ನೈರುತ್ಯ ರೈಲ್ವೆ: ಪ್ಯಾಸೆಂಜರ್‌ ರೈಲಿನಲ್ಲಿ ದಾಖಲೆ , ಆದಾಯ

Share

 

ನೈರುತ್ಯ ರೈಲ್ವೆ
: 11.04.2023

*ನೈರುತ್ಯ ರೈಲ್ವೆಯು ದಾಖಲೆ ಪ್ಯಾಸೆಂಜರ್‌- ಆದಾಯ ಮತ್ತು ವಲಯಗಳ ಸಮಯಪಾಲನೆಯಲ್ಲಿ 3ನೇ ಸ್ಥಾನ ಪಡೆದಿದೆ*

*• ನೈರುತ್ಯ ರೈಲ್ವೆಯು ಪ್ಯಾಸೆಂಜರ್‌ ಆದಾಯದಲ್ಲಿ ರೂ. 2,755 ಕೋಟಿ ದಾಖಲೆ ನಿರ್ಮಿಸಿದೆ.*

*• 2022-23ರ ಆರ್ಥಿಕ ವರ್ಷದಲ್ಲಿ 116 ರೈಲುಗಳ ವೇಗವನ್ನು ಹೆಚ್ಚಿಸಲಾಗಿದೆ.*

*• ಭಾರತೀಯ ರೈಲ್ವೆಯ ಎಲ್ಲಾ ವಲಯಗಳ ಪೈಕಿ ನೈರುತ್ಯ ರೈಲ್ವೆಯು ಸಮಯಪಾನೆಯಲ್ಲಿ 93.12ರಷ್ಟು ಪಡೆದು 3ನೇ ಸ್ಥಾನದಲ್ಲಿದೆ.*

ಭಾರತೀಯ ರೈಲ್ವೆಯ ಎಲ್ಲಾ ವಲಯಗಳ ಪೈಕಿ ನೈರುತ್ಯ ರೈಲ್ವೆಯು ಸಮಯಪಾನೆಯಲ್ಲಿ 93.12ರಷ್ಟು ಪಡೆದು 3ನೇ ಸ್ಥಾನದಲ್ಲಿದೆ.

2022-23ರ ಹಣಕಾಸು ವರ್ಷದಲ್ಲಿ ನೈರುತ್ಯ ರೈಲ್ವೆ ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಹೆಚ್ಚಿನ ರೈಲು ಸೇವೆ ಒದಗಿಸುವ ಉದ್ದೇಶದಿಂದ ಹಾಗೂ ಸಮಯಪಾಲನೆಯ ಸುಧಾರಣೆಗಾಗಿ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಭಾರತೀಯ ರೈಲ್ವೆಯ ಎಲ್ಲಾ ರೈಲ್ವೆ ವಲಯಗಳ ಪೈಕಿ ನೈರುತ್ಯ ರೈಲ್ವೆಯು ಸಮಯಪಾಲನೆಯಲ್ಲಿ 3ನೇ ಸ್ಥಾನ ಪಡೆದಿದ್ದು, ಇದು 93.12 ರಷ್ಟಾಗಿದೆ. ಪ್ರಯಾಣಿಕರ ಮೂಲಸೌಕರ್ಯಗಳ ಉನ್ನತೀಕರಣ ಕಾರ್ಯಗಳನ್ನು ಕೈಗೊಂಡ ಹೊರತಾಗಿಯೂ (ಇಂಜಿನಿಯರಿಂಗ್ ಕಾಮಗಾರಿಗಳು ನಿರಂತರವಾಗಿ ನಡೆಯುತ್ತಿದ್ದರೂ ಸಹ) ಸಮಯ ಪಾಲನೆಯಲ್ಲಿ ಅತ್ಯುತ್ತಮ ಸಾಧನೆ ಗೈದಿದೆ.

2022-23ರ ಆರ್ಥಿಕ ವರ್ಷದ ಅವಧಿಯಲ್ಲಿ 116 ರೈಲುಗಳ ವೇಗವನ್ನು ಹೆಚ್ಚಿಸಲಾಗಿದ್ದು, ಒಟ್ಟಾರೆ 2,816 ನಿಮಿಷಗಳ ಸಮಯ ಉಳಿಸಿದಂತಾಗಿದೆ. ವಿದ್ಯುದೀಕರಣದ ವೇಗ ಪಡೆದುಕೊಂಡಿರುವುದರಿಂದ ಮಾಲಿನ್ಯ ಕಡಿಮೆಗೊಳಿಸಲು ಮತ್ತು ಡೀಸೆಲ್ ಉಳಿಸಲು 24 ರೈಲುಗಳನ್ನು ವಿದ್ಯುತ್‌ಗೆ ವರ್ಗಾವಣೆ ಮಾಡಲಾಗಿದೆ.

ರಜೆ ಮತ್ತು ಹಬ್ಬದ ಸಮಯದಲ್ಲಿ ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ 291 ವಿಶೇಷ ರೈಲುಗಳನ್ನು (ಒಟ್ಟು 3,028 ಟ್ರಿಪ್‌ಗಳು) ವಿವಿಧ ಸ್ಥಳಗಳಿಗೆ ಓಡಿಸಲಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ 253 ಬೋಗಿಗಳನ್ನು ಶಾಶ್ವತವಾಗಿ ಮತ್ತು 224 ಬೋಗಿಗಳನ್ನು ತಾತ್ಕಾಲಿಕವಾಗಿ ಹೆಚ್ಚಿಸಲಾಗಿದೆ.

2022-23ರ ಆರ್ಥಿಕ ವರ್ಷದಲ್ಲಿ ನೈರುತ್ಯ ರೈಲ್ವೆ 150.34 ಮಿಲಿಯನ್‌ಗೂ ಹೆಚ್ಚು ಪ್ರಯಾಣಿಕರನ್ನು ಸಾಗಿಸುವ ಮೂಲಕ ರೂ. 2,755.35 ಕೋಟಿ ಆದಾಯ ಗಳಿಸಿದೆ. ನೈರುತ್ಯ ರೈಲ್ವೆ ವಲಯದ ಇತಿಹಾಸದಲ್ಲಿ ಇದು ಸಾರ್ವಕಾಲಿಕ ಅತ್ಯಧಿಕ ಪ್ರಯಾಣಿಕರ ಆದಾಯ ಆಗಿರುತ್ತದೆ.!

“ಪ್ರಯಾಣಿಕರ ಬೇಡಿಕೆಯನ್ನು ಪೂರೈಸಲು ನೈರುತ್ಯ ರೈಲ್ವೆ ಸದಾ ಬದ್ಧವಾಗಿದೆ. ಅಗತ್ಯಕ್ಕೆ ಅನುಗುಣವಾಗಿ ಅನೇಕ ಮಾರ್ಗಗಳಲ್ಲಿ ಹಲವಾರು ವಿಶೇಷ ರೈಲುಗಳ ಹೆಚ್ಚುವರಿ ಸೇವೆಗಳನ್ನು ಒದಗಿಸಿದೆ. ಕಳೆದ ಆರ್ಥಿಕ ವರ್ಷದಲ್ಲಿ 2,330ಕ್ಕೂ ಹೆಚ್ಚು ಬೋಗಿಗಳನ್ನು ಹೆಚ್ಚುವರಿಯಾಗಿ ಜೋಡಿಸಲಾಗಿದೆ” ಎಂದು ಪ್ರಧಾನ ಮುಖ್ಯ ಕಾರ್ಯಾಚರಣೆ ವ್ಯವಸ್ಥಾಪಕ ಶ್ರೀ ಹರಿ ಶಂಕರ್ ವರ್ಮಾ ಹೇಳಿದ್ದಾರೆ.

ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಶ್ರೀ ಸಂಜೀವ್ ಕಿಶೋರ್ ಅವರು ಪ್ರಯಾಣಿಕರ ಬೇಡಿಕೆಯನ್ನು ಪೂರೈಸಲು ಯೋಜನೆ ಮತ್ತು ರೈಲುಗಳನ್ನು ಓಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿ, ಈ ಸಾಧನೆಗೆ ಸಹಕರಿಸಿದ ವಿಭಾಗವನ್ನು ಶ್ಲಾಘಿಸಿದ್ದಾರೆ


Share