ನೈರುತ್ಯ ರೈಲ್ವೆ;ರೈಲುಗಳ ನಿಯಂತ್ರಣ/Regulation of trains

795
Share

 

ನೈರುತ್ಯ ರೈಲ್ವೆ

*I. ರೈಲುಗಳ ನಿಯಂತ್ರಣ*

ತಿರುವನಂತಪುರಂ ವಿಭಾಗದ ವ್ಯಾಪ್ತಿಯಲ್ಲಿ ಏಪ್ರಿಲ್-2024 ತಿಂಗಳ ರೈಲ್ವೆ ಸ್ವತ್ತುಗಳ ಅಗತ್ಯ ನಿರ್ವಹಣಾ ಕಾರ್ಯಗಳಿಗಾಗಿ ಈ ಕೆಳಗಿನ ರೈಲು ಸೇವೆಯನ್ನು ನಿಯಂತ್ರಿಸಲು ದಕ್ಷಿಣ ರೈಲ್ವೆಯು ಸೂಚಿಸಿದೆ.

1. ಏಪ್ರಿಲ್ 4 ರಂದು ಮೈಸೂರಿನಿಂದ ಹೊರಡುವ ರೈಲು ಸಂಖ್ಯೆ 16315 ಮೈಸೂರು-ಕೊಚುವೇಲಿ ಎಕ್ಸ್ ಪ್ರೆಸ್ ರೈಲು 185 ನಿಮಿಷಗಳ ಕಾಲ ಮಾರ್ಗದಲ್ಲಿ ನಿಯಂತ್ರಿಸಲಾಗುತ್ತಿದೆ.

2. ಏಪ್ರಿಲ್ 4 ರಂದು ಕೆಎಸ್ಆರ್ ಬೆಂಗಳೂರಿನಿಂದ ಹೊರಡುವ ರೈಲು ಸಂಖ್ಯೆ 16526 ಕೆಎಸ್ಆರ್ ಬೆಂಗಳೂರು-ಕನ್ಯಾಕುಮಾರಿ ಎಕ್ಸ್ ಪ್ರೆಸ್ ರೈಲು 60 ನಿಮಿಷಗಳ ಕಾಲ ಮಾರ್ಗದಲ್ಲಿ ನಿಯಂತ್ರಿಸಲಾಗುತ್ತಿದೆ.

3. ಏಪ್ರಿಲ್ 4, 2024 ರಂದು ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 12684 ಎಸ್ಎಂವಿಟಿ ಬೆಂಗಳೂರು-ಎರ್ನಾಕುಲಂ ಎಕ್ಸ್ ಪ್ರೆಸ್ ರೈಲು 135 ನಿಮಿಷಗಳ ಕಾಲ ಮಾರ್ಗದಲ್ಲಿ ನಿಯಂತ್ರಿಸಲಾಗುತ್ತಿದೆ.

*II. ವಂದೇ ಭಾರತ್ ಎಕ್ಸ್ ಪ್ರೆಸ್ ಗುರುವಾರ ಹೊರತುಪಡಿಸಿ ಎಲ್ಲಾ ದಿನ ಸಂಚಾರ*

ಮೈಸೂರು ಮತ್ತು ತಮಿಳುನಾಡಿನ ಚೆನ್ನೈ ನಿಲ್ದಾಣಗಳ ನಡುವೆ ಸಂಚಾರ ಮಾಡುವ ವಂದೇ ಭಾರತ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 20663/20664) ರೈಲು ಯಾಂತ್ರಿಕ ಕಾರಣಾಂತರಗಳಿಂದ ಬುಧವಾರದ ಬದಲು ಗುರುವಾರ ಚಲಿಸುವುದಿಲ್ಲ.

ಈ ಮೊದಲು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಬುಧವಾರ ಬಿಟ್ಟು ಉಳಿದ ಎಲ್ಲಾ ದಿನಗಳಲ್ಲಿಯೂ ಕಾರ್ಯ ನಿರ್ವಹಿಸುತ್ತಿತ್ತು.

ಜುಲೈ 30, 2024 ರಿಂದ ಜಾರಿಗೆ ಬರುವಂತೆ ಈ ರೈಲುಗಳು ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ ಗುರುವಾರ ಹೊರತುಪಡಿಸಿ ಎಲ್ಲಾ ದಿನಗಳಲ್ಲಿ ಸಂಚಲಿಸಲಿದೆ.

SOUTH WESTERN RAILWAY

*I. Regulation of trains*

Southern Railway has notified the regulation of the following train services due traffic blocks for essential maintenance work on railway assets for the month of April-2024 over Thiruvananthapuram division:

1. Train No. 16315 Mysuru-Kochuveli Express journey commencing on April 4, 2024, from Mysuru will be regulated for 185 minutes.

2. Train No. 16526 KSR Bengaluru-Kanniyakumari Express journey commencing on April 4, 2024, from KSR Bengaluru will be regulated for 60 minutes.

3. Train No. 12684 SMVT Bengaluru- Ernakulam Express journey commencing on April 4, 2024, from SMVT Bengaluru will be regulated for 135 minutes.

*II. Vande Bharat Express to run all days except Thursday*

The Vande Bharat Express (Train No. 20663/20664) running between Mysuru-Dr. MGR Chennai Central stations will not run on Thursdays instead of Wednesdays due to mechanical constraints.

Earlier, the train was running on all days except Wednesdays.

Now the trains will run on all days except Thursdays with effect from July 30, 2024, as per the revised schedule.

 


Share