತ್ತದೆ.
೧. ಭೋಜನ ವಿಚಾರ :
ತಾ || 20-06-2020 ಶನಿವಾರ ಈ ರಾತ್ರಿ ರಾತ್ರಿ 09-35 ಗಂಟೆಯವರೆಗೂ ಆಹಾರ ಸೇವಿಸಬಹುದು.
೨. ತರ್ಪಣ ವಿಚಾರ :
ತಾ || 21-06-2020 ರವಿವಾರ ಸೂರ್ಯೋದಯಾದಿ ಗ್ರಹಣ ಸ್ಪರ್ಶ ಕಾಲದಿಂದ ಮಧ್ಯಕಾಲದೊಳಗೆ ಅಂದರೆ ಹಗಲು 10-13 ರಿಂದ 11-52 ಗಂಟೆಯವರೆಗೆ ತರ್ಪಣ ಮಾಡುವುದು.
೩. ಶ್ರಾದ್ಧ ವಿಚಾರ : 21-06-2020 ರವಿವಾರ ಗ್ರಹಣವು ಅಪರಾಹ್ನ 01:32 ಗಂಟೆಯವರೆಗೆ ನಡೆಯುವುದರಿಂದ ಆಷಾಢ ಶುಕ್ಲ ಪ್ರಥಮ ಶ್ರಾದ್ಧವನ್ನು ಗ್ರಹಣ ಮೋಕ್ಷ ಕಾಲದ ನಂತರ ನಡೆಸುವುದು.
ಸೂಚನೆ: ಆ ದಿನ ಗ್ರಹಣ ಮೋಕ್ಷ ಕಾಲದವರೆಗೂ ಯಾರೂ ಆಹಾರವನ್ನು ಸ್ವೀಕರಿಸಬಾರದು.
–A Phaneendra Acharya